twitter
    For Quick Alerts
    ALLOW NOTIFICATIONS  
    For Daily Alerts

    ‘ಶಿವಾಜಿ’ ತಡೆಗೆ ಕರವೇ ರೆಡಿ : ಮೇ.31ರಂದು ಟೆನ್ಷನ್‌!

    By Staff
    |

    ನಿಯಮ ಮುರುಕರಿಗೆ ಪಾಠ ಕಲಿಸುತ್ತೇವೆ. ಕಾವೇರಿ ವಿವಾದ ಭುಗಿಲೆದ್ದಿರುವ ಹೊತ್ತಿನಲ್ಲಿ ‘ಶಿವಾಜಿ’ ತಮಿಳು ಚಿತ್ರದ ಬಿಡುಗಡೆ ಸಾಧುವಲ್ಲ. ಅನಾಹುತವಾದರೇ ನಾವು ಜವಾಬ್ದಾರರಲ್ಲ : ಕರವೇ ಎಚ್ಚರಿಕೆ.

    • ದಟ್ಸ್‌ ಕನ್ನಡ ಸಿನಿ ಡೆಸ್ಕ್‌
    ಬೆಂಗಳೂರು : ಗಾಳಿಯಲ್ಲಿ ಗಿರಗಿರ ತಿರುಗುವ ಕಿಂಗ್‌ಸೈಜ್‌ ಸಿಗರೇಟನ್ನು ಚಕ್‌ ಅಂತ ಹಿಡಿದು ಫಕ್‌ ಅಂತ ಬಾಯಲ್ಲಿ ಸಿಕ್ಕಿಸಿ ‘ಹೇಗಿದೆ ರಾಜಾ?’ ಅಂತ ನಿಮಗೋಸ್ಕರ ಒಂದು ಲುಕ್‌ಕೊಡುವ ಸ್ಟೈಲ್‌ಕಿಂಗ್‌ ರಜನಿಯ ‘ಶಿವಾಜಿ ’ ಚಿತ್ರ ಖಡ್ಗ ಝಳಪಿಸುತ್ತಾ ಕರ್ನಾಟಕ್ಕೆ ಬರುತ್ತಿದೆ!

    ಮೇ 31ನೇ ತಾರಿಖು ಪಿಚ್ಚರ್‌ ರಿಲೀಜ್‌ ಆಗಲಿದೆ ಎಂಬ ವಾರ್ತೆಯೂ ಬಂದಿದ್ದು, ರಜನಿ ಅಭಿಮಾನಿಗಳು ಈಗಾಗಲೇ ತುಂಬಾ ಪುಳಕಗೊಂಡಿದ್ದಾರೆ.. ಸಿನಿಮಾ ಎಲ್ಲೆಲ್ಲಿ ರಿಲೀಜ್‌ ಆಗತ್ತೆ ಅಂತ ಪೇಪರ್‌ನಲ್ಲಿ ಜಾಹೀರಾತು ಹುಡುಕುತ್ತಾ ಇದ್ದಾರೆ.

    ಪಲ್ಲವಿ, ಆದರ್ಶ, ಕಾಮಾಕ್ಯ, ಗೋವರ್ಧನ, ಗೀತಾಂಜಲಿ, ಮಾರುತಿ, ಯೂನಿಯನ್‌, ಪ್ರಸನ್ನ, ವಿನಾಯಕ, ಮೆಜಿಸ್ಟಿಕ್‌, ಮಂದಾರ, ಒಲಿಂಪಿಕ್‌, ವಿಘ್ನೇಶ್ವರ? ಎಲ್ಲಾ ಕಡೆನೂ ಪ್ರದರ್ಶನ ಆಗತ್ತಾ? -ಇಲ್ಲ ಅನಿಸುತ್ತದೆ.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಾನೇ ಮಾಡಿಟ್ಟುಕೊಂಡಿರುವ ಕರಾರಿನ ಪ್ರಕಾರ, ಪರಭಾಷಾ ಚಿತ್ರದ ಕೇವಲ ನಾಲಕ್ಕು ಪ್ರಿಂಟುಗಳು ಕರ್ನಾಟಕಕ್ಕೆ ಪ್ರವೇಶಿಸಬೇಕು. ಪರಭಾಷೆ ಚಿತ್ರಗಳು ಬಿಡುಗಡೆಯಾದ ಏಳು ವಾರಗಳನಂತರವೇ ಕರ್ನಾಟಕದಲ್ಲಿ ಬಿಡುಗಡೆ ಆಗಬೇಕು. ಕನ್ನಡ ಚಿತ್ರಗಳ ಹಿತದೃಷ್ಟಿಯಿಂದ ವರನಟ ಡಾ. ರಾಜ್‌ಕುಮಾರ್‌ ಅವರು ಇದ್ದಾಗಲೇ, ಕನ್ನಡ ಚಿತ್ರೋದ್ಯಮ ತನಗೆ ತಾವೇ ಕೊಟ್ಟುಕೊಂಡ ಮಾತಿದು. ಆದರೆ, ಮಾತಿಗೆ ತಪ್ಪಿದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ ಎನ್ನುತ್ತಾರೆ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ.

    ‘ದಟ್ಸ್‌ ಕನ್ನಡ’ ಜೊತೆ ಬುಧವಾರ ಮಾತನಾಡುತ್ತಿದ್ದ ಅವರಿಗೆ, ‘ಶಿವಾಜಿ’ ಚಿತ್ರದ ನೂರಾರು ಪ್ರಿಂಟ್‌ಗಳು ಕನ್ನಡ ನೆಲದತ್ತ ಧಾವಿಸುತ್ತಿವೆ ಎನ್ನುವ ಸಂಶಯ ಬಂದಿದೆ.

    ನಿಯಮ ಮುರುಕರಿಗೆ ಪಾಠ ಕಲಿಸುತ್ತೇವೆ. ಕಾವೇರಿ ವಿವಾದ ಭುಗಿಲೆದ್ದಿರುವ ಹೊತ್ತಿನಲ್ಲಿ ‘ಶಿವಾಜಿ’ ತಮಿಳು ಚಿತ್ರದ ಬಿಡುಗಡೆ ಸಾಧುವಲ್ಲ. ಸಮಸ್ಯೆ ಇತ್ಯರ್ಥವಾಗುವ ತನಕ ತಮಿಳು ಚಿತ್ರಗಳ ಪ್ರದರ್ಶನಕ್ಕೆ ನಾವು ಅವಕಾಶ ನೀಡುವುದಿಲ್ಲ. ಒಂದು ವೇಳೆ ಬಿಡುಗಡೆ ಮಾಡಿದರೇ, ಮುಂದಿನ ಅನಾಹುತಕ್ಕೆ ನಾವು ಜವಾಬ್ದಾರರಲ್ಲ ಎಂದು ಸ್ಪಷ್ಪಪಡಿಸಿದರು.

    ವಾಣಿಜ್ಯ ಮಂಡಳಿಯ ಕೆಲವರು ಕರ್ನಾಟಕದಲ್ಲಿ ‘ಶಿವಾಜಿ’ ಚಿತ್ರದ ಹಂಚಿಕೆ ಮಾಡುತ್ತಿದ್ದಾರೆ. ಕಾನೂನು ಕಾಯುವ ಮಂಡಳಿಯೇ, ಕಾನೂನು ಮುರಿದರೆ ಹೇಗೆ? ಪರಭಾಷಾ ಚಿತ್ರಗಳು ಕಡ್ಡಾಯವಾಗಿ, ತವರು ನೆಲದಲ್ಲಿ ತೆರೆಕಂಡ ಏಳು ವಾರಗಳ ನಂತರ ಕರ್ನಾಟಕದಲ್ಲಿ ಪ್ರದರ್ಶನಗೊಳ್ಳಬೇಕು. ಈ ನಿಯಮವನ್ನು ನವೆಂಬರ್‌ನಿಂದ ಕಡ್ಡಾಯವಾಗಿ ಜಾರಿ ಗೊಳಿಸುವಂತೆ ವಾಣಿಜ್ಯ ಮಂಡಳಿ ಮೇಲೆ ಒತ್ತಡ ಹಾಕುತ್ತೇವೆ ಎಂದು ಹೇಳಿದರು.

    ರಜನಿ ಚಿತ್ರಗಳ ಜಾಲ : 1992ರಲ್ಲಿ ನಿರ್ಮಾಪಕ ಎಸ್‌.ರಾಮನಾಥನ್‌ ಧರ್ಮ ದೊರೈ ಚಿತ್ರದ ಹಕ್ಕುಗಳನ್ನು ಕರ್ನಾಟಕದ ಹಂಚಿಕೆದಾರರಿಗೆ ಕೇವಲ 4.35ಲಕ್ಷಕ್ಕೆ ನೀಡಿದ್ದರು. ಅಂದು ಆ ಚಿತ್ರ 10ಲಕ್ಷ ರೂ.ಗಳ ವಹಿವಾಟು ನಡೆಸಿತ್ತು. ನಂತರ ‘ಚಂದ್ರಮುಖಿ’ ಮತ್ತು ‘ಬಾಬಾ’ ಚಿತ್ರಗಳನ್ನು ಗಂಗರಾಜು ಕ್ರಮವಾಗಿ 2.20ಕೋಟಿ ಮತ್ತು 1.90ಕೋಟಿಗೆ ಖರೀದಿಸಿದ್ದರು.

    ಪ್ರಸ್ತುತ ‘ಶಿವಾಜಿ’ ಚಿತ್ರದ ಕರ್ನಾಟಕದ ಹಂಚಿಕೆ ಜವಾಬ್ದಾರಿಯನ್ನು ಗಂಗರಾಜು ಹೊತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    Friday, March 29, 2024, 10:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X