ಕೆಂಪೇಗೌಡನಿಗೆ ಓಗೊಟ್ಟು 'ಕೋಟೆ'ಗೆ ಕೈಕೊಟ್ಟ ರಾಗಿಣಿ
ಜೂನಿಯರ್ ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ಅವರ 'ಕೋಟೆ'ಯಿಂದನಟಿ ರಾಗಿಣಿ ಹೊರಬಿದ್ದಿದ್ದಾರೆ. ಅಡ್ವಾನ್ಸ್ ಪಡೆದು, ಸೆಪ್ಟೆಂಬರ್ 25ರಿಂದ 20 ದಿನಗಳ ಕಾಲ್ ಶೀಟನ್ನು ನೀಡಿದ್ದರು. ಆದರೆ ಇದೀಗ 'ಕೆಂಪೇಗೌಡ'ನ ಪ್ರೀತಿಯ ಕರೆಗೆ ಓಗೊಟ್ಟು 'ಕೋಟೆ'ಗೆ ಕೈಕೊಟ್ಟಿದ್ದಾರೆ.
ಈ ಘಟನೆಯಿಂದ ಕಂಗಾಲಾಗಿರುವ ಚಿತ್ರದ ನಿರ್ಮಾಪಕ ಮಂಜುನಾಥ್ ನ್ಯಾಯ ಕೋರಿ ನಿರ್ಮಾಪಕರ ಸಂಘಕ್ಕೆ ಮೊರೆಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಹೊಸ ತಾರೆ ಡಿಂಪಲ್‌ರನ್ನು ಆಯ್ಕೆ ಮಾಡಲಾಗಿದೆ. ತಮ್ಮ ಚಿತ್ರಕ್ಕೆ ಕೈಕೊಟ್ಟ ಕಾರಣ ರಾಗಿಣಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ಮಾಪಕರ ಸಂಘಕ್ಕೆ ಮನವಿ ಮಾಡಿದ್ದಾರೆ.
ಒಂದು ವೇಳೆ ನ್ಯಾಯ ಸಿಗದಿದ್ದರೆ ಪ್ರಬಲ ಹೋರಾಟಕ್ಕೆ ಇಳಿಯುವುದಾಗಿ ನಿರ್ಮಾಪಕ ಮಂಜುನಾಥ್ ಹೇಳಿದ್ದಾರೆ. ರಾಗಿಣಿ ಈಗಾಗಲೆ ಕೆಂಪೇಗೌಡ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟಿನಲ್ಲಿ ಕೋಟೆ ಚಿತ್ರೀಕರಣ ಇಂದು (ಸೆ.17) ಹುಬ್ಬಳ್ಳಿಯಲ್ಲಿ ಶುರುವಾಗಿದೆ.
ವಿವಾದ ಕೋಟೆ ಪ್ರಜ್ವಲ್ ದೇವರಾಜ್ ರಾಗಿಣಿ ಡಿಂಪಲ್ ರಘು ದೀಕ್ಷಿತ್ ರವಿಶಂಕರ್ kote ragini prajwal devaraj dimple raghu dixit ravi shanker


Click it and Unblock the Notifications