ಅಭಿಷೇಕ್ ಮೇಲೆ ಅಂಬರೀಷ್ ಗೆ ಸ್ವಲ್ಪವೂ ಹಿಡಿತವಿಲ್ಲ

ಅಂಬರೀಷ್ ಎಂದರೆ ಚಿತ್ರರಂಗದ ಅನಭಿಷಕ್ತ, ಪ್ರಶ್ನಾತೀತ ದೊರೆ. ಅವರ ಎದುರು ನಿಂತು ಮಾತನಾಡಿದವರು ವಿರಳ. ಹೆಡ್ಡಾಫೀಸಿನ ಸಮಸ್ಯೆಯಿಂದ ಹಿಡಿದು ಗಾಂದಿನಗರದ ಕಾರ್ಮಿಕರ ಒಕ್ಕೂಟದ ತನಕ ಯಾರದೇ ಸಮಸ್ಯೆ ಆದರೂ ನೆರವಿಗೆ ಬರುವ ಅಭಯ ಹಸ್ತ. ರಾಜಕೀಯ ಸಿನಿಮಾ, ಕ್ಲಬ್, ದೇಶ-ವಿದೇಶ, ವ್ಯಾಪಾರ, ಹೊಟೇಲ್, ಬಿಸಿನೆಸ್ಸು, ಕುದುರೆ ಲಾಯ ಎಲ್ಲದರ ಮೇಲೆ ಬಿಗಿಯಾದ ಹಿಡಿತವಿದೆ.
ಎಲ್ಲವರ ಮೇಲೆ, ಎಲ್ಲದರ ಮೇಲೆ ಹಿಡಿತವಿರುವ ಇಂಥ ಅಂಬರೀಶ್ ಗೆ ತಮ್ಮ ಪುತ್ರ ಅಭಿಷೇಕ್ ಮೇಲೆ ಬೆಟ್ಟದಷ್ಟು ಮಮಕಾರವಿದೆಯೇ ಹೊರತೂ ಸಾಸಿವೆ ಕಾಳಿನಷ್ಟು ಹಿಡಿತವಿಲ್ಲ. ಇಡೀ ಕರ್ನಾಟಕ ರಾಜ್ಯದಲ್ಲಿ ಅಂಬಿ ಮಾತನ್ನು ಧಿಕ್ಕರಿಸಿ ನಡೆದ ಇಬ್ಬರೇ ಪ್ರಜೆಗಳೆಂದರೆ ಒಬ್ಬ ಜಗ್ಗೇಶ್, ಮತ್ತೊಬ್ಬ ಅವರ ಸನ್ ಅಭಿಷೇಕ್ ಗೌಡ! ವರದಿ ಬರೆಯುವ ಹೊತ್ತಿಗೆ ಅಭಿಷೇಕ್ ಅಮೇರಿಕಾಕ್ಕೆ ಹೋಗಿ ಆರನೇ ದಿನವಾಯ್ತು. ಇವಿಷ್ಟು ವರದಿಯಲ್ಲಿನ ಅಂಶಗಳು. (ಒನ್ ಇಂಡಿಯಾ ಕನ್ನಡ)
More from Filmibeat
English summary
Because of a report published on the love affair of Ambarish and actress Sumalatha son Abhisekh in the latest issue.Rebel Star Ambarish fans ransacks the office of the famous Kannada tabloid ‘Lankesh Patrike’ owned by Indrajit Lankesh on Saturday (Oct 15) morning.
ಅಂಬರೀಷ್ ಅಪರಾಧ ಬೆಂಗಳೂರು ಲಂಕೇಶ್ ಪತ್ರಿಕೆ ಇಂದ್ರಜಿತ್ ಲಂಕೇಶ್ ambareesh crime bangalore lankesh patrike indrajit lankesh


Click it and Unblock the Notifications











