ಅಂಬಿ ಮಗನ ಫಾರಿನ್ ಪ್ರಣಯ ಸವಿಸ್ತಾರ ವರದಿ

ಅಂಬರೀಷ್ ಪುತ್ರ ಎಲ್ಲಿ ಅಂತ ಮೈಕ್ರೋಸ್ಕೋಪ್ ಹಾಕಿದರೆ ಕ್ರೈಸ್ಟ್ ಕಾಲೇಜ್ ನ ವ್ಯಾಸಂಗ ಬಿಟ್ಟು ಅಮೆರಿಕಾಕ್ಕೆ ಹೋಗಿದ್ದಾನೆ ಸ್ನೇಹಿತರ ಜೊತೆ ಅಂತ ಗೊತ್ತಾಗುತ್ತಿದೆ. ಅಭಿಷೇಕ್ ಅಪ್ಪ-ಅಮ್ಮಂದಿರಿಂದ ಮುನಿದು ಹೋಗಿದ್ದಾನೆ. ಇತ್ತ ಅಭಿಯನ್ನು ಇಷ್ಟಪಡುತ್ತಿರುವ ಮಿಸ್ ಇಂಡಿಯಾ ಸುಂದರಿ ನಿಕೋಲೆ ಫರಾಯಿ ಕೂಡ ಅಮೆರಿಕಾಕ್ಕೆ ಹೋಗಿದ್ದಾಳೆ-ಅಂಬಿ ಪುತ್ರ ಬೆಂಗಳೂರು ಬಿಟ್ಟ ದಿನವೇ.
ನಿಕೋಲಾಳ ಸೋದರ ಕ್ರೆಗ್ ಎಷ್ಟು ಆತಂಕಕಾರಿಯಾಗಿ ಮಾತಾಡುತ್ತಾನೋ, ಅಷ್ಟೇ ಗಾಬರಿಯಿಂದ ಅಭಿಷೇಕ್ ಸ್ನೇಹಿತರೂ ವರ್ತಿಸುತ್ತಿದ್ದಾರೆ. ಬಾಲಗಂಗಾಧರನಾಥರ ಜೀವನ ಚರಿತ್ರೆಯ ಸಿನಿಮಾದಲ್ಲಿ ನಟಿಸಬೇಕಿದ್ದ ಅಂಬಿ ಶೆಡ್ಯೂಲ್ ಕ್ಯಾನ್ಸಲ್ ಮಾಡಿ, ಈಜಿಪ್ಟ್ ಗೆ ಹೊರಟು ನಿಂತಿದ್ದಾರೆ. ಅಭಿಷೇಕ್, ನಿಕೋಲಾ ಬೇಕು ಅಂತ ಹಠ ಹೂಡಿದ್ದಾನಾ? ಇವರಿಬ್ಬರ ಗುಪ್ತ ಪ್ರಣಯ ಯಾವ ಹಂತದಲ್ಲಿದೆ. ಅಂಬಿ ಘನತೆಯನ್ನು ಅಭಿ ಕಾಪಾಡುತ್ತಾನಾ?'
ಇನ್ನು ವರದಿಯಲ್ಲಿ ಅಂಬಿ ಮಗ ಅಭಿಯ ದಿನಚರಿ, ಸ್ವಭಾವ, ನಡೆ-ನುಡಿಯ ಬಗ್ಗೆ ಬರೆಯಲಾಗಿದೆ. ಜೊತೆಯಲ್ಲಿ ಆತ ಲವ್ ಮಾಡುತ್ತಿದ್ದಾನೆ ಎನ್ನಲಾಗಿರುವ ನಿಕೋಲೇ ಫರಿಯಾ ಬಗ್ಗೆ ಕೂಡ ಮಾಹಿತಿ ಇದೆ. ಜೊತೆಯಲ್ಲಿ ಅಭಿಯ ಅಪ್ಪ ಮಂಡ್ಯದ ಗಂಡು ಖ್ಯಾತಿಯ ರೆಬಲ್ ಸ್ಟಾರ್ ಅಂಬರೀಷ್ ಹಾಗು ಅವರ ಪತ್ನಿ ಸುಮಲತಾ ಮೇಲೆ ಬೆಳಕು ಚೆಲ್ಲಲಾಗಿದೆ. ಅವುಗಳ ಸಾರಾಂಶಕ್ಕೆ ಮುಂದೆ ನೋಡಿ....


Click it and Unblock the Notifications











