ತಾರೆ ಜೆನಿಲಿಯಾ ವಿರುದ್ಧ ಚೀಟಿಂಗ್ ಕೇಸ್ ದಾಖಲು
ಇತ್ತೀಚೆಗಷ್ಟೇ ಮದುವೆಯಾಗಿ ಸುಖ ದಾಂಪತ್ಯಕ್ಕೆ ಅಡಿಯಿಟ್ಟಿರುವ ಸಿನಿಮಾ ತಾರೆ ಜೆನಿಲಿಯಾ ಡಿಸೋಜಾ ಭಾರಿ ಹಗರಣವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಜೆನಿಲಿಯಾ ವಿರುದ್ಧ ಚೀಟಿಂಗ್ ಕೇಸು ದಾಖಲಿಸುವಂತೆ ಹೈದರಾಬಾದ್‌ನ ಸ್ಥಳೀಯ ನ್ಯಾಯಾಲಯ ಸೈಫಾಬಾದ್ ಪೊಲೀಸರಿಗೆ ಆದೇಶಿಸಿದೆ. ಸುದ್ದಿಯ ಪೂರ್ಣ ವಿವರಗಳನ್ನು ಮುಂದೆ ಓದಿ...
ಡೂಪ್ಲೆಕ್ಸ್ ಮನೆ ಕಟ್ಟಿಸಿಕೊಡುವುದಾಗಿ ನಂಬಿಸಿ ಹಣ ಪಡೆದ ರಿಯಲ್ ಎಸ್ಟೇಟ್ ಕಂಪನಿಯೊಂದು ಗ್ರಾಹಕರೊಬ್ಬರಿಗೆ ಮೋಸ ಮಾಡಿದೆ ಎಂದ ಆರೋಪಗಳು ಕೇಳಿಬಂದಿವೆ. ಆ ಕಂಪನಿಯ ಪ್ರಚಾರ ರಾಯಭಾರಿಯಾಗಿರುವ ಜೆನಿಲಿಯಾ ಹಾಗೂ ನಿರ್ದೇಶಕರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಸಂಬಂಧ ಕೋರ್ಟ್ ಕೇಸು ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ.
ಅಂಜನಿಪುತ್ರ ಇನ್ಫ್ರಾಸ್ಟ್ರಕ್ಚರ್ ಪ್ರೈ.ಲಿ ಎಂಬ ರಿಯಲ್ ಎಸ್ಟೇಟ್ ಕಂಪನಿ ತಿರುಪತಯ್ಯ ಎಂಬುವವರಿಂದ ರು.48 ಲಕ್ಷ ಹಣವನ್ನು ಮುಂಗಡವಾಗಿ ಪಡೆದಿತ್ತು. ಡೂಪ್ಲೆಕ್ಸ್ ಮನೆಯ ಅಸಲಿ ಬೆಲೆ ರು.54 ಲಕ್ಷಗಳು. ಆದರೆ ತಿರುಪತಯ್ಯನವರಿಗೆ ಮನೆ ಕಟ್ಟಿಸಿಕೊಡುವಲ್ಲಿ ಕಂಪನಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಕೋರ್ಟ್ ಮೆಟ್ಟಿಲೇರಿದ್ದರು.
ಈಗ ಕೋರ್ಟ್ ಜೆನಿಲಿಯಾ ಸೇರಿದಂತೆ ಕಂಪನಿಯ ಮೇನೇಜಿಂಗ್ ಡೈರೆಕ್ಟರ್ ಸುಜಿತ್ ರೆಡ್ಡಿ ಹಾಗೂ ನಿರ್ದೇಶಕರಾದ ಸುದರ್ಶನ್ ಕುಮಾರ್ ರೆಡ್ಡಿ, ವೆಂಕಟರಮಣ ರೆಡ್ಡಿ ಮತ್ತು ವೈ ಸತ್ಯ ಎಂಬುವವರ ಮೇಲೆ ಕೇಸು ದಾಖಲಿಸುವಂತೆ ಆದೇಶಿಸಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420 (ಚೀಟಿಂಗ್), 406 (ನಂಬಿಕೆ ದ್ರೋಹ), 120-B (ಒಳಸಂಜು) ಹಾಗೂ 506 (ಜೀವಬೆದರಿಕೆ) ಕೇಸ್‌ಳು ದಾಖಲಾಗಿವೆ. (ಏಜೆನ್ಸೀಸ್)


Click it and Unblock the Notifications











