ಕಳ್ಳತನ ಆರೋಪದಿಂದ ಗೋವಿಂದಾಯ ನಮಃ ಮುಕ್ತ

By Rajendra

ಗೋವಿಂದನ ಮೇಲಿನ ಕಳ್ಳತನ ಆರೋಪ ಸುಳ್ಳಾಗಿದೆ. ನಮ್ದುಕೆ ಕತೆ ಕದ್ದಿಲ್ಲ ಎಂದು ಗೋವಿಂದ ಗೆಲುವಿನ ನಗೆ ಬೀರಿದ್ದಾನೆ. 'ಗೋವಿಂದಾಯ ನಮಃ' ಚಿತ್ರದ ಕತೆ ನಮ್ಮದು. ತಮ್ಮ ಚಿತ್ರದ 'ಅವ್ನಂದ್ರೆ ಅವ್ನೆ' ಕತೆಯನ್ನು ಕದ್ದು 'ಗೋವಿಂದಾಯ ನಮಃ' ಚಿತ್ರ ಮಾಡಿದ್ದಾರೆ ಎಂದು ವೇಣುಗೋಪಾಲ ಎಂಬುವವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.

ಈ ಸಂಬಂಧ ಚಲನಚಿತ್ರ ನಿರ್ದೇಶಕರ ಸಂಘ ಎರಡೂ ಚಿತ್ರಗಳನ್ನು ವೀಕ್ಷಿಸಿದೆ. 'ಗೋವಿಂದಾಯ ನಮಃ' ಚಿತ್ರದ ಕತೆ ಕದ್ದ ಕತೆಯಲ್ಲ. ಈ ಚಿತ್ರಕ್ಕೂ 'ಅವ್ನಂದ್ರೆ ಅವನೇ' ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತೀರ್ಮಾನಿಸಿದೆ. 2005ರಲ್ಲಿ ತೆರೆಕಂಡಿದ್ದ 'ಅವ್ನಂದ್ರೆ ಅವ್ನೆ' ಚಿತ್ರದ ಪ್ರೇರಣೆಯಿಂದಲೂ 'ಗೋವಿಂದಾಯ ನಮಃ' ಚಿತ್ರ ತೆಗೆದಿಲ್ಲ ಎಂದಿದ್ದಾರೆ ಕರ್ನಾಟಕ ಚಲನಚಿತ್ರ ಲೇಖರ ಸಂಘದ ಅಧ್ಯಕ್ಷ ಕೆ.ನಂಜುಂಡ.

ಈ ಆರೋಪದಿಂದ ನಿರ್ದೇಶಕ ಪವನ್ ಒಡೆಯರ್ ಅವರಿಗೂ ತೀರಾ ಮುಜುಗರವಾಗಿದೆಯಂತೆ. ಜನ ನಮ್ಮನ್ನು ಅನುಮಾನದಿಂದ ನೋಡುವಂತಾಗಿದೆ. ಕತೆ ಕದ್ದ ಆರೋಪ ಮಾಡಿದ ವೇಣುಗೋಪಾಲ್ ನಮ್ಮನ್ನು ಬೇಷರತ್ ಕ್ಷಮೆಯಾಚಿಸಬೇಕು ಎಂದಿದ್ದಾರೆ. ಇದರ ಹಿಂದೆ ಯಾವುದೋ ಷಡ್ಯಂತ್ರ ಇರುವ ಬಗ್ಗೆಯೂ ಪವನ್ ಅನುಮಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

More from Filmibeat

English summary
Kannada movie Govindaya Namaham rules out plagiarism charges. Director Venugopal has claims that 'Govindaya Namaha' has a lot similar to his film Avnandre Avanena (2005). The director lodged a complaint with the directors association.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X