For Quick Alerts
  ALLOW NOTIFICATIONS  
  For Daily Alerts

  ಕಂಡುಕೇಳರಿಯದ ಮೊತ್ತಕ್ಕೆ ಅಣ್ಣಾಬಾಂಡ್ ಸೋಲ್ಡ್ ಔಟ್

  |

  ಡಾ. ರಾಜಕುಮಾರ್ ಸ್ವಂತ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ 80ನೇ ಚಿತ್ರ, ಸೂರಿ ನಿರ್ದೇಶನದ ಮತ್ತು ಪುನೀತ್ ರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಅಣ್ಣಾಬಾಂಡ್ ಚಿತ್ರ ಬಿಡುಗಡೆಗೆ ಮುನ್ನವೇ ಭಾರೀ ಸದ್ದು ಮಾಡಿದೆ. ಕನ್ನಡ ಚಿತ್ರರಂಗ ಕಂಡು ಕೇಳರಿಯದ ಮೊತ್ತಕ್ಕೆ ಅಣ್ಣಾಬಾಂಡ್ ಚಿತ್ರದ ಡಿಸ್ತ್ರಿಬ್ಯೂಷನ್ ಹಕ್ಕು ಮಾರಾಟವಾಗಿದೆ.

  ಗಾಂಧಿನಗರದ ಮಂದಿಗಳು ಮೂಗಿಗೆ ಬೆರಳಿಡುವಂತೆ ಮಾಡಿದೆ ಚಿತ್ರದ ವಿತರಣೆ ಹಕ್ಕಿಗೆ ಬಂದ ಮೊತ್ತ. ಖಚಿತ ಮಾಹಿತಿಗಳ ಪ್ರಕಾರ ಅಣ್ಣಾಬಾಂಡ್ ಚಿತ್ರ 15 ಕೋಟಿ ರೂಪಾಯಿಗೆ ವಿತರಕ ಪ್ರಸಾದ್ ಎನ್ನುವವರು ಖರೀದಿಸಿದ್ದಾರಂತೆ. ಪ್ರಸಾದ್ ದರ್ಶನ್ ಅಭಿನಯದ ಬಹು ನಿರೀಕ್ಷಿತ 'ಚಿಂಗಾರಿ' ಚಿತ್ರದ ವಿತರಕರು ಕೂಡಾ.

  ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆಗೊಂಡ ಸುದೀಪ್ ಅಭಿನಯದ ವಿಷ್ಣುವರ್ಧನ ಚಿತ್ರದ ಮೈಸೂರು ಪ್ರಾಂತ್ಯದ ಹಕ್ಕನ್ನು ಪಡೆದಿದ್ದ ಪ್ರಸಾದ್, ಈ ಚಿತ್ರಕ್ಕೆ ಬಂದ ಉತ್ತಮ ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿ ಎರಡು ದೊಡ್ಡ ಬಜೆಟ್ ನ ಚಿತ್ರಗಳಾದ ಅಣ್ಣಾಬಾಂಡ್ ಮತ್ತು ಚಿಂಗಾರಿ ಚಿತ್ರದ ಹಕ್ಕನ್ನು ಪಡೆದುಕೊಂಡಿದ್ದಾರೆ.

  15 ಕೋಟಿ ರೂಪಾಯಿ ಬರೀ ಚಿತ್ರದ ವಿತರಣೆ ಹಕ್ಕಿಗೆ ಮಾತ್ರ. ಇನ್ನು ಆಡಿಯೋ, ಟಿವಿ ರೈಟ್ಸ್ ಎಷ್ಟಕ್ಕೆ ಮಾರಾಟವಾಗಿದೆಯೋ ತಿಳಿಯದು. ಆದರೆ ಮಹೂರ್ತಕ್ಕೆ ಮುನ್ನವೇ ಚಿತ್ರದ ಸ್ಯಾಟಿಲೈಟ್ಸ್ ಹಕ್ಕು ಮಾರಾಟವಾಗಿದೆ ಎನ್ನುವ ಸುದ್ದಿ ನಮ್ಮ ತಾಣದಲ್ಲಿ ಪ್ರಕಟವಾಗಿತ್ತು.

  ಚಿತ್ರರಂಗಕ್ಕೆ ಅಷ್ಟೇನೂ ಪರಿಚಿತರಲ್ಲದ ಪ್ರಸಾದ್ ಮೂಲತಃ ವಕೀಲರು. ಅಣ್ಣಾಬಾಂಡ್ ಮತ್ತು ಚಿಂಗಾರಿ ಚಿತ್ರದ ಡಿಸ್ತ್ರಿಬ್ಯೂಷನ್ ರೈಟ್ಸ್ ತನ್ನ ಪಾಲಾಗಿರುವುದನ್ನು ಸ್ಪಷ್ಟ ಪಡಿಸಿರುವ ಪ್ರಸಾದ್ ಎಷ್ಟು ಮೊತ್ತಕ್ಕೆ ಎಂದು ಹೇಳಲು ನಿರಾಕರಿಸಿದ್ದಾರೆ.

  English summary
  Puneet Rajkumar and Suri's combo movie has once again set a new benchmark. Sources say that the distribution rights of Anna Bond have been sold for an earth-shattering price. Film reportedly sold for Rs.15 crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X