ಸಿದ್ದಾರ್ಥ್‌ಗೆ ಕೈಕೊಟ್ಟಳೆ ದೀಪಿಕಾ? ವೇಕಪ್ ಸಿದ್!

ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಷರ್ ಏರ್‌ಲೈನ್ಸ್ ಪತನದ ಹಾದಿಯಲ್ಲಿ ಸಾಗುತ್ತಿರುವುದೇ ಅವರಿಬ್ಬರ ಪ್ರೇಮವಿಮಾನ ನೆಲಕಚ್ಚಲು ಕಾರಣವಾಗಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ಕಿಂಗ್ ಫಿಷರ್‌ನ ರೆಕ್ಕೆಗಳು ಕತ್ತರಿಸಿ ಬಿದ್ದಿರುವುದೊಂದೇ ಕಾರಣವಲ್ಲ, ಸಿದ್‌ನ ಬಿಂದಾಸ್ ಬದುಕು, ಕಿಂಗ್ ಫಿಷರ್ ನಂಥ ಬಣ್ಣದ ಹಕ್ಕಿಗಳಿಗೆ ಗಾಳ ಹಾಕುವಲ್ಲಿ ಸಿದ್ಧಹಸ್ತನಾಗಿರುವ ಸಿದ್ದುಗೆ ಚೆಂದುಳ್ಳಿ ಚೆಲುವೆಯರ ಬಗ್ಗೆ ಇರುವ 'ವಿಶೇಷ' ಕಾಳಜಿ ದೀಪಿಕಾ ಮಲ್ಯನಿಗೆ ಕೈಕೊಡಲು ಕಾರಣ ಎನ್ನಲಾಗಿದೆ.
ಸೋಫಿ ಚೌಧರಿ ಎಂಬ ಬಿಕಿನಿ ಸುಂದರಿಯ ಜೊತೆ ಸಿದ್ದಾರ್ಥ್ ಮಲ್ಯ ಹೆಚ್ಚು ಆತ್ಮೀಯತೆಯಿಂದ ನಡೆದುಕೊಂಡಿದ್ದಕ್ಕೆ ಕಣ್ಣು ಕೆಂಪಗೆ ಮಾಡಿಕೊಂಡಿದ್ದ ದೀಪಿಕಾ ಪಡುಕೋಣೆ ಪ್ರಿಯತಮನಿಗೆ ಇದು ಹೀಗೇ ಮುಂದುವರಿದರೆ ಸಂದಾಗಿರಾಕಿಲ್ಲ ಅಂತ ಎಚ್ಚರಿಕೆ ನೀಡಿದ್ದಳು. ಇತ್ತೀಚೆಗೆ ಬಾಲಿ ದ್ವೀಪಕ್ಕೆ ರಜಾ ದಿನಗಳನ್ನು ಕಳೆಯಲೆಂದು ಹೋಗಿದ್ದ ಪ್ರಣಯಪಕ್ಷಿಗಳಿಬ್ಬರೂ ಅಲ್ಲೇ ಕಿತ್ತಾಡಿಕೊಂಡ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
ಇಬ್ಬರು ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲ ಪ್ರಾಮಿಸ್ ನಗೆ ಬೀರುತ್ತಾರಾದರೂ ಒಳಗೊಳಗೇ ಏನೋ ನಡೀತಿದೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ ಎಂದು ಬಲ್ಲವರು ಪಿಸುಪಿಸು ಆಡಿಕೊಳ್ಳುತ್ತಿದ್ದಾರೆ. ಐಪಿಎಲ್ 3 ಫೈನಲ್ ಪಂದ್ಯದಲ್ಲಿ ಸಿದ್ದಾರ್ಥ್ ನಿಂದ ಓಪನ್ ಆಗಿಯೇ ಕಿಸ್ ಕೊಡಿಸಿಕೊಂಡಿದ್ದ ದೀಪಿಕಾ, ಶೂಟಿಂಗು ಪಾಟಿಂಗು ಹಾಳು ಮೂಳು ಅಂತ ನೆವ ಹೇಳಿ ಸಿದ್ದಾರ್ಥ್‌ನಿಂದ ಇಂಚಿಂಚು ದೂರ ಸರಿಯುತ್ತಿದ್ದಾಳೆ ಎಂಬ ಮಾಹಿತಿ ಇದೆ. ವೇಕಪ್ ಸಿದ್!


Click it and Unblock the Notifications