»   » ‘ಮ್ಯಾಕ್ಸಿಮ್‌’ಗಾಗಿ ಮ್ಯಾಕ್ಸಿಮಮ್‌ ತೆರೆದುಕೊಂಡ ಮಲ್ಲಿಕಾ

‘ಮ್ಯಾಕ್ಸಿಮ್‌’ಗಾಗಿ ಮ್ಯಾಕ್ಸಿಮಮ್‌ ತೆರೆದುಕೊಂಡ ಮಲ್ಲಿಕಾ

Subscribe to Filmibeat Kannada

‘ಮ್ಯಾಕ್ಸಿಮ್‌’ ಮ್ಯಾಗಜಿನ್‌ಗಾಗಿ ಬಾಲಿವುಡ್‌ ಹಾಟ್‌ ಬ್ರಾಂಡ್‌ ಮಲ್ಲಿಕಾ ಶೇರಾವತ್‌ ಪ್ರಪ್ರಥಮ ಬಾರಿಗೆ ಅತ್ಯಂತ ಬೋಲ್ಡಾಗಿ ಕಾಣಿಸಿಕೊಂಡು ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಖ್ವಾಯಿಶ್‌, ಮರ್ಡರ್‌ ಮುಂತಾದ ಚಿತ್ರಗಳಲ್ಲಿ ಸುದೀರ್ಘ ಚುಂಬನ ದೃಶ್ಯಗಳಲ್ಲಿ ಮಲ್ಲಿಕಾ ಕಾಣಿಸಿಕೊಂಡಿದ್ದರೂ ಇಷ್ಟೊಂದು ಬೋಲ್ಡಾಗಿ ಎಂದೂ ಕಾಣಿಸಿಕೊಂಡಿರಲಿಲ್ಲ. ಮ್ಯಾಕ್ಸಿಮ್‌ನ 2007ರ ಜನವರಿ ತಿಂಗಳ ಕವರ್‌ ಪೇಜ್‌ನಲ್ಲಿ ಹಿಂದೆಂದಿಗಿಂತಲೂ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ.

ಇವರಿಗೆ ನೀಡಲಾದ ಮಿನಿ ಲೆದರ್‌ ಬಿಕನಿಗೆ ಹೊಂದಿಕೊಳ್ಳುವುದಕ್ಕಾಗಿ ಮಲ್ಲಿಕಾ ವಿಶೇಷ ಡಯಟ್‌ನಲ್ಲಿದ್ದರು.

ಜೀವನದಲ್ಲಿ ಇಲ್ಲಿಯವರೆಗೆ ಏಕಾಂಗಿಯಾಗಿರುವುದು ಮಲ್ಲಿಕಾಗೆ ಸಂತಸ ತಂದಿಲ್ಲ. ಇನಿಯನ ಹುಡುಕಾಟದಲ್ಲಿರುವ ಅವರು ಇಲ್ಲಿಯವರೆಗೆ ಯಾವುದೇ ಪೋರ್ನ್‌ ವಿಡಿಯೋ ಅಥವ ಯಾವುದೇ ಎಂಎಂಎಸ್‌ ನೋಡಿಲ್ಲ ಎಂದು ಘಂಟಾಘೋಷವಾಗಿ ಮಲ್ಲಿಕಾ ಸಾರಿದ್ದಾರೆ. ವಯಸ್ಸಾದ ಮೇಲೆ ಅವನ್ನೆಲ್ಲ ನೋಡುವುದಾಗಿ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ ಮಲ್ಲಿಕಾ ಪುಟ್ಟಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada