»   » ಶಿಲ್ಪಾ ಶೆಟ್ಟಿಗೆ ಕೇಂದ್ರ ಸರ್ಕಾರದಿಂದ ಸಾಂತ್ವನ

ಶಿಲ್ಪಾ ಶೆಟ್ಟಿಗೆ ಕೇಂದ್ರ ಸರ್ಕಾರದಿಂದ ಸಾಂತ್ವನ

Posted By:
Subscribe to Filmibeat Kannada


ನವದೆಹಲಿ : ನಟಿ ಶಿಲ್ಪಾ ಶೆಟ್ಟಿ ಮೇಲೆ ನಡೆದಿದೆ ಎನ್ನಲಾದ ವರ್ಣಬೇಧ ಅಕ್ರಮಣದ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವಿದೇಶಾಂಗ ಖಾತೆಯ ರಾಜ್ಯ ಸಚಿವ ಆನಂದ್‌ ಶರ್ಮ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಮಾಹಿತಿ ಸಂಗ್ರಹಿಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದ್ದೇವೆ ಎಂದರು.

ವರ್ಣಬೇಧ ನೀತಿಯನ್ನು ಭಾರತ ವಿರೋಧಿಸುತ್ತಾ ಬಂದಿರುವುದು ಇಡೀ ವಿಶ್ವಕ್ಕೆ ಗೊತ್ತಿದೆ. ಶಿಲ್ಪಾ ಶೆಟ್ಟಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಏನಿದು ಶಿಲ್ಪಾ ಮೇಲಿನ ದೌರ್ಜನ್ಯ? :

ಬ್ರಿಟನ್‌ ದೇಶದ ರಿಯಾಲಿಟಿ ಟೀವಿ ಕಾರ್ಯಕ್ರಮ ‘ಸೆಲೆಬ್ರಿಟಿ ಬಿಗ್‌ ಬ್ರದರ್‌’ ನಲ್ಲಿ ಶಿಲ್ಪಾ ಶೆಟ್ಟಿ ಪ್ರಸ್ತುತ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನಾಲ್ಕಾರು ಜನ ಒಟ್ಟಿಗೆ ಒಂದೆಡೆ ವಾಸ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಜೊತೆ, ಸಹ ಸ್ಪರ್ಧಿಗಳು ಅಸಭ್ಯವಾಗಿ ವರ್ತಿಸಿದ್ದಾರೆ.

ಶಿಲ್ಪಾಗೆ ಸರಿಯಾದ ಇಂಗ್ಲಿಷ್‌ ಗೊತ್ತಿಲ್ಲ ಎಂದು ಒಬ್ಬಾಕೆ ರೇಗಿಸಿದರೆ, ಶಿಲ್ಪಾ ಹೆಸರು ವಿಚಿತ್ರವಾಗಿರುವುದರಿಂದ ಆಕೆಯನ್ನು ಇಂಡಿಯನ್‌ ಎಂದು ಕರೆಯುತ್ತೇನೆ ಎಂದು ಇನ್ನೊಬ್ಬಾಕೆ ಲೇವಡಿ ಮಾಡಿದ್ದಾಳೆ. ನಾಯಿ ಎಂದು ಶಿಲ್ಪಾರನ್ನು ಸಂಭೋದಿಸಿ ಮತ್ತೊಬ್ಬಾಕೆ ಗೇಲಿ ಮಾಡಿದ್ದಾಳೆ. ಈ ಬಗ್ಗೆ ಶಿಲ್ಪ ತಮ್ಮ ಸಂಕಷ್ಟವನ್ನು ಮಾಧ್ಯಮದ ಮುಂದೆ ಹೇಳಿಕೊಂಡು ಕಣ್ಣೀರು ಸುರಿಸಿದ್ದರು.

(ಏಜನ್ಸೀಸ್‌)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada