»   » ‘ಮಲ್ಲ’ನಿಗೆ ಮಡಿವಾಳರ ಬಹಿಷ್ಕಾರ

‘ಮಲ್ಲ’ನಿಗೆ ಮಡಿವಾಳರ ಬಹಿಷ್ಕಾರ

Posted By:
Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೊ
ರವಿಚಂದ್ರನ್‌ ಅಭಿನಯದ ‘ಮಲ್ಲ’ ಕನ್ನಡ ಚಿತ್ರದಲ್ಲಿ ಮಡಿವಾಳ ಜನಾಂಗವನ್ನು ಕೀಳಾಗಿ ಚಿತ್ರಿಸಲಾಗಿದೆ ಎಂದು ಮಾಚಿದೇವ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.

ಮಡಿವಾಳ ಸಮುದಾಯದವರ ಮನಸ್ಸಿಗೆ ನೋವುಂಟು ಮಾಡುವ ದೃಶ್ಯಗಳನ್ನು ಒಳಗೊಂಡಿರುವ ‘ಮಲ್ಲ’ ಚಿತ್ರದ ವಿರುದ್ಧ ಮಡಿವಾಳ ಜನಾಂಗದ ಸದಸ್ಯರು ದಾವಣಗೆರೆಯಲ್ಲಿ ಇತ್ತೀಚೆಗೆ ಬೃಹತ್‌ ಮೆರವಣಿಗೆ ನಡೆಸಿದರು. ರವಿಚಂದ್ರನ್‌ ಅವರ ಪ್ರತಿಕೃತಿಯನ್ನು ಸುಟ್ಟ ಪ್ರತಿಭಟನಾಕಾರರು, ರವಿಚಂದ್ರನ್‌ ಮಡಿವಾಳ ಸಮುದಾಯಕ್ಕೆ ಅವಮಾನ ಮಾಡಿರುವುದು ಮಾತ್ರವಲ್ಲದೆ ಮಹಿಳೆಯನ್ನೂ ಕೀಳಾಗಿ ಚಿತ್ರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಲ್ಲ’ ಚಿತ್ರದಲ್ಲಿನ ದೃಶ್ಯಗಳಿಂದ ರಾಜ್ಯದ 18 ಲಕ್ಷ ಮಡಿವಾಳರಿಗೆ ಅವಮಾನವಾಗಿದೆ. ಮಡಿವಾಳ ಸಮಾಜ ರವಿಚಂದ್ರನ್‌ ಚಿತ್ರಗಳನ್ನು ಬಹಿಷ್ಕರಿಸುತ್ತದೆ. ರವಿಚಂದ್ರನ್‌ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳ ಎದುರು ಪ್ರತಿಭಟನೆ ನಡೆಸಲಾಗುವುದು. ಪೋಸ್ಟರ್‌ ಕಿತ್ತೆಸೆಯುವುದು ಸೇರಿದಂತೆ ಇನ್ನಿತರ ರೀತಿಯ ಪ್ರತಿಭಟನೆಗಳನ್ನೂ ಹಮ್ಮಿಕೊಳ್ಳಲಾಗುವುದು ಎಂದು ಮಾಚಿದೇವ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ನಾಗೇಂದ್ರಪ್ಪ ಹೇಳಿದರು.

ರವಿಚಂದ್ರನ್‌ನ ಮಲ್ಲ ಚಿತ್ರದ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿರುವುದಾಗಿ ಸಂಘಟನೆಯ ಮಂಜುನಾಥ್‌ ತಿಳಿಸಿದರು. ಈ ಮುನ್ನ ‘ಪ್ರೇಮಲೋಕ’ ಹಾಗೂ ‘ರಾಮಾಚಾರಿ’ ಚಿತ್ರಗಳಲ್ಲೂ ಮಡಿವಾಳ ಜನಾಂಗವನ್ನು ರವಿಚಂದ್ರನ್‌ ಕೀಳಾಗಿ ಚಿತ್ರಿಸಿದ್ದರು ಎಂದು ಅವರು ಆಪಾದಿಸಿದರು.

Post your views

ಪೂರಕ ಓದಿಗೆ-
‘ಮಲ್ಲ’ ಕಂಡೋರ ಹೆಂಡಿರ ಬಿಚ್ಚಿದನಲ್ಲ !


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada