»   » ರಿಚರ್ಡ್‌ ಗೇರ್‌ ನನ್ಗೆ ಕಿಸ್‌ ಕೊಟ್ಟದ್ದು ತಪ್ಪಾ? -ಶಿಲ್ಪಾ ಶೆಟ್ಟಿ

ರಿಚರ್ಡ್‌ ಗೇರ್‌ ನನ್ಗೆ ಕಿಸ್‌ ಕೊಟ್ಟದ್ದು ತಪ್ಪಾ? -ಶಿಲ್ಪಾ ಶೆಟ್ಟಿ

Subscribe to Filmibeat Kannada


‘ಚುಂಬನ ಕೊಟ್ಟದ್ದು ಅವನು, ಸ್ವೀಕರಿಸಿದ್ದು ನಾನು... ನಿಮ್ಮದೇನು ತಂಟೆ’ ಎಂಬ ಧಾಟಿಯಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ದೆಹಲಿಯಲ್ಲಿ ಏಡ್ಸ್‌ ಜಾಗೃತಿ ಕಾರ್ಯಕ್ರಮದ ವೇದಿಕೆ ಮೇಲೆ ಹಾಲಿವುಡ್‌ ನಟ ರಿಚರ್ಡ್‌ ಗೇರ್‌, ಶಿಲ್ಪಾ ಶೆಟ್ಟಿಯನ್ನು ಅಪ್ಪಿ ಮುದ್ದಾಡಿದ ಘಟನೆ ಎಲ್ಲೆಡೆ ಟೀಕೆಗೆ ಗುರಿಯಾಗಿದೆ. ವಿವಿಧ ಸಂಘಟನೆಗಳು ಘಟನೆಯನ್ನು ತೀಕ್ಷ್ಣವಾಗಿ ಖಂಡಿಸಿ, ಪ್ರತಿಭಟನೆ ನಡೆಸುತ್ತಿವೆ.

ಈ ಮಧ್ಯೆ ಘಟನೆ ಬಗ್ಗೆ ಸುದ್ದಿಗಾರರ ಬಳಿ ಪ್ರತಿಕ್ರಿಯಿಸಿರುವ ಶಿಲ್ಪಾ ಶೆಟ್ಟಿ, ಚುಂಬನ ಪ್ರಕರಣಕ್ಕಿಂತಲೂ, ಏಡ್ಸ್‌ ಕಾರ್ಯಕ್ರಮಕ್ಕೆ ಮಾಧ್ಯಮಗಳು ಪ್ರಚಾರ ನೀಡಬೇಕು ಎಂದಿದ್ದಾರೆ.

ಗೇರ್‌ ನಮ್ಮದೇಶಕ್ಕೆ ಬಂದ ಅತಿಥಿ. ಅತಿಥಿ ದೇವೋಭವ ಎಂಬಂತೆ, ಅವರಿಗೆ ಅವಮಾನವಾಗುವಂತೆ ನಾವು ವರ್ತಿಸಬಾರದು. ಸಾರ್ವಜನಿಕ ವೇದಿಕೆಯಲ್ಲಿ ಚುಂಬನ ನೀಡುವುದು ಭಾರತೀಯ ಸಂಸ್ಕೃತಿಯಲ್ಲ ಎಂಬುದು ನನಗೆ ಗೊತ್ತು. ಆದರೆ ಚುಂಬನ ನೀಡುವುದು ಅವರ ದೇಶದ ಸಂಸ್ಕೃತಿ. ಗೇರ್‌ ಅಸಭ್ಯವಾಗೇನೂ ವರ್ತಿಸಿಲ್ಲ. ಸಭಿಕರ ರಂಜಿಸಲು ಅವರು ಚುಂಬನ ನೀಡಿದ್ದಾರೆ. ಗೇರ್‌ ಯಾವುದೇ ತಪ್ಪು ಮಾಡಿಲ್ಲ ಎಂದು ಶಿಲ್ಪಾ ಸಮರ್ಥಿಸಿಕೊಂಡಿದ್ದಾರೆ.

ವಿಶ್ವದ ದೃಷ್ಟಿಯಲ್ಲಿ ಭಾರತೀಯರು ಮತ್ತು ಭಾರತೀಯ ಮಾಧ್ಯಮಗಳು ಮೂರ್ಖರಂತೆ ಕಾಣುವುದು ನನಗಿಷ್ಟವಿಲ್ಲ. ಹೀಗಾಗಿ ಚುಂಬನ ಪ್ರಕರಣವನ್ನು ಕೈಬಿಟ್ಟರೆ ಒಳ್ಳೆಯದು ಎಂದು ಶಿಲ್ಪಾ, ತನ್ನ ಟೀಕಾಕಾರರಿಗೆ ಸಲಹೆ ನೀಡಿದ್ದಾರೆ.

ವಿವಾದಗಳ ಶಿಲ್ಪಾ : ಜನಾಂಗೀಯ ಅವಮಾನಕ್ಕೆ ಗುರಿಯಾಗಿದ್ದೇನೆ ಎಂದು ಮಾಧ್ಯಮಗಳ ಮುಂದೆ, ಇತ್ತೀಚೆಗೆ ಬಿಕ್ಕಿಬಿಕ್ಕಿ ಅತ್ತಿದ್ದ ಶಿಲ್ಪಾ, ನಂತರ ಆ ಘಟನೆಯನ್ನು ನಿರಾಕರಿಸಿದ್ದರು. ತಮ್ಮ ಹೇಳಿಕೆಯನ್ನು ಅವರು ತಿರುಚಿದ್ದರು. ಈಗ ಮುತ್ತಿನ ವಿವಾದ. ಅಂದ ಹಾಗೆಶಿಲ್ಪಾ ಸಮರ್ಥನೆಗೆ ನಿಮ್ಮ ಬೆಂಬಲವಿದೆಯೇ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada