»   » ಮಂಗಲ್‌ ಪಾಂಡೆಗೆ ಸಲಾಂ

ಮಂಗಲ್‌ ಪಾಂಡೆಗೆ ಸಲಾಂ

Posted By:
Subscribe to Filmibeat Kannada

ಬೆಂಗಳೂರು : ಇತಿಹಾಸ ತಿರುಚುವ ಕೆಲಸವನ್ನು ನಾವು ಮಾಡಿಲ್ಲ. ದೇಶಭಕ್ತ ಮಂಗಲ ಪಾಂಡೆ ಒಂದು ಸಮಾಜ ಅಥವಾ ಸಮುದಾಯಕ್ಕೆ ಸೇರಿದ ವ್ಯಕ್ತಿಯಲ್ಲ, ಆತ ಇಡೀ ಭಾರತಕ್ಕೆ ಸೇರಿದವನು ಎಂದು ನಟ ಆಮೀರ್‌ ಖಾನ್‌ ಆಭಿಪ್ರಾಯಪಟ್ಟಿದ್ದಾರೆ.

ತಮ್ಮ ಆಭಿನಯದ ‘ಮಂಗಲ್‌ ಪಾಂಡೆ, ದಿ ರೈಸಿಂಗ್‌’ ಎಂಬ ಹಿಂದಿ ಚಿತ್ರದ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಿದ್ದ ಆಮೀರ್‌ ಖಾನ್‌ ಸುದ್ದಿಗಾರರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮಂಗಲ್‌ ಪಾಂಡೆಯ ಹುಟ್ಟೂರಿನ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಮೂರ್ನಾಲ್ಕು ಸ್ಥಳಗಳ ಜನರು ಮಂಗಲ್‌ ಪಾಂಡೆ ತಮ್ಮೂರಿನಲ್ಲೇ ಹುಟ್ಟಿರುವುದಾಗಿ ಹೇಳುತ್ತಿದ್ದಾರೆ. ಆ ಬಗೆಗೆ ಲಿಖಿತ ಆಧಾರಗಳಿಲ್ಲ. ಸಾರ್ವಜನಿಕರ ಅಭಿಪ್ರಾಯಕ್ಕೆ ನನ್ನ ಸಮ್ಮತಿ ಇದೆ ಎಂದು ಪಾಂಡೆಯ ಹುಟ್ಟೂರಿನ ಕುರಿತಾದ ವಿವಾದಕ್ಕೆ ತೆರೆ ಎಳೆದರು.

ಮಂಗಲ್‌ ಪಾಂಡೆ ಬದುಕು ಸಮಕಾಲೀನ ವ್ಯವಸ್ಥೆಗೆ ಹೊಂದಿಕೊಳ್ಳುತ್ತದೆ. ಹೀಗಾಗಿಯೇ ಚಿತ್ರ ಮಾಡಿದ್ದೇನೆ. ಅಭಿವೃದ್ಧಿಯ ಹೆಸರಲ್ಲಿ ಅಮೆರಿಕದಂತಹ ಮುಂದುವರೆದ ದೇಶಗಳು ನಡೆಸುವ ಶೋಷಣೆ 150 ವರ್ಷಗಳ ಹಿಂದೆಯೂ ಇತ್ತು. ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಿದೆ. 25ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ‘ಲಗಾನ್‌’ ಚಿತ್ರದ ಒಟ್ಟಾರೆ ಗಳಿಕೆಯನ್ನು ಮಂಗಲ್‌ ಪಾಂಡೆ ಮುಂದಿನ ಒಂದೆರಡು ವಾರಗಳಲ್ಲಿ ಗಳಿಸಲಿದೆ ಎಂದು ಆಮೀರ್‌ ಖಾನ್‌ ವಿಶ್ವಾಸ ವ್ಯಕ್ತಪಡಿಸಿದರು.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada