»   » ಕತ್ರೀನಾ ಕೈಫ್‌ ತುಂಡುಡುಗೆಯ ಮೇಲೆ ದರ್ಗಾದ ಕಿಡಿ!

ಕತ್ರೀನಾ ಕೈಫ್‌ ತುಂಡುಡುಗೆಯ ಮೇಲೆ ದರ್ಗಾದ ಕಿಡಿ!

Posted By:
Subscribe to Filmibeat Kannada


ಜೈಪುರ್‌ : ರೂಪದರ್ಶಿ, ಬಾಲಿವುಡ್‌ನ ರಂಗಿನ ನಟಿ ಕತ್ರೀನಾ ಕೈಫ್‌ರ ತುಂಡುಡುಗೆ ವಿವಾದಕ್ಕೆ ಆಸ್ಪದ ನೀಡಿದೆ.

ತುಂಡುಡುಗೆ ಮತ್ತು ಅನುಮತಿಯಿಲ್ಲದೇ ನಡೆಸಲಾದ ಚಿತ್ರೀಕರಣದಲ್ಲಿ ಪಾಲ್ಗೊಂಡ ಸಂಗತಿಗಳಿಗೆ ಸಂಬಂಧಿಸಿದಂತೆ, ಕತ್ರೀನಾಗೆ ಐತಿಹಾಸಿಕ ಅಜ್ಮೀರ್‌ ದರ್ಗಾದ ಧರ್ಮದರ್ಶಿ ಮಂಡಳಿ ಷೋಕಾಸ್‌ ನೋಟಿಸ್‌ ನೀಡಿದೆ. ಕತ್ರೀನಾ ಜೊತೆಗೆ ರಿಷಿಕಪೂರ್‌, ಚಿತ್ರದ ನಿರ್ದೇಶಕ ವಿಪುಲ್‌ ಷಾ ಅವರಿಗೂ ನೋಟಿಸ್‌ ನೀಡಲಾಗಿದೆ.

ಕಳೆದ ತಿಂಗಳಷ್ಟೇ ಅಜ್ಮೀರ್‌ನಲ್ಲಿನ ಖ್ವಾಜಾ ಮೊಹಿನುದ್ದೀನ್‌ ಚಿಸ್ತಿ ದರ್ಗಾದಲ್ಲಿ ‘ನಮಸ್ತೆ ಲಂಡನ್‌’ ಚಿತ್ರದ ಚಿತ್ರೀಕರಣ ನಡೆದಿತ್ತು. ದರ್ಗಾದ ಧರ್ಮದರ್ಶಿ ಮಂಡಳಿ ನಕಾರದ ನಡುವೆಯೂ ಚಿತ್ರೀಕರಣ ನಡೆಸಿರುವುದು ವಿವಾದಕ್ಕೆ ಕಾರಣ.

ಅಲ್ಲದೇ ಕತ್ರೀನಾ ತುಂಡುಡುಗೆಯಲ್ಲಿಯೇ ಪವಿತ್ರ ಮತ್ತು ಐತಿಹಾಸಿಕ ದರ್ಗಾಕ್ಕೆ ಕೊಡುಗೆ ಅರ್ಪಿಸಿರುವುದನ್ನು ಧರ್ಮದರ್ಶಿ ಮಂಡಳಿ ಕಟುವಾಗಿ ಖಂಡಿಸಿದೆ.

ಇದರಲ್ಲಿ ನನ್ನದೇನೂ ತಪ್ಪಿಲ್ಲ. ನಿದೇಶಕ ಹೇಳಿದಂತೆ ನಾನು ನಡೆದುಕೊಂಡಿದ್ದೇನೆ ಎಂದು ಸಮಜಾಯಿಷಿ ಕತ್ರೀನಾ ಕೈಫ್‌ ನೀಡಿದ್ದರು.

(ಏಜನ್ಸೀಸ್‌)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada