»   » ಥಿಯೇಟರ್‌ಬಂದ್‌ ಇಲ್ಲ ; ಚಿತ್ರಪ್ರಶಸ್ತಿ ಸಮಾರಂಭ ತುಮಕೂರಿಗೆ

ಥಿಯೇಟರ್‌ಬಂದ್‌ ಇಲ್ಲ ; ಚಿತ್ರಪ್ರಶಸ್ತಿ ಸಮಾರಂಭ ತುಮಕೂರಿಗೆ

Posted By:
Subscribe to Filmibeat Kannada

ಬೆಂಗಳೂರು : ಚಿತ್ರೋದ್ಯಮದ ಅನೇಕರ ಒತ್ತಾಯದ ಮೇರೆಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಳ್ಳಾರಿಯಿಂದ ತುಮಕೂರಿಗೆ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ.

ಡಿಸೆಂಬರ್‌ 27ರಂದು ಬಳ್ಳಾರಿಯಲ್ಲಿ ನಡೆಯಬೇಕಿದ್ದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ 2004ರ ಜನವರಿ ತಿಂಗಳಲ್ಲಿ ತುಮಕೂರಿನಲ್ಲಿ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಪರಮೇಶ್ವರ್‌ ಬುಧವಾರ (ಡಿ. 17) ಸುದ್ದಿಗಾರರಿಗೆ ತಿಳಿಸಿದರು.

ಸೇವಾ ಶುಲ್ಕ ವಿವಾದದ ವಿಷಯ ಕುರಿತು ನಿರ್ಮಾಪಕರು ಹಾಗೂ ಪ್ರದರ್ಶಕರ ಜೊತೆ ಸಭೆ ನಡೆಸಿ, ಚರ್ಚಿಸಿದ ನಂತರ ಅವರು ಈ ಮಾತನ್ನು ಹೇಳಿದರು. ಸಭೆಯಲ್ಲಿ ಬಹುತೇಕ ನಿರ್ಮಾಪಕರು ಹಾಗೂ ಪ್ರದರ್ಶಕರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ್ಳಯಿಂದ ತುಮಕೂರಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರಿಂದ ಸರ್ಕಾರ ಈ ನಿರ್ಧಾರಕ್ಕೆ ಬರಬೇಕಾಯಿತು ಎಂದರು.

ಕನ್ನಡೇತರ ಚಿತ್ರಗಳಿಗೆ 70 ಪ್ರತಿಶತ ಮನರಂಜನಾ ಶುಲ್ಕ ವಿಧಿಸಲಾಗುತ್ತಿದ್ದು, ಅದನ್ನು ಇಳಿಸುವ ಬಗ್ಗೆ ಹಾಗೂ ಸೇವಾ ಶುಲ್ಕ ವಿವಾದ ಕುರಿತು ಸದ್ಯದಲ್ಲೇ ಸರ್ಕಾರ ತನ್ನ ನಿರ್ಧಾರ ಹೇಳಲಿದೆ ಎಂದು ನಿರ್ಮಾಪಕರು ಹಾಗೂ ಪ್ರದರ್ಶಕರಿಗೆ ಭರವಸೆ ಕೊಟ್ಟಿದ್ದಾಗಿ ಸಚಿವರು ಹೇಳಿದರು.

ಚಿತ್ರಮಂದಿರ ಬಂದ್‌ ರದ್ದು : ಸೇವಾ ಶುಲ್ಕವನ್ನು ಈಗ ರದ್ದು ಪಡಿಸಲಾಗಿದ್ದು, ಅದನ್ನು ಮತ್ತೆ ಜಾರಿಗೆ ತರಬೇಕು ಎಂಬುದು ಪ್ರದರ್ಶಕರ ಪಟ್ಟು. ನಿರ್ಮಾಪಕರು ಇದಕ್ಕೆ ವಿರೋಧಿಗಳು. ತಮ್ಮ ಬೇಡಿಕೆ ಮುಂದಿಟ್ಟುಕೊಂಡು ಡಿಸೆಂಬರ್‌ 22ರಿಂದ ಅನಿರ್ದಿಷ್ಟ ಅವಧಿಯ ಸಿನಿಮಾ ಬಂದ್‌ ಮಾಡುವುದಾಗಿ ಪ್ರದರ್ಶಕರು ಎಚ್ಚರಿಕೆ ಕೊಟ್ಟಿದ್ದರು. ಆದರೆ, ಸಚಿವರ ಸಮಾಧಾನದ ಮಾತುಗಳನ್ನು ಕೇಳಿದ ನಂತರ ಮುಷ್ಕರ ಹಿಂತೆಗೆದುಕೊಳ್ಳಲು ಪ್ರದರ್ಶಕರು ನಿರ್ಧರಿಸಿದ್ದಾರೆ.

ಮುಂಬರುವ ಫೆಬ್ರವರಿಯಲ್ಲಿ ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ ಪ್ರದರ್ಶಕರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಚಿಂತನೆ ನಡೆಸುವುದು. ಈ ಭರವಸೆಯಿಂದಾಗಿ ಥಿಯೇಟರ್‌ ಮಾಲಿಕರು ಉದ್ದೇಶಿದ ಮುಷ್ಕರವನ್ನು ಕೈಬಿಟ್ಟಿದ್ದಾರೆ ಎಂದು ಪರಮೇಶ್ವರ್‌ ತಿಳಿಸಿದರು.

ಇದೇ ಮೊದಲ ಬಾರಿಗೆ ಚಿತ್ರಮಂದಿರವನ್ನು ಹಸನಾಗಿಟ್ಟುಕೊಂಡ ಮಾಲೀಕರಿಗೆ ವಿಶೇಷ ಪ್ರಶಸ್ತಿಯನ್ನು ಸರ್ಕಾರ ನೀಡಲಿದೆ ಎಂದೂ ಸಚಿವರು ಹೇಳಿದರು.

(ಪಿಟಿಐ)


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada