ಇಲ್ಲಾ ಅನ್ನುವ ಮಾತೇ ಇಲ್ಲಾರೀ ಇಲ್ಲಿ ಅಂದ್ರು ದ್ವಾರಕೀಶ್

ಹೀಗೆಂದು ದೀರ್ಘವಾಗಿ ಉಸಿರೆಳೆದುಕೊಂಡರು ಬಿ.ಎಸ್. ದ್ವಾರಕೀಶ್. ಅವರು ಯಾವಾಗ, ಯಾಕೆ ಹೀಗೆಂದರು ಗೊತ್ತೇ? ಕನ್ನಡದಲ್ಲಿ ಕತೆಯಾಧಾರಿತ ಚಿತ್ರಗಳು ಬರುತ್ತಿಲ್ಲ, ಕತೆಯ ಕೊರತೆಯೇ ಎಂದು ದ್ವಾರಕೀಶ್ ರನ್ನು ಕೇಳಲಾಗಿ, ಕನ್ನಡದಲ್ಲಿ ಒಳ್ಳೊಳ್ಳೆಯ ಕಥೆಗಳಿವೆ. ಸಾಕಷ್ಟು ಒಳ್ಳೆಯ ಕಥೆಯಾಧಾರಿತ ಚಿತ್ರಗಳೂ ಬಂದಿವೆ, ಮುಂದೆಯೂ ಬರಬಹುದು.
ಆದರೆ, ಕಾದಂಬರಿಗಳನ್ನು, ಪ್ರಖ್ಯಾತ ಕೃತಿಗಳನ್ನು ಸಿನಿಮಾಕ್ಕೆ ಅಳವಡಿಸುವುದು ಒಂದು ಕಲೆ. ಅದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ನನ್ನಿಂದಂತೂ ಸಾಧ್ಯವಾಗಿಲ್ಲ. ನಾನು ಒಳ್ಳೆಯ ಕೃತಿಗಳನ್ನು ಇಟ್ಟು ಸಿನಿಮಾ ಮಾಡಲಿಲ್ಲ ಎಂಬ ಕೊರಗು ಆಗಾಗ ನನಗೂ ಕಾಡುತ್ತದೆ. ಆದರೆ ಒಳ್ಳೊಳ್ಳೆಯ ಸಿನಿಮಾ ಮಾಡಿದ್ದೇನೆ ಎಂಬ ತೃಪ್ತಿಯಂತೂ ಇದ್ದೇ ಇದೆ" ಎಂದಿದ್ದಾರೆ.
ಸಿನಿಮಾ ರಂಗದಲ್ಲಿ ಎಲ್ಲವನ್ನೂ ನೋಡಿದ್ದಾರೆ, ಮಾಡಿದ್ದಾರೆ ಈ ನಮ್ಮ ದ್ವಾರಕೀಶ್. ಅವರ ಮಾತನ್ನು 'ಅಲ್ಲ' ಎನ್ನುವವರು ಯಾರಿದ್ದಾರೆ? ಹೇಳಿದರೂ ಅದಕ್ಕೆ ಅವರೇನು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಯಾವುದೂ ಅಸಾಧ್ಯವಲ್ಲ. ಸಿನಿಮಾ ರಂಗದಲ್ಲಿ ಎಲ್ಲವೂ ಸಾದ್ಯ ಎಂಬುದು ಅವರ ಮಾತು. ಆಗದಿರುವವರ ಬಗ್ಗೆ ಅವರು ಏನನ್ನೂ ಹೇಳಿಲ್ಲ, ಹೇಳುವುದೂ ಇಲ್ಲ...! (ಒನ್ ಇಂಡಿಯಾ ಕನ್ನಡ)


Click it and Unblock the Notifications











