ರಂಗಾಯಣಕ್ಕೆ ಮಂಡ್ಯ ರಮೇಶ್ ಆಯ್ಕೆಗೆ ವಿರೋಧ

ಈ ಹಿಂದೆ ಕೀರ್ತಿ ಫಿಲಂ ಇನ್ಸ್‌ಟಿಟ್ಯೂಟ್‌ನಲ್ಲಿ ಮಂಡ್ಯ ರಮೇಶ್ ಸೇವೆ ಸಲ್ಲಿಸುತ್ತಿದ್ದಾಗ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರಿಂದ ಅವರನ್ನು ಸಂಸ್ಥೆಯಿಂದ ವಜಾ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ ರಾಜಪ್ಪ.
ಬಳಿಕ ತಮ್ಮ ಸಂಸ್ಥೆಯಿಂದ ಕಡತಗಳನ್ನು ಅಪಹರಿಸಿ "ನಟನಾ" ಎಂಬ ಸಂಸ್ಥೆಯನ್ನು ಕಟ್ಟಿ ನಮ್ಮ ಸಂಸ್ಥೆ ಹಾಗೂ ಸಂಸ್ಥಾಪಕರ ವಿರುದ್ಧ ಮಾಧ್ಯಮಗಳಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರು. ಅವರ ಆರೋಪಗಳನ್ನು ಟಿವಿ 9 ವಾಹಿನಿ ಪ್ರಸಾರ ಮಾಡಿತ್ತು. ಟಿವಿ9 ವಿರುದ್ಧ ನ್ಯಾಯಲಯ ವಾರೆಂಟ್ ಜಾರಿ ಮಾಡಿತ್ತು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಇಂತಹ ಕಳಂಕಿತ ವ್ಯಕ್ತಿಯನ್ನು ರಂಗಾಯಣ ನಿರ್ದೇಶಕ ಮಾಡಬಾರದು ಎಂದು ರಾಜಪ್ಪ ಮುಖ್ಯಮಂತ್ರಿಗಳು, ಗೃಹಸಚಿವರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಮೂಲಕ ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಮಂಡ್ಯ ರಮೇಶ್ ಆಯ್ಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ರಾಜಪ್ಪ. (ಏಜೆನ್ಸೀಸ್)
More from Filmibeat
English summary
Kannada Film actor cum theater personality Mandya Ramesh's selection for the post of Rangayana director has strongly opposed by Kirthi Film Institute director Rajappa. Several senior theatre artistes are learnt to be lobbying in Bangalore for the post of Rangayana Director, which had fallen vacant after the demise of Lingadevaru Halemane recently.


Click it and Unblock the Notifications











