ಮುಂಬೈ ನಡುಗುತ್ತಿದ್ದಾಗ ಶಾರುಕ್ ಮೋಜುಮಸ್ತಿಯಲ್ಲಿ ನಗ್ತಿದ್ದ!

By Srinath

Shah Rukh Khan
ತ್ರಿವಳಿ ಸ್ಫೋಟಗಳು ಸಂಭವಿಸಿ ಇಡೀ ಮುಂಬೈ ಶೋಕ ಸಾಗರದಲ್ಲಿ ಮುಳುಗಿದ್ದಾಗ ತನ್ನ ಮನೆಯಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿ, ಮೋಜು ಮಸ್ತಿಯಲ್ಲಿದ್ದ ಬಾಲಿವುಡ್‌ ಸೂಪರ್ ಸ್ಟಾರ್ ಶಾರುಕ್ ಖಾನ್‌ ನನ್ನು ಶಿವಸೇನೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ಚಿತ್ರನಟಿ ಕತ್ರಿನಾ ಕೈಫ್‌ಳ ಹುಟ್ಟುಹಬ್ಬ ಆಚರಿಸಲು ಶುಕ್ರವಾರ ಖಾನ್‌ ಪಾರ್ಟಿ ಆಯೋಜಿಸಿದ್ದರು. ಚಿತ್ರರಂಗದ ಗಣ್ಯರಾದ ಹೃತಿಕ್‌ ರೋಶನ್‌, ಫರ್ಹಾನ್‌ ಅಖ್ತರ್‌, ಅರ್ಜುನ್‌ ರಾಮ್‌ಪಾಲ್‌, ಚಂಕಿ ಪಾಂಡೆ, ಅಜಯ್‌ ದೇವಲ್‌, ಕತ್ರಿನಾ ಕೈಫ್‌, ಕರಣ್‌ ಜೋಹರ್ ಮೊದಲಾದವರು ಭಾಗವಹಿಸಿದ್ದರು ಎಂದು ಪತ್ರಿಕೆ ಹೇಳಿದೆ. ಈ ಅತಿರಥ ಮಹಾರಥರೆಲ್ಲ 'ರೋಮ್ ಹತ್ತಿ ಉರಿಯುತ್ತಿದ್ದಾಗ ಪಿಟೀಲು ಕೊಯ್ಯುತ್ತಿದ್ದೇಕೆ' ಎಂದು ಅಭಿಮಾನಿಗಳೂ ತರಾಟೆಗೆ ತೆಗೆದುಕೊಂಡಿದ್ದಾರೆ.

ರಜತ ಪರದೆಯಲ್ಲಿ ನಾಯಕನಾಗಿ ಮೆರೆಯುವ ಖಾನ್‌ ನಿಜ ಜೀವನದಲ್ಲಿ ಖಳನಾಯಕರಾಗಿದ್ದಾರೆ ಎಂಬುದನ್ನು ಈ ಘಟನೆ ಬಿಂಬಿಸುತ್ತಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ತೀಕ್ಷಣವಾಗಿ ಹೇಳಿದೆ.

ಕೆಲವು ಪ್ರಮುಖ ಚಿತ್ರನಟರು ತಮ್ಮ ಹುಟ್ಟುಹಬ್ಬ ಮತ್ತು ಗುರುಪೂರ್ಣಿಮೆ ಆಚರಣೆಯನ್ನು ಬಾಂಬ್‌ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ನಿಲ್ಲಿಸಿದ್ದರು. ಚಿತ್ರನಟಿ ಐಶ್ವರ್ಯಾ ರೈ ಫ್ರೆಂಚ್‌ ಸರ್ಕಾರ ನೀಡಲಿದ್ದ ಗೌರವವನ್ನು ಸ್ವೀಕರಿಸಲು ಬಾಂಬ್‌ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ನಿರಾಕರಿಸಿದ್ದರು. ಆದರೆ ಇವನೊಬ್ಬ ಶಾರುಕ್ ಖಾನ್‌ಗೆ ಪಾರ್ಟಿ ರದ್ದುಪಡಿಸಬೇಕೆಂಬ ಮನಸ್ಸು ಬರಲಿಲ್ಲ ಎಂದು ಪತ್ರಿಕೆ ಮೂಲಕ ಶಿವಸೇನೆ ತೀವ್ರ ಅಸಮಾಧಾನ ಹೊರಹಾಕಿದೆ.

More from Filmibeat

English summary
Saamna, the Sena mouthpiece, has slammed actor Shah Rukh Khan for hosting a party at his Bandra residence on July 13, when serial bomb blasts ripped through the city.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X