ಗಾಯಕಿ ಮಹಾಲಕ್ಷ್ಮಿ ಬದುಕಿನಲ್ಲಿ ನಡೆದ ದುರಂತಕತೆ!
ಒಂದೂರಲ್ಲಿ ಒಬ್ಬ ಗಾಯಕಿ ಇದ್ದಳು. ಹೆಸರು ಮಹಾಲಕ್ಷ್ಮಿ. ಗೀತ ಗಾಯನದಲ್ಲಿ ಒಂದು ಕಾಲದಲ್ಲಿ ಆಕೆ ಮಾಡಿದ್ದೇ ಹೆಸರು. ಅದೇ ಮಹಾಲಕ್ಷ್ಮಿಗೆ ಸಿನಿಮಾದಲ್ಲಿ ನಟಿಸಬೇಕು ಎಂಬ ಮಹಾದಾಸೆ ಇತ್ತು. ಹಾಗಾಗಿ ಮನೆಯವರ ಅಪೇಕ್ಷೆಯ ಮೇರೆಗೂ ಬಣ್ಣ ಹಚ್ಚಿಯೇ ಬಿಟ್ಟಳು. ಎಸ್.ನಾರಾಯಣ್ ಜೊತೆ ಪಕ್ಕ ಚುಕ್ಕ ಚಿತ್ರದಲ್ಲಿ ನಾಯಕಿಯಾಗಿಯೇ ಬಿಟ್ಟಳು.
ಆ ಚಿತ್ರದಲ್ಲಿ ಒಂದಷ್ಟು ಥಳುಕ್ಕು, ಬಳುಕ್ಕು ಪಾತ್ರಗಳಲ್ಲಿ ಕಾಣಿಸಿಕೊಂಡಳು. ಯಡವಟ್ಟು ಆಗಿದ್ದೇ ಇಲ್ಲಿ. ಈ ಸಿನಿಮಾದಲ್ಲಿ ನಟಿಸುವ ತಿಂಗಳ ಹಿಂದಷ್ಟೇ ಮಹಾಲಕ್ಷ್ಮಿಗೆ ನಿಶ್ಚಿತಾರ್ಥ ಆಗಿತ್ತು. ಅದೂ ಲವ್ ಮಾಡಿದ ಹುಡುಗನ ಜೊತೆ. ಹಾಡೊಂದರ ರೆಕಾರ್ಡಿಂಗ್‌ನಲ್ಲಿ ಆಕೆಯನ್ನು ಭೇಟಿಯಾಗಿದ್ದ ಗಿರಿಧರ್ ದೀವಾನ್ ಎಂಬ ಸಂಗೀತ ನಿರ್ದೇಶಕನ ಜೊತೆ ಮಹಾಲಕ್ಷ್ಮಿಗೆ ಎಂಗೇಜ್‌ಮೆಂಟ್ ಆಗಿತ್ತು.
ಲಕ್ಷ್ಮಿ ಯಾವಾಗ ಪಕ್ಕಾ ಚುಕ್ಕಾ ಚಿತ್ರದಲ್ಲಿ ಅರೆ ಬರೆ ಬಟ್ಟೆಯಲ್ಲಿ ಕುಣಿದು ಕುಪ್ಪಳಿಸಿದಳೋ ಗಿರಿಧರ್ ಫ್ಯಾಮಿಲಿ ಅವಳನ್ನು ನಿರಾಕರಿಸಿಬಿಟ್ಟಿತು. ನಾವು ಹೇಳಿದರೂ ಸಿನಿಮಾದಲ್ಲಿ ನಟಿಸಿದ್ದಾಳೆ ಎಂಬ ಸಿಟ್ಟು ಇನ್ನೊಂದು ಕಡೆ. ಕೊನೆಗೆ ಗಿರಿಧರ್ ಅಪ್ಪ ಅಮ್ಮನ ಮಾತಿಗೆ ಮಣಿದು ಲಕ್ಷ್ಮಿಯಿಂದ ದೂರವಾದರು!
ಪರಿಣಾಮ ಇಂದು ಲಕ್ಷ್ಮಿ ಸಂನ್ಯಾಸಿಣಿ. ಯಾವುದೋ ಒಂದು ಆಶ್ರಮದಲ್ಲಿ ಕೇಶಮಂಡನ ಮಾಡಿಕೊಂಡು, 'ಕಾವಿನಿ' ರೂಪ ತಾಳಿದ್ದಾರೆ! ಇದು ಖಂಡಿತ ಕಟ್ಟುಕತೆಯಲ್ಲ, ಮಹಾಲಕ್ಷ್ಮಿ ಬದುಕಿನಲ್ಲಿ ನಡೆದ ದುರಂತಕತೆ!


Click it and Unblock the Notifications











