ಉಪ್ಪಿ ಪರಿಕಲ್ಪನೆ ಕಾಪಿ ಮಾಡಿದರೆ 'ಬಿಜಿನೆಸ್‌ಮ್ಯಾನ್' ಪುರಿ
ಸೂಪರ್ ಸ್ಟಾರ್ ಉಪೇಂದ್ರ ಅವರ ಪರಿಕಲ್ಪನೆಯನ್ನು ತೆಲುಗಿನ ಯಶಸ್ವಿ ನಿರ್ದೇಶಕ ಪುರಿ ಜಗನ್ನಾಥ್ ಕಾಪಿ ಮಾಡಿದರೆ? ಈ ರೀತಿಯ ಒಂದು ಸಣ್ಣ ಅನುಮಾನ ಸಿನಿಪ್ರಿಯರ ತಲೆ ಕೊರೆಯುತ್ತಿದೆ. 'ಸೂಪರ್' ಚಿತ್ರದಲ್ಲಿನ ಕಾನ್ಸೆಪ್ಟನ್ನು ಪುರಿ ಜಗನ್ನಾಥ್ ತಮ್ಮ 'ಬಿಜಿನೆಸ್‌ಮ್ಯಾನ್' ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.
ಉಪೇಂದ್ರ ಅಭಿನಯಿಸಿದ ನಿರ್ದೇಶಿಸಿದ್ದ 'ಸೂಪರ್' ಚಿತ್ರ ಕಾರ್ಪೋರೇಟ್ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ಕಡೆಗೆ ಭೂಗತ ಜಗತ್ತು ಕೂಡ ಪಕ್ಕಾ ಕಾರ್ಪೋರೇಟ್ ಆಗುವುದನ್ನು ಉಪ್ಪಿ ತಮ್ಮ ಚಿತ್ರದಲ್ಲಿ ಚಾಕಚಕ್ಯತೆಯಿಂದ ತೋರಿಸಿದ್ದರು. ಪುರಿ ನಿರ್ದೇಶನದ 'ಬಿಜಿನೆಸ್‌ಮ್ಯಾನ್' ಚಿತ್ರದಲ್ಲೂ ಕಾರ್ಪೋರೇಟ್ ಭೂಗತ ಜಗತ್ತಿನ ಛಾಯೆಗಳಿವೆ.
ಎಲ್ಲೋ ಒಂದು ಕಡೆ ಉಪೇಂದ್ರ ಅವರ ಪರಿಕಲ್ಪನೆಯನ್ನು ಪುರಿ ಕಾಪಿ ಮಾಡಿದರು ಎಂಬ ಅನುಮಾನ ಬರುತ್ತದೆ. ಅಥವಾ ಇದೊಂದು ಆಕಸ್ಮಿಕವೂ ಆಗಿರುವ ಸಾಧ್ಯತೆಗಳಿವೆ. ಕನ್ನಡದಲ್ಲಿ ಪುರಿ ಜಗನ್ನಾಥ್ 'ಅಪ್ಪು' ಚಿತ್ರವನ್ನು ನಿರ್ದೇಶಿಸಿದ್ದರು. ಹಾಗಾಗಿ ಅವರು ಕನ್ನಡದ 'ಸೂಪರ್' ಚಿತ್ರವನ್ನು ನೋಡಿರುವ ಸಾಧ್ಯತೆಗಳಿವೆ ಎಂದು ಭಾವಿಸಬಹುದು. 'ಸೂಪರ್' ಚಿತ್ರ ತೆಲುಗು ಭಾಷೆಗೂ ಡಬ್ ಆಗಿದೆ. (ಏಜೆನ್ಸೀಸ್)


Click it and Unblock the Notifications











