twitter
    For Quick Alerts
    ALLOW NOTIFICATIONS  
    For Daily Alerts

    ಉಪ್ಪಿ ಪರಿಕಲ್ಪನೆ ಕಾಪಿ ಮಾಡಿದರೆ 'ಬಿಜಿನೆಸ್‌ಮ್ಯಾನ್' ಪುರಿ

    By Rajendra
    |

    ಸೂಪರ್ ಸ್ಟಾರ್ ಉಪೇಂದ್ರ ಅವರ ಪರಿಕಲ್ಪನೆಯನ್ನು ತೆಲುಗಿನ ಯಶಸ್ವಿ ನಿರ್ದೇಶಕ ಪುರಿ ಜಗನ್ನಾಥ್ ಕಾಪಿ ಮಾಡಿದರೆ? ಈ ರೀತಿಯ ಒಂದು ಸಣ್ಣ ಅನುಮಾನ ಸಿನಿಪ್ರಿಯರ ತಲೆ ಕೊರೆಯುತ್ತಿದೆ. 'ಸೂಪರ್' ಚಿತ್ರದಲ್ಲಿನ ಕಾನ್ಸೆಪ್ಟನ್ನು ಪುರಿ ಜಗನ್ನಾಥ್ ತಮ್ಮ 'ಬಿಜಿನೆಸ್‌ಮ್ಯಾನ್' ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.

    ಉಪೇಂದ್ರ ಅಭಿನಯಿಸಿದ ನಿರ್ದೇಶಿಸಿದ್ದ 'ಸೂಪರ್' ಚಿತ್ರ ಕಾರ್ಪೋರೇಟ್ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ಕಡೆಗೆ ಭೂಗತ ಜಗತ್ತು ಕೂಡ ಪಕ್ಕಾ ಕಾರ್ಪೋರೇಟ್‍ ಆಗುವುದನ್ನು ಉಪ್ಪಿ ತಮ್ಮ ಚಿತ್ರದಲ್ಲಿ ಚಾಕಚಕ್ಯತೆಯಿಂದ ತೋರಿಸಿದ್ದರು. ಪುರಿ ನಿರ್ದೇಶನದ 'ಬಿಜಿನೆಸ್‌ಮ್ಯಾನ್' ಚಿತ್ರದಲ್ಲೂ ಕಾರ್ಪೋರೇಟ್ ಭೂಗತ ಜಗತ್ತಿನ ಛಾಯೆಗಳಿವೆ.

    ಎಲ್ಲೋ ಒಂದು ಕಡೆ ಉಪೇಂದ್ರ ಅವರ ಪರಿಕಲ್ಪನೆಯನ್ನು ಪುರಿ ಕಾಪಿ ಮಾಡಿದರು ಎಂಬ ಅನುಮಾನ ಬರುತ್ತದೆ. ಅಥವಾ ಇದೊಂದು ಆಕಸ್ಮಿಕವೂ ಆಗಿರುವ ಸಾಧ್ಯತೆಗಳಿವೆ. ಕನ್ನಡದಲ್ಲಿ ಪುರಿ ಜಗನ್ನಾಥ್ 'ಅಪ್ಪು' ಚಿತ್ರವನ್ನು ನಿರ್ದೇಶಿಸಿದ್ದರು. ಹಾಗಾಗಿ ಅವರು ಕನ್ನಡದ 'ಸೂಪರ್' ಚಿತ್ರವನ್ನು ನೋಡಿರುವ ಸಾಧ್ಯತೆಗಳಿವೆ ಎಂದು ಭಾವಿಸಬಹುದು. 'ಸೂಪರ್' ಚಿತ್ರ ತೆಲುಗು ಭಾಷೆಗೂ ಡಬ್ ಆಗಿದೆ. (ಏಜೆನ್ಸೀಸ್)

    English summary
    Kannada film industy smell a rat about Puri Jagannath's latest flick Businessman. Has he copied Upendra's Super movie concept in his Business? Or it's co-incident? In both movies corporatisation of the underworld has the main concept.
    Wednesday, January 18, 2012, 16:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X