»   » ನಾಗತಿಹಳ್ಳಿ ಚಂದ್ರಶೇಖರ್‌ಗೆ ಎಂಎನ್‌ಸಿಗಳಿಂದ ಬೆದರಿಕೆ

ನಾಗತಿಹಳ್ಳಿ ಚಂದ್ರಶೇಖರ್‌ಗೆ ಎಂಎನ್‌ಸಿಗಳಿಂದ ಬೆದರಿಕೆ

Subscribe to Filmibeat Kannada


ನಿರ್ಮಾಣದ ಹಂತದಲ್ಲಿರುವ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಮಾತಾಡ್‌ ಮಾತಾಡ್‌ ಮಲ್ಲಿಗೆ’ ಚಿತ್ರ ಬಹುರಾಷ್ಟ್ರೀಯ ಕಂಪನಿಗಳ ನಿದ್ದೆ ಕೆಡಿಸಿದೆ.

ಅನೇಕ ಜೈವಿಕ ತಂತ್ರಜ್ಞಾನ(ಬಯೋಟೆಕ್‌) ಕಂಪನಿಗಳು ಚಿತ್ರ ನಿರ್ಮಾಣ ಸ್ಥಗಿತಗೊಳಿಸಬೇಕೆಂದು ನಾಗತಿಹಳ್ಳಿ ಅವರಿಗೆ ಬೆದರಿಕೆ ಇ-ಮೇಲ್‌ಗಳನ್ನು ರವಾನಿಸಿವೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲು ಅವಕಾಶ ನೀಡಲಾರೆವು ಎಂದು ಕೆಲವು ಮೇಲ್‌ಗಳಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ.

ನವದೆಹಲಿಯ ಮಾನವ ಹಕ್ಕುಗಳ ಆಯೋಗದ ದೇವೇಂದ್ರ ಶರ್ಮಾ ಅವರೊಂದಿಗೆ ಮಾತುಕತೆ ನಡೆಸಿ, ನಮ್ಮ ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರದ ಚಿತ್ರಕಥೆ ಸಿದ್ಧಗೊಳಿಸಲಾಗಿದೆ. ಏನೇ ಒತ್ತಡ ಬಂದರೂ ಚಿತ್ರ ಪೂರ್ಣಗೊಳಿಸುತ್ತೇನೆ ಎನ್ನುತ್ತಾರೆ ನಾಗತಿಹಳ್ಳಿ.

ಬಹುರಾಷ್ಟ್ರೀಯ ಕಂಪನಿಗಳ ಬಣ್ಣ ಸಿನಿಮಾದಲ್ಲಿ ಬಯಲಾಗಲಿದೆ. ಈ ಆತಂಕದಿಂದಲೇ ಬೆದರಿಕೆ ಮೇಲ್‌ಗಳು ಬಂದಿವೆ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ನನ್ನ ಹಾಗೂ ನಿರ್ಮಾಪಕರ ಯೋಜನೆಗಳ ಪ್ರಕಾರ ಚಿತ್ರ ಮುಂದುವರಿಯಲಿದೆ. ಆದರೆ ಬೆದರಿಕೆ ಹಾಕಿದವರಿಗೆ ಸೂಕ್ತ ರೀತಿಯಲ್ಲಿ ಉತ್ತರ ನೀಡಲಿದ್ದೇನೆ ಎಂದು ಅವರು ಘೋಷಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada