»   » ಮು.ಮ ಕುರ್ಚಿ ಮೇಲೆ ರಮ್ಯ ಕಣ್ಣು

ಮು.ಮ ಕುರ್ಚಿ ಮೇಲೆ ರಮ್ಯ ಕಣ್ಣು

Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ ಕನ್ನಡ
ನಟಿ ರಮ್ಯ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿನಿಂದಲೂ ಸುದ್ದಿಯಲ್ಲೇ ಇದ್ದಾಳೆ. ಗಾಂಧಿನಗರ ಜಗಳಗಂಟಿ ಎಂಬ ಬಿರುದನ್ನೂ ನೀಡಿದೆ. ಯಾವುದಾದರೊಂದು ಕಿರಿಕಿರಿ, ತರಲೆಗಳನ್ನು ಮಾಡುತ್ತಾ ಸುದ್ದಿಯಾಗುತ್ತಲೇ ಇರುತ್ತಾಳೆ ಈಯಮ್ಮ. ಅದೇ ಅವಳ ಜಾಯಮಾನವಂತೆ. ಹೇಗಾದರೂ ಸುದ್ದಿಯಾಗಬೇಕು. ಜನರ ಮನಸ್ಸಿನಲ್ಲಿ ರಮ್ಯಾ ಹೆಸರು ಅಚ್ಚಳಿಯದಂತೆ ಉಳಿಯಬೇಕು ಎಂಬುದೇ ನನ್ನಾಸೆ ಎನ್ನುವ ರಮ್ಯ ಹೊಸದೊಂದು ಸುದ್ದಿ ತಂದಿದ್ದಾಳೆ. ಈ ಸುದ್ದಿ ಬೆಳಕಿಗೆ ಬಂದಿರುವುದು ನಿರ್ದೇಶಕ ಎಸ್‌. ಮಹೇಂದರ್‌ ಅವರ ಮೂಲಕ.

ಎಸ್‌. ಮಹೇಂದರ್‌ ಅವರು ನಿರ್ದೇಶಿಸಿದ ರೀಮೇಕ್‌ ಚಿತ್ರ ‘ನಿನಗಾಗಿ’ ಹಿಟ್‌ ಆಯ್ತು; ಶತದಿನೋತ್ಸವವನ್ನೂ ಆಚರಿಸಿತು. ನಿಜ ವಿಷಯ ಏನೆಂದರೆ, ಮೊದಲು ನಿನಗಾಗಿ ಚಿತ್ರದ ನಾಯಕಿಯ ಪಾತ್ರಕ್ಕೆ ರಮ್ಯಳನ್ನೇ ಆಯ್ಕೆ ಮಾಡಲಾಗಿತ್ತು. ಕೊನೇ ಘಳಿಗೆಯಲ್ಲಿ ಈ ಪಾತ್ರವನ್ನು ರಾಧಿಕಾಗೆ ವಹಿಸಲಾಯ್ತು.

ಅದೇ ಸಮಯದಲ್ಲಿ ಮಹೇಂದರ್‌ ಅವರು ರಮ್ಯಾಳನ್ನು ಕೇಳಿದರಂತೆ- ನೀನು ಸಿನಿಮಾದಲ್ಲಿ ನಟಿಸ್ಬೇಕೂಂತ ನಿರ್ಧಾರ ಮಾಡಿದ್ದು ಯಾಕಮ್ಮಾ? ಎಂದು.

ನಾನು ಸಿನಿಮಾದಲ್ಲಿ ನಟಿಸಿ ಪಾಪ್ಯುಲರ್‌ ಆಗ್ಬೇಕಂತಿದೀನಿ ಎಂದಳಂತೆ ರಮ್ಯ.

ಪಾಪ್ಯುಲಾರಿಟಿ ತಗೊಂಡು ಏನ್ಮಾಡ್ತೀಯಾ? ಮಹೇಂದರ್‌ ಅವರಿಂದ ತಿರುಗೇಟು ಬಿತ್ತು.

ಇದೇ ಪಾಪ್ಯುಲಾರಿಟಿ ಇಟ್ಕೊಂಡೇ ಪಾಲಿಟಿಕ್ಸ್‌ ಸೇರ್ತೀನಿ. ಕರ್ನಾಟಕದ ಸೀಎಂ ಆಗ್ತೀನಿ ಎಂದಳಂತೆ.

ಇದೇ ಪಾಪ್ಯುಲಾರಿಟಿ ಹಿಂದೆ ಬಿದ್ದಿರೋ ರಮ್ಯ ಮೊನ್ನೆ ತಾನೆ ಒಂದು ಟಿವಿ ಸಂದರ್ಶನದಲ್ಲಿ ಭವಿಷ್ಯದಲ್ಲಿ ನಾನು ಸೀಎಂ ಆಗಲಿರುವೆ ಅಂದಿದ್ದಾಳೆ. ಒಟ್ಟಿನಲ್ಲಿ ಸೀಎಂ ಪಟ್ಟಕ್ಕೋಸ್ಕರ ಬಣ್ಣ ಹಚ್ಚಿರೋ ರಮ್ಯ ಸೀಎಂ ಆಗೋದು ರೀಲ್‌ ಲೈಫ್‌ ನಲ್ಲೋ ರಿಯಲ್‌ ಲೈಫ್‌ ನಲ್ಲೋ ನೋಡೋಣ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada