»   » ಅಯ್ಯಪ್ಪ ಕ್ಷಮಿಸಪ್ಪ.. ಜಯಮಾಲಾರ ಪ್ರಾಯಶ್ಚಿತ್ತ ಪೂಜೆ

ಅಯ್ಯಪ್ಪ ಕ್ಷಮಿಸಪ್ಪ.. ಜಯಮಾಲಾರ ಪ್ರಾಯಶ್ಚಿತ್ತ ಪೂಜೆ

Subscribe to Filmibeat Kannada


ಕೊಡವೂರು ಗ್ರಾಮದ ಕಂಬಳಕಟ್ಟ ಮಹಾಲಿಂಗೇಶ್ವರ ದರ್ಶನ ; ಮೂರು ದಿನ ಹೋಮ-ಹವನ

ಉಡುಪಿ : ಅಯ್ಯಪ್ಪಸ್ವಾಮಿ ಪಾದಸ್ಪರ್ಶ ವಿವಾದದ ಕೇಂದ್ರ ಬಿಂದುವಾಗಿದ್ದ ನಟಿ ಜಯಮಾಲಾ, ಇದೀಗ ಪ್ರಾಯಶ್ಚಿತ್ತಕ್ಕಾಗಿ ಪೂಜೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

ಸೋಮವಾರ(ಜುಲೈ 17) ಅವರು ಕೊಡವೂರು ಗ್ರಾಮದ ಕಂಬಳಕಟ್ಟ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ರಹಸ್ಯ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅವರು ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿ, ಗಣಹೋಮದಲ್ಲಿ ಪಾಲ್ಗೊಂಡರು. ಈ ಪೂಜೆ ಅಯ್ಯಪ್ಪಸ್ವಾಮಿ ಪಾದಸ್ಪರ್ಶ ಮಾಡಿದ ಪ್ರಾಯಶ್ಚಿತ್ತಕ್ಕಾಗಿ ನಡೆಯಿತು ಎಂಬ ಮಾತುಗಳು ಕೇಳಿಬಂದಿವೆ.

ಒಂದು ಮೂಲದ ಪ್ರಕಾರ, ಜಯಮಾಲಾ ತಮ್ಮ ಪತಿಯ ಶ್ರೇಯೋಭಿವೃದ್ಧಿಗಾಗಿ ಈ ಪೂಜೆ ಸಲ್ಲಿಸಿದ್ದಾರೆ. ಪೂಜೆಯ ನಿಮಿತ್ತ ಒಟ್ಟು ಮೂರು ದಿನಗಳ ಕಾಲ ಹೋಮ-ಹವನಗಳು ನಡೆಯಲಿವೆ. ಆದರೆ ಪುರೋಹಿತರು ಜಯಮಾಲಾ ಭೇಟಿ ವಿವರ ಬಹಿರಂಗಪಡಿಸಿಲ್ಲ.

ದರ್ಶನ ಮತ್ತಷ್ಟು ಕಠಿಣ : ಸೋಮವಾರ ಕರ್ಕಾಟಕ ಮಾಸಾರಂಭವಾಗಿದ್ದು, ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನವನ್ನು ಸಾರ್ವಜನಿಕ ದರ್ಶನಕ್ಕೆ ತೆರೆಯಲಾಗಿದೆ. ಮಧ್ಯವಯಸ್ಕ ಮಹಿಳೆಯರು ದೇಗುಲ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಜಯಮಾಲಾ ಪಾದಸ್ಪರ್ಶ ಪ್ರಕರಣದಿಂದ, ವಿವಾದ ದೇಶಾದ್ಯಂತ ತೀವ್ರ ಚರ್ಚೆಯಾಗಿರುವ ಹಿನ್ನೆಲೆಯಲ್ಲಿ, ದೇವಾಲಯ ದರ್ಶನಕ್ಕೆ ಬರುವ ಮಹಿಳೆಯರು ತಮ್ಮ ವಯಸ್ಸಿನ ಪ್ರಮಾಣ ಪತ್ರ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

(ಏಜನ್ಸೀಸ್‌)

Post your views

ಪೂರಕ ಓದಿಗೆ-
ಬ್ರಹ್ಮಚಾರಿ ದೇವರು ಅಯ್ಯಪ್ಪನಿಗೆ ಜಯಮಾಲಾರಿಂದ ಅಪಚಾರ?
ಜಯಮಾಲಾ ಸುಳ್ಳಿಯಾ? : ಕೇರಳ ಪೊಲೀಸರಿಂದ ವಿಚಾರಣೆ
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada