»   » ಅ.19 ರಿಂದ ರಾಜ್ಯದಲ್ಲಿ ಹೊಸ ಪರಭಾಷಾ ಚಿತ್ರಗಳ ಮುಕ್ತ ಪ್ರದರ್ಶನ

ಅ.19 ರಿಂದ ರಾಜ್ಯದಲ್ಲಿ ಹೊಸ ಪರಭಾಷಾ ಚಿತ್ರಗಳ ಮುಕ್ತ ಪ್ರದರ್ಶನ

Subscribe to Filmibeat Kannada

ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್‌ 19 ರಿಂದ ಪರಭಾಷಾ ಚಿತ್ರಗಳನ್ನು ಬಿಡುಗಡೆ ಮಾಡಲು ರಾಜ್ಯ ಚಲನಚಿತ್ರ ಪ್ರದರ್ಶಕರ ಮಹಾ ಮಂಡಳಿ ನಿರ್ಧರಿಸಿದೆ.

ಏಳು ವಾರಗಳ ನಂತರ ರಾಜ್ಯದಲ್ಲಿ, ನೂತನ ಪರಭಾಷಾ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ನಿರ್ಧಾರಕ್ಕೆ ಸುಪ್ರಿಂಕೋರ್ಟು ತಡೆಯಾಜ್ಞೆ ನೀಡಿದೆ. ಅದರ ಬೆನ್ನಲ್ಲಿ ಪ್ರದರ್ಶಕರ ಮಹಾ ಮಂಡಳಿ ಈ ನಿರ್ಧಾರವನ್ನು ಘೋಷಿಸಿದೆ.

ನಿರ್ಮಾಪಕರ ಹಿತಕಾಯಲು, ಕಲಾತ್ಮಕ, ಪ್ರಯೋಗಾತ್ಮಕ ಹಾಗೂ ಪ್ರಶಸ್ತಿ ವಿಜೇತ ಚಿತ್ರಗಳಿಗೆ ವೇದಿಕೆ ಕಲ್ಪಿಸಲು ಮಂಡಳಿ ಮುಂದಾಗಿದೆ. ಇಂತಹ ಚಿತ್ರಗಳಿಗೆ ವಿತರಕರು ದೊರಕದೇ ಪ್ರೇಕ್ಷಕರನ್ನು ತಲುಪುತ್ತಿಲ್ಲ. ಹೀಗಾಗಿ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಾಮಂಡಳಿಯ ಧೋರಣೆಯಿಂದ ನಿರ್ಮಾಪಕರಿಗೆ ಅನುಕೂಲವಾಗಲಿದೆ ಎಂದು ಮಂಡಳಿಯ ಅಧ್ಯಕ್ಷ ಆರ್‌.ಆರ್‌.ಓದುಗೌಡ ತಿಳಿಸಿದ್ದಾರೆ.

ಉನ್ನತ ಮಟ್ಟದ ಸಭೆ: ಕನ್ನಡ ಚಿತ್ರೋದ್ಯಮದ ಬಿಕ್ಕಟ್ಟು ಬಗೆಹರಿಸಲು, ಕೆ.ಪಿ.ಪಾಂಡೆ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯ ಸಭೆ ಸೋಮವಾರ(ಅಕ್ಟೋಬರ್‌.18) ನಡೆಯಲಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada