»   » ಪುನೀತ್‌ ನಿರಪರಾಧಿ -ಪೊಲೀಸ್‌

ಪುನೀತ್‌ ನಿರಪರಾಧಿ -ಪೊಲೀಸ್‌

Subscribe to Filmibeat Kannada

ಮೈಸೂರು : ಮೈಸೂರು ದಸರಾ ಸಂದರ್ಭದಲ್ಲಿ ಚಿತ್ರನಟ ಪುನೀತ್‌ ರಾಜ್‌ಕುಮಾರ್‌ ಅವರು ಪತ್ರಕರ್ತರ ಮೇಲೆ ಹಲ್ಲೆ ಮಾಡಿಲ್ಲ ಎನ್ನುವ ವಿಷಯ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸ್‌ ಆಯುಕ್ತ ಬಿಪಿನ್‌ ಗೋಪಾಲಕೃಷ್ಣ ತಿಳಿಸಿದ್ದಾರೆ.

ಜಂಬೂ ಸವಾರಿ ಸಂದರ್ಭದಲ್ಲಿ ಪುನೀತ್‌ ಹಾಗೂ ಪತ್ರಕರ್ತರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು . ಈ ಸಂದರ್ಭದಲ್ಲಿ ಖಾಸಗಿ ವಾಹಿನಿಯಾಂದರ ವರದಿಗಾರ ಸಂತೋಷ್‌ಕುಮಾರ್‌ ನಡುಬೆಟ್ಟ ಎನ್ನುವವರ ಮೇಲೆ ಪುನೀತ್‌ ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಲಾಗಿತ್ತು . ಈ ಕುರಿತು ತನಿಖೆ ನಡೆದಿದ್ದು , ಪುನೀತ್‌ ಹಲ್ಲೆ ನಡೆಸಿರುವ ವಿಷಯ ಸತ್ಯಕ್ಕೆ ದೂರವಾದುದು ಎಂದು ಬಿಪಿನ್‌ ಗೋಪಾಲಕೃಷ್ಣ ತಮ್ಮ ತನಿಖಾ ವರದಿಯಲ್ಲಿ ತಿಳಿಸಿದ್ದಾರೆ.

ಆದರೆ, ನಾಗರಾಜ ಎಂಬಾತ ಸಂತೋಷ್‌ ಮೇಲೆ ಹಲ್ಲೆ ನಡೆಸಿರುವುದು ಸಾಕ್ಷಿಗಳಿಂದ ದೃಢಪಟ್ಟಿದೆ. ನಾಗರಾಜನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಯಾರಿಗೂ ನಾನು ಹೊಡೆದಿಲ ್ಲ-ಪುನೀತ್‌


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada