ಮದುವೆಗೆ ಮುನ್ನವೇ ಗರ್ಭವತಿಯಾದ ನಟಿ ಸ್ನೇಹಾ
ಶೀಘ್ರದಲ್ಲೇ ನಟಿ ಸ್ನೇಹಾ ತನ್ನ ಬಾಯ್‌ಫ್ರೆಂಡ್ ಪ್ರಸನ್ನ ಕೈ ಹಿಡಿಯಲಿದ್ದಾರೆ. ಮೇ 11ರಂದು ಇವರಿಬ್ಬರ ಮದುವೆ ನೆರವೇರಲಿದೆ. ಆದರೆ ಮದುವೆ ಮುನ್ನವೇ ಸ್ನೇಹಾ ತಪ್ಪು ಮಾಡಿದ್ದಾರೆ. ಈಗಾಕೆ ಗರ್ಭಿಣಿಯಾಗಲು ಹೊರಟಿದ್ದಾರೆ. ನೀವು ನಂಬಲೇ ಬೇಕು. ಕಂಪ್ಲೀಟ್ ಡೀಟೇಲ್ಸ್ ಸಮಾಧಾನಚಿತ್ತರಾಗಿ ಓದಿ...
ಸ್ನೇಹಾ ಗರ್ಭಿಣಿಯಾಗಬೇಕು ಎಂದುಕೊಂಡಿರುವುದೇನೋ ನಿಜ. ಆದರೆ ರಿಯಲ್ ಲೈಫ್‌ನಲ್ಲಿ ಅಲ್ಲವೇ ಅಲ್ಲ. ವಿದ್ಯಾಬಾಲನ್ ಅಭಿನಯಿಸಿರುವ 'ಕಹಾನಿ' ಚಿತ್ರದ ರೀಮೇಕ್‌ನಲ್ಲಿ. ಈ ಚಿತ್ರ ತೆಲುಗು ಭಾಷೆಗೆ ರೀಮೇಕ್ ಆಗುತ್ತಿದೆಯಂತೆ. ಇದರಲ್ಲಿ ಸ್ನೇಹಾ ಗರ್ಭಿಣಿ ಪಾತ್ರ ಪೋಷಿಸುತ್ತಿದ್ದಾರೆ.
ಉದ್ಯೋಗ ನಿಮಿತ್ತ ನಗರ ಪ್ರದೇಶಕ್ಕೆ ಹೋದ ತನ್ನ ಗಂಡ ಹಿಂತಿರುಗುವುದಿಲ್ಲ. ಆತನನ್ನು ಹುಡುಕಿಕೊಂಡು ಗರ್ಭಿಣಿಯಾದ ಈಕೆ ಹೊರಡುತ್ತಾಳೆ. ಅಲ್ಲಿ ಆಕೆಗೆ ಎದುರಗುವ ಪರಿಸ್ಥಿತಿಗಳ ಕಥಾ ಹಂದರವೇ ಈ ಚಿತ್ರ.
ಈ ಚಿತ್ರಕ್ಕೆ ಸ್ನೇಹಾ ಅವರೇ ಸೂಕ್ತ ಎನ್ನಿಸಿದ ಕಾರಣ ಆಕೆಯನ್ನು ಆಯ್ಕೆ ಮಾಡಲಾಗಿದೆಯಂತೆ. ಆದರೆ ಈ ಚಿತ್ರದಲ್ಲಿ ಸ್ನೇಹಾ ಮದುವೆ ಬಳಿಕ ಅಭಿನಯಿಸುತ್ತಾರೋ ಅಥವಾ ಮದುವೆಗೂ ಮುನ್ನವೇ ಒಪ್ಪಿಕೊಳ್ಳುತ್ತಾರೋ ಇನ್ನೂ ಗೊತ್ತಾಗಿಲ್ಲ. (ಏಜೆನ್ಸೀಸ್)


Click it and Unblock the Notifications











