ನಟಿ ನಿಖಿತಾ ಎದೆ ಮ್ಯಾಲೆ ಐತಂತೆ ದರ್ಶನ್ ಹಚ್ಚೆ
ನಟ ದರ್ಶನ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಘಟನೆಯಲ್ಲಿ ಚಾಲೆಂಜಿಂಗ್ ಸ್ಟಾರ್‌ರಷ್ಟೇ ಪ್ರಚಾರ ಪಡೆದ ನಟಿ ನಿಖಿತಾ ತುಕ್ರಲ್. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಆಕೆಯ ಮೇಲೆ ನಿಷೇಧ ಹೇರಿದ್ದು, ಬಳಿಕ ತಪ್ಪಾಯ್ತು ಎಂದದ್ದು ಈ ಎಲ್ಲಾ ನಾಟಕವನ್ನು ಈಗಾಗಲೆ ತಾವೆಲ್ಲರೂ ನೋಡಿದ್ದೀರಿ. ಇಷ್ಟೆಲ್ಲಾ ಗಲಾಟೆಗೆ ಕಾರಣವಾಗಿದ್ದು ಒಂದು ಹಚ್ಚೆ ಎಂದರೆ ನೀವು ನಂಬುತ್ತೀರಾ?
ನಂಬಲೇಬೇಕಾದಂತಹ ಒಂದು ಸಂಗತಿ ತಡವಾಗಿ ತೇಲಿ ಬಂದಿದೆ. ಅದೇನಪ್ಪಾ ಅಂದ್ರೆ ನಿಖಿತಾ ಎದೆ ಮೇಲೆ 'ದರ್ಶನ್' ಅಂತ ಹಚ್ಚೆ ಹಾಕಿಸಿಕೊಂಡಿದ್ದಾರಂತೆ. ಇದು ಆಕೆಯ ಕಾಸ್ಟ್ಯೂಮ್ ಡಿಸೈನರ್‌ಗಳು ಆಡುವ ಮಾತು. ಈ ಹಚ್ಚೆಯೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಯಿತು ಎಂಬ ಮಾತುಗಳಿಗೆ ಈಗ ಬಲಬರುತ್ತಿದೆ.
ಮೈಸೂರಿನಲ್ಲಿ 'ಪ್ರಿನ್ಸ್' ಚಿತ್ರೀಕರಣದ ವೇಳೆ ದರ್ಶನ್ ಹಾಗೂ ನಿಖಿತಾ ಪ್ರಿನ್ಸ್ ಸಂದೇಶ್‌ನಲ್ಲಿ ಉಳಿದಿದ್ದರಂತೆ. ಆ ಹೋಟೇಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಕೂಡ ಇದೆ. ಇವರಿಬ್ಬರ ಮೇಲೆ ಗುಮಾನಿ ಬಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಫ್ತಿಯಲ್ಲಿ ಹೋಟೆಲ್‌ಗೆ ಹೊಕ್ಕು ಸರಿರಾತ್ರಿ ತನಕ ಸಿಸಿ ಕ್ಯಾಮೆರಾದಲ್ಲಿ ಬಿತ್ತರವಾಗುತ್ತಿದ್ದ ಹೋಟೆಲ್‌ನ ಚಲನವಲನಗಳನ್ನು ನೋಡುತ್ತಾ ಕೂತಿದ್ದರಂತೆ.
ಸಿಸಿಟಿವಿ ಕ್ಯಾಮೆರಾದಲ್ಲಿ ನೋಡುತ್ತಿರಬೇಕಾದರೆ ಮಧ್ಯರಾತ್ರಿಯಲ್ಲಿ ನಿಖಿತಾ ತಾರಾಡುತ್ತಾ ದರ್ಶನ್ ಕೋಣೆ ಸೇರಿದರಂತೆ. ಇದನ್ನು ಕಂಡದ್ದೇ ಎದ್ದು ಹೋಗಿ ಇಬ್ಬರನ್ನೂ ರೆಡ್ ಹ್ಯಾಂಡೆಡ್ ಆಗಿ ಹಿಡಿದಿದ್ದರು ಎಂಬ ಮಾತುಗಳು ಮೈಸೂರಿನಲ್ಲಿ ಭಾರಿ ಪ್ರಚಾರ ಪಡೆದಿವೆ. ಅಲ್ಲಿಂದಲೇ ಈ ಎಲ್ಲಾ ಗಲಾಟೆ ಶುರುವಾಗಿದ್ದು ಎನ್ನುತ್ತವೆ ಮೂಲಗಳು. (ಮೂಲ: ಹಾಯ್ ಬೆಂಗಳೂರು)


Click it and Unblock the Notifications