ಕಾಲುಕೆರೆದು ಜಗಳವಾಡಿದ್ದರು ಸುದೀಪ್-ರಮ್ಯಾ!
ಕಿಚ್ಚ ಸುದೀಪ್ ಮತ್ತು ಲಕ್ಕಿ ಸ್ಟಾರ್ ರಮ್ಯಾ ಇಬ್ಬರೂ ಕನ್ನಡ ಚಿತ್ರರಂಗದ ಆಸ್ತಿಗಳು ಎಂಬಷ್ಟು ಬೆಳೆದಿರುವ ಕಲಾವಿದರು. ಆದರೆ ಎರಡು ಮೇರು ಪ್ರತಿಭೆಗಳಲ್ಲಿ ಹೊಂದಾಣಿಕೆ ಅಸಾಧ್ಯ ಎಂಬ ಮಾತಿಗೆ ಪ್ರತ್ಯಕ್ಷ ಸಾಕ್ಷಿಯಂತಿದ್ದರು ಈ ಇಬ್ಬರೂ. ಇಬ್ಬರೂ ಯಾವುದೇ ಚಿತ್ರದಲ್ಲಿ ನಟಿಸಿದರೂ ಅಲ್ಲಿ ಜಗಳ, ಕಚ್ಚಾಟ ಗ್ಯಾರಂಟಿ ಎಂಬಂತಾಗಿದೆ.
ಯೋಗರಾಜ್ ಭಟ್ ನಿರ್ದೇಶನದ 'ರಂಗ ಎಸ್ಎಸ್‌ಎಲ್‌ಸಿ'ಯಲ್ಲಿ ಸುದೀಪ್-ರಮ್ಯಾ ಜೋಡಿ ಮೊದಲ ಬಾರಿಗೆಜತೆಯಾಗಿತ್ತು. ಅಲ್ಲೇ ಶುರುವಾಯ್ತು ನೋಡಿ, ಈ ಇಬ್ಬರ ನಡುವಿನ ಜಟಾಪಟಿ. "ಈ ಕಿಚ್ಚ ಸುದೀಪ್ ಅವರಿಗೆ ಸರಿಯಾಗಿ ಅಪ್ಪಿಕೊಳ್ಳೋದಿಕ್ಕೂ ಬರೋದಿಲ್ಲ" ಎಂದು ರಮ್ಯಾ ಬಹಿರಂಗವಾಗಿ ಟೀಕಿಸಿದ್ದು ಆಗ ದೊಡ್ಡ ಸುದ್ದಿಯೂ ಆಗಿತ್ತು.
ನಂತರ ಒಂದಷ್ಟು ವರ್ಷ ಸುಮ್ಮನಿದ್ದ ಇಬ್ಬರನ್ನೂ ಒಂದು ಮಾಡಿದ್ದು ಮುಸ್ಸಂಜೆ ಮಹೇಶ್. ತಮ್ಮ 'ಮುಸ್ಸಂಜೆ ಮಾತು' ಚಿತ್ರದಲ್ಲಿ ರಮ್ಯಾ, ಸುದೀಪ್ ಜೋಡಿಯನ್ನು ಹಾಕಿಕೊಂಡ ಅವರಿಗೆ ಈ ಇಬ್ಬರನ್ನು ಸಂಭಾಳಿಸುವುದರಲ್ಲಿ ಸಾಕುಸಾಕಾಗಿತ್ತು. ಅಲ್ಲೂ ಸುದೀಪ್-ರಮ್ಯಾ ಹಿಗ್ಗಾ-ಮುಗ್ಗಾ ಕಿತ್ತಾಡಿಕೊಂಡರು. ಆದರೆ ಅದು ಅಲ್ಲಿಗೂ ಕೊನೆಯಾಗಲಿಲ್ಲ. ಮುಂದಿನ ಪುಟ ನೋಡಿ...


Click it and Unblock the Notifications











