For Quick Alerts
ALLOW NOTIFICATIONS  
For Daily Alerts

ಒಳಚಡ್ಡಿ ಹಾಕಿಕೊಂಡೇ ಕೂತಿದ್ದೆ: ನೀತು ಚಂದ್ರ

By Mahesh
|

ಉತ್ತಮ ಅಭಿನೇತ್ರಿ ಎನಿಸಿದ್ದ ನೀತು ಚಂದ್ರ ಇತ್ತೀಚೆಗೆ ವಿವಾದಗಳ ಕ್ವೀನ್ ಆಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಪ್ರಚಾರ ಪ್ರಿಯತೆ ಫಲವೋ ಏನೋ ನೀತು ಸುತ್ತ ವಿವಾದಗಳ ಹುತ್ತ ಬೆಳೆಯುತ್ತಲೇ ಇದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಒಳಚಡ್ಡಿ ಮರೆತು ಬಂದಿದ್ದ ನೀತು, ಯಾನಾ ಗುಪ್ತ ಹಾದಿಯಲ್ಲಿ ಎಂದು ವೆಬ್ ತಾಣವೊಂದು ವರದಿ ಪ್ರಕಟಿಸಿತ್ತು.

ಆದರೆ, ಈಗ ವಿಷ್ಯ ತಿಳಿಯಾಗಿದ್ದು, ವರದಿಯಲ್ಲಿ ಬಂದಿರುವುದೆಲ್ಲಾ ಸುಳ್ಳು ಎಂದು ನೀತು ಬಹಿರಂಗವಾಗಿ ಹೇಳಿದ್ದಾರೆ. ಸುಳ್ಳು ವರದಿ ಮಾಡಿದ ವೆಬ್ ತಾಣದವರು ಕ್ಷಮೆಯಾಚಿಸಿದ್ದಾರೆ. ನನಗೆ ಈ ರೀತಿ ಪ್ರಚಾರ ಗಿಟ್ಟಿಸುವ ಯಾವುದೇ ಉದ್ದೇಶ ಇಲ್ಲ ಎಂದು ನಟಿ ನೀತು ಹೇಳಿದ್ದಾರೆ.

ವಿಡಿಯೋ: ವಿವಾದ ಕಾರಣವಾಗಿರುವ ನೀತು ಚಡ್ಡಿ ಪುರಾಣ

ಕೀಳುಮಟ್ಟದ ಪ್ರಚಾರ ಪ್ರಿಯತೆಯ ಹಿಂದೆ ಬಿದ್ದಿರುವ ನೀತು, ಯಾನಾ ಅವರ ರೀತಿಯಲ್ಲಿ ಸಾಗುತ್ತಿದ್ದಂತೆ ತೋರುತ್ತಿದೆ. ಈ ರೀತಿ ಮಾಧ್ಯಮಗಳ ಗಮನ ಸೆಳೆಯುವುದು ಇತ್ತೀಚಿನ ಟ್ರೆಂಡ್ ಆಗಿ ಬಿಟ್ಟಿದೆ ಎಂದು ವೆಬ್ ಸೈಟ್ ವರದಿ ಮಾಡಿತ್ತು.

ಆದರೆ, ಯಾವಾಗ ನೀತು ಕಡೆಯವರು ಈ ವಿಷಯವನ್ನು ರಾಷ್ಟ್ರೀಯ ಮಹಿಳಾ ಆಯೋಗದ ಕಚೇರಿಗೆ ಒಯ್ಯುತ್ತಿದ್ದಾರೆ ಎಂದಾಗ ನಡುಗಿದ ವೆಬ್ ತಾಣದ ಅಧಿಕಾರಿಗಳು, ಬೇಷರತ್ ಕ್ಷಮೆಯಾಚನೆ ಮಾಡಿದ್ದಾರೆಂಬುದು ಸದ್ಯದ ಸುದ್ದಿ.

ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತ ನೀತು: ಅಂದ ಹಾಗೆ ಹಿಂದಿಯ 'ಟ್ರಾಫಿಕ್ ಸಿಗ್ನಲ್' ಹಾಗೂ 'ಗರಂ ಮಸಾಲಾ' ಚಿತ್ರಗಳಲ್ಲಿ ನಟಿಸಿರುವ ನೀತು, ಟ್ರಾಫಿಕ್ ಸಿಗ್ನಲ್ ಚಿತ್ರದಲ್ಲಿನ ನಟನೆ ವಿಮರ್ಶಕರ ಮೆಚ್ಚುಗೆಯನ್ನು ಪಡೆದಿದ್ದರು. ಆದರೆ, ನಂತರದ ದಿನಗಳಲ್ಲಿ ಜುಹೂ ಬೀಚ್ ನ ಸಲಿಂಗ ರೋಮಾಂಚನಕಾರಿ ಫೋಟೋ ಶೂಟ್ ಪ್ರಕರಣ, ಅಪಾರ್ಟ್ಮೆಂಟ್ ಚಿತ್ರದಲ್ಲಿ ಬಕೀಟ್ ಹಿಂದೆ ಅಡಗಿ ಕೂರುವ ದೃಶ್ಯ, ಪಾಕ್ ಕ್ರಿಕೆಟ್ಟಿಗ ಆಸೀಫ್ ರ ಕರೆ ಪಟ್ಟಿಯಲ್ಲಿ ನೀತು ಚಂದ್ರ ಮೊಬೈಲ್ ಸಂಖ್ಯೆ ಕಾಣಿಸಿಕೊಂಡು, ಮ್ಯಾಚ್ ಫಿಕ್ಸಿಂಗ್ ಜಾಲದಲ್ಲಿ ಈಕೆ ಸೇರಿದ್ದು ಎಲ್ಲವೂ ಇಂದಿಗೂ ಕಪ್ಪುಚುಕ್ಕೆಯಾಗೆ ಉಳಿದಿದೆ.

ಬಿಹಾರಿ ಬೆಡಗಿ ನೀತು ಹಿಂದಿಯಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲೂ ಕಾಣಿಸಿಕೊಂಡು ಒಂದಷ್ಟು ಹೆಸರು ಗಳಿಸಿದ್ದಾರೆ. ಬರೀ ಮೈಮಾಟವಷ್ಟೇ ಅಲ್ಲದೆ ನಟನಾ ಪ್ರತಿಭೆಯತ್ತ ಗಮನ ಹರಿಸತೊಡಗಿದರೆ ವೃತ್ತಿ ಜೀವನದಲ್ಲಿ ಬೆಳೆವಣಿಗೆ ಸಾಧ್ಯ ಏನಂತೀರಾ?. [ಬಾಲಿವುಡ್]

English summary
Bihar lass Neetu Chandra, rubbished the reports that she has appeared panty-less in an event. Her representative has clarified that it was misreported and they have got apology from the website, which claimed about her panty stunt.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more