'ಜೇಡ್ರಳ್ಳಿ'ಯಲ್ಲಿ ಮಾಜಿ ಸಚಿವ ರೇವಣ್ಣ, ಧರ್ಮಸಿಂಗ್

By Rajendra

ರೌಡಿಗಳ ನೈಜ ಜೀವನ ಕತೆಯಾಧಾರಿತ ಚಿತ್ರ 'ಜೇಡ್ರಳ್ಳಿ'. ಈ ಚಿತ್ರ ಇದೇ ಶುಕ್ರವಾರ (ಡಿ.23) ತೆರೆಕಾಣುತ್ತಿದೆ. ತಮ್ಮ ಜೀವನ ಕತೆಯಾಧಾರಿತ ಚಿತ್ರದಲ್ಲೇ ಸ್ವತಃ ಮಾಜಿ ಡಾನ್ ಜೇಡರಹಳ್ಳಿ ಕೃಷ್ಣಪ್ಪ ಅಭಿನಯಿಸಿರುವುದು ವಿಶೇಷ. ಈ ಚಿತ್ರದಲ್ಲಿ ಹಲವು ರಾಜಕಾರಣಿಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಚ್ ಎಂ ರೇವಣ್ಣ ಅವರನ್ನು ಹೋಲುವಂತಹ ಪಾತ್ರವನ್ನು ಸೃಷ್ಟಿಸಲಾಗಿದ್ದು, ಅದನ್ನು ಬ್ಲರ್ ಮಾಡುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ. ಹಾಗೆಯೇ ಚಿತ್ರದಲ್ಲಿ ಅಲ್ಲಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಹೆಸರು ಪದೇ ಪದೇ ಕೇಳಿಬರುತ್ತದಂತೆ.

ಈ ಬಗ್ಗೆಯೂ ಸೆನ್ಸಾರ್ ಅಧಿಕಾರಿಗಳು ಧರ್ಮಸಿಂಗ್ ಹೆಸರನ್ನು ಮ್ಯೂಟ್ ಮಾಡುವಂತೆ ತಿಳಿಸಿದ್ದಾರೆ. ಯು/ಎ ಸರ್ಟಿಫಿಕೇಟ್‌ನೊಂದಿಗೆ ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ಅನೇಕ ವಿವಾದಾತ್ಮಕ ಸನ್ನಿವೇಶಗಳು ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಒಂದು ಕಾಲದ ಭೂಗತ ದೊರೆ ಎಂದ ಮೇಲೆ ಹಲವು ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ನಿಕಟ ನಂಟು ಇದ್ದೇ ಇರುತ್ತದೆ. 'ಜೇಡ್ರಳ್ಳಿ' ಚಿತ್ರದಲ್ಲಿ ಆ ರೀತಿಯ ಸನ್ನಿವೇಶಗಳು ಇರುವ ಬಗ್ಗೆ ಗಾಂಧಿನಗರದಲ್ಲಿ ಅನುಮಾನಗಳು ಎದ್ದಿವೆ. ಒಟ್ಟಿನಲ್ಲಿ ಚಿತ್ರ ಬಿಡುಗಡೆ ಆದ ಮೇಲಷ್ಟೇ ಈ ವಿವರಗಳು ಬಹಿರಂಗವಾಗಲಿವೆ. (ಏಜೆನ್ಸೀಸ್)

More from Filmibeat

English summary
Bangalore under world former don now the social servant H Krishnamurthy alias Jedarahalli Krishnappa's Kannada movie 'Jedarahalli' is set to release on 23rd Dec . Sources claims that in this film former minister H.M. Revanna look alike and former CM Dharam Singh names are used. But censor board has objected the scenes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X