ನಟಿಯನ್ನು ಮಂಚಕ್ಕೆ ಆಹ್ವಾನಿಸಿದ ಹೆಸರಾಂತ ನಿರ್ದೇಶಕ

By Rajendra

Rina Golan
ಸಿನಿಮಾಗಳಲ್ಲಿ ಅವಕಾಶ ಬೇಕೆ? ಹಾಗಿದ್ದರೆ ಚಿತ್ರದ ನಿರ್ದೇಶಕನ ಲೈಂಗಿಕ ಬಯಕೆ ತೀರಿಸಿದರೆ ಆಯಿತು. ಚಿತ್ರಕ್ಕೆ ನಾಯಕಿಯ ಆಯ್ಕೆ ಬಹುತೇಕ ಖಚಿತವಾದಂತೆ. ಈ ರೀತಿಯ ಸುದ್ದಿಗಳು ಹೊಸತೂ ಅಲ್ಲ ಹಳತೂ ಅಲ್ಲ. ಆಗಾಗ ಸ್ಫೋಟಿಸುತ್ತಲೇ ಇರುತ್ತವೆ. ಆದರೆ ಹೆಸರಾಂತ ನಿರ್ದೇಶಕನೊಬ್ಬ ಇದೇ ದಾರಿ ಹಿಡಿದರೆ ಹೇಗೆ?

ಬಾಲಿವುಡ್ ನಿರ್ದೇಶಕನೊಬ್ಬ ತಮ್ಮನ್ನು ಮಂಚಕ್ಕೆ ಆಹ್ವಾನಿಸಿದ್ದಾಗಿ ಇಸ್ರೇಲ್ ನಟಿಯೊಬ್ಬಳು ಪುಸ್ತಕವನ್ನೇ ಬರೆದಿದ್ದಾರೆ. ರೂಪದರ್ಶಿಯಾಗಿರುವ ಆಕೆಯ ಹೆಸರು ರೀನಾ ಗೋಲನ್. ಆಕೆ ಬರೆದ ಪುಸ್ತಕದ ಶೀರ್ಷಿಕೆ ಹೀಗಿದೆ: "ಡಿಯರ್ ಮಿಸ್ಟರ್ ಬಾಲಿವುಡ್". ಈ ಪುಸ್ತಕದಲ್ಲಿ ಆಕೆ ತಮ್ಮನ್ನು ಮಂಚಕ್ಕೆ ಆಹ್ವಾನಿಸಿದ ನಿರ್ದೇಶಕನ ಬಗ್ಗೆ ವಿಶದವಾಗಿ ಬರೆದಿದ್ದಾರೆ.

ಈ ಪುಸ್ತಕ ಇತ್ತೀಚೆಗೆ ನಡೆದ ಮಿಯಾಮಿ ಚಿತ್ರೋತ್ಸವದಲ್ಲಿ ಬಿಡುಗಡೆ ಕಂಡಿದೆ. "ನಾನು ಅವಕಾಶಕ್ಕಾಗಿ ಬಾಲಿವುಡ್ ಬಾಗಿಲು ತಟ್ಟಿದ್ದೆ. ಅವಕಾಶ ಸಿಗಲಿಲ್ಲ. ಆದರೆ ನಿರ್ದೇಶಕ, ನಿರ್ಮಾಪಕ ಸುಭಾಷ್ ಘಾಯ್ ತಮ್ಮನ್ನು ಮಂಚಕ್ಕೆ ಆಹ್ವಾನಿಸಿದರು. ಅನೀಜ್ ಬಾಜ್ಮಿ, ಭಜನ್ ಗಾಯಕ ಅನೂಪ್ ಜಲೋಟಾ, ಭಾರತೀಯ ಕ್ರಿಕೆಟ್‌ನ ಮಾಜಿ ದೈಹಿಕ ತರಬೇತುದಾರ ಡಾ. ಅಲಿ ಇರಾನಿ ಕೂಡ ತಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳಲು ನೋಡಿದರು" ಎಂದಿದ್ದಾರೆ.

ಇಷ್ಟು ಹೇಳಿರುವ ರೀನಾ, ತಮಗೆ ಚಿತ್ರರಂಗದಲ್ಲಿ ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ ಹೀಗೆ ಬರೆದಿಲ್ಲ. ಬಾಲಿವುಡ್‌ನಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದು ಸಾಮಾನ್ಯರಿಗೂ ತಿಳಿಯಲಿ ಎಂದು ಈ ಪುಸ್ತಕ ಬರೆದಿದ್ದೇನೆ. ಸಿನಿಮಾ ತಾರೆಗಳನ್ನು ದೈಹಿಕವಾಗಿ ಬಳಸಿಕೊಳ್ಳುವ ಪರಿಪಾಠ ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿದೆ ಎಂದು ರೀನಾ ಒತ್ತಿ ಹೇಳಿದ್ದಾರೆ. (ಏಜೆನ್ಸೀಸ್)

More from Filmibeat

English summary
Rina Golan, an Israeli national has accused Bollywood filmmakers Subhash Ghai and Anees Bazmee of casting couch in her book Dear Mister Bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X