ವಿಚಿತ್ರ ತಿರುವು ಪಡೆದ ಎಸ್ಪಿಬಿ ಮಗನ ರೇಪ್ ಕೇಸ್
ಹೆಸರಾಂತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಪುತ್ರ ಎಸ್ ಪಿ ಬಿ ಚರಣ್ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ತಮಿಳಿನ ಸೆಕ್ಸಿ ತಾರೆ ಸೋನಾ ಹೈಡೆನ್ ಆರೋಪಿಸಿದ್ದರು. ಈಗ ರೇಪ್ ಕೇಸ್ ಹೊಸ ತಿರುವು ಪಡೆದುಕೊಂಡಿದೆ. ಸೋನಾ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಎಸ್ಪಿಬಿ ಚರಣ್ ಮುಂದಾಗಿದ್ದಾರೆ.
ಸೋನಾ ಅತ್ಯಾಚಾರ ಆರೋಪ ಹೊರಿಸಿದ ಮೇಲೆ ಎರಡು ದಿನ ಮುಗುಮ್ಮಾಗಿದ್ದ ಚರಣ್ ಕಡೆಗೂ ಮೌನ ಮುರಿದಿದ್ದಾನೆ. ಸೋನಾ ವಿರುದ್ಧ ನ್ಯಾಯಾಂಗ ಹೋರಾಟ ಮಾಡುವುದಾಗಿ ಗುಡುಗಿದ್ದಾನೆ.
ಈ ಸಂಬಂಧ ಶೀಘ್ರದಲ್ಲೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇನೆ ಎಂದಿರುವ ಚರಣ್, ಎಲ್ಲ ವಿವರಗಳನ್ನು ನೀಡುವುದಾಗಿ ಹೇಳಿದ್ದಾರೆ. ಮುಂದೇನು ಮಾಡಬೇಕು ಎಂದು ತಮ್ಮ ವಕೀಲರ ಬಳಿ ಚರ್ಚಿಸುತ್ತಿರುವುದುದಾಗಿಯೂ ಹೇಳಿದ್ದಾರೆ.
ಏತನ್ಮಧ್ಯೆ ನಟಿ ಸೋನಾಗೆ ಎದೆನೋವು ಕಾಣಿಸಿಕೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋನಾ ಪರಿಸ್ಥಿತಿ ಅಂತಹ ಸೀರಿಯಸ್ ಏನೂ ಅಲ್ಲ ಎಂದೂ ವೈದ್ಯರು ತಿಳಿಸಿದ್ದಾರೆ. ತೀವ್ರ ತಳಮಳ, ಆತಂಕದಿಂದ ಹೀಗಾಗಿದೆ ಎಂದಿದ್ದಾರೆ ವೈದ್ಯರು. ಇನ್ನೂ ಏನೇನಾಗುತ್ತದೋ ನೋಡ್ತಾ ಇರಿ. (ಏಜೆನ್ಸೀಸ್)


Click it and Unblock the Notifications











