»   » ದಾಂಪತ್ಯದ ಚಕ್ರಸುಳಿಯಲ್ಲಿ ‘ಚಕ್ರಿ’

ದಾಂಪತ್ಯದ ಚಕ್ರಸುಳಿಯಲ್ಲಿ ‘ಚಕ್ರಿ’

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಪುನೀತ್‌ ರಾಜ್‌ಕುಮಾರ್‌ ಅಭಿನಯದ ‘ವೀರ ಕನ್ನಡಿಗ’ ಚಿತ್ರದ ವಿಲನ್‌ (ಸಂಗೀತದ ಚಿತ್ರಹಿಂಸೆಯ ಮೂಲಕ) ಎನ್ನುವ ಕುಖ್ಯಾತಿಗೊಳಗಾದ ಪ್ರಖ್ಯಾತ ಸಂಗೀತ ನಿರ್ದೇಶಕ ಚಕ್ರಿ ಅವರೀಗ ಆಪಾದನೆಯ ಚಕ್ರಸುಳಿಗೆ ಸಿಕ್ಕಿದ್ದಾರೆ!

ಚಕ್ರಿ ಅವರ ಮೇಲಿರುವುದು ವರದಕ್ಷಿಣೆಗೆ ಒತ್ತಾಡಪಡಿಸಿದ ಆರೋಪ. ಇದೇನು ತೆಲುಗು ಸಿನಿಮಾದ ಇನ್ನೊಂದು ಗಾಸಿಪ್ಪು ಎಂದು ಅಲ್ಲಗಳೆವಂತಿಲ್ಲ . ಸ್ವತಃ ಚಕ್ರಿ ಅವರ ಪತ್ನಿ ಯೇ ದೂರು ದಾಖಲಿಸಿದ್ದಾರೆ. ವರದಕ್ಷಿಣೆಗಾಗಿ ಒತ್ತಾಯಿಸಿದ ದರು ಕರೀಂನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮದುವೆಗೆ ಮುನ್ನವೇ ವರದಕ್ಷಿಣೆಯ ರೂಪದಲ್ಲಿ ಚಕ್ರಿಗೆ 20 ಲಕ್ಷ ರುಪಾಯಿ ನೀಡಲಾಗಿತ್ತು . ಆದರೆ, ಮದುವೆಯ ನಂತರವೂ ಆತನ ದುಡ್ಡಿನ ದಾಹ ಇಂಗದೆ, ಹೆಚ್ಚಿನ ಹಣವನ್ನು ತವರಿನಿಂದ ತರುವಂತೆ ಪತ್ನಿಯನ್ನು ಒತ್ತಾಯಿಸುತ್ತಿದ್ದ ಎಂದು ಆಂಧ್ರದ ಮಾಧ್ಯಮಗಳು ವರದಿ ಮಾಡಿವೆ.

ಮತ್ತೊಂದು ಮೂಲದ ಪ್ರಕಾರ, ಚಕ್ರಿಯ ಮೇಲೆ ಆತನ ಹೆಂಡತಿ ಕೋಪಗೊಳ್ಳಲಿಕ್ಕೆ ವರದಕ್ಷಿಣೆ ಒತ್ತಾಯ ಕಾರಣವಾಗಿರದೆ ಬೇರೆಯೇ ಕಾರಣವಿದೆ. ಕೌಸಲ್ಯ ಎನ್ನುವ ಗಾಯಕಿಯಾಂದಿಗೆ ಚಕ್ರಿಗೆ ವಿಪರೀತ ಸಲುಗೆಯಿರುವುದೇ ಇದೆಲ್ಲ ಕಿರಿಕಿರಿಗೆ ಕಾರಣವಂತೆ.

ಚಕ್ರಿ ಹಾಗೂ ಆತನ ಪತ್ನಿಯ ಜಗಳ ಸೋಡಾಚೀಟಿವರೆಗೂ ಹೋಗಿದೆಯಂತೆ. ಕೌಸಲ್ಯಳ ಸಂಗ ತೊರೆಯಲು ನಿರಾಕರಿಸಿರುವ ಚಕ್ರಿ, ತನ್ನ ಪತ್ನಿಗೆ 25 ಲಕ್ಷ ರುಪಾಯಿಗಳ ಪರಿಹಾರ ನೀಡಲು ಸಿದ್ಧವಂತೆ.

ಚಕ್ರಿಯ ಸಂಗೀತದಲ್ಲಷ್ಟೇ ಅಲ್ಲ , ದಾಂಪತ್ಯದಲ್ಲೂ ಅಪಸ್ವರ ಸುಳಿಯಬೇಕೆ !

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada