»   » ಚಲನಚಿತ್ರ ಇತಿಹಾಸದ ತಗಾದೆ : ಇನ್ನೂ 6 ಪತ್ರಕರ್ತರಿಗೆ ನಿಷೇಧ

ಚಲನಚಿತ್ರ ಇತಿಹಾಸದ ತಗಾದೆ : ಇನ್ನೂ 6 ಪತ್ರಕರ್ತರಿಗೆ ನಿಷೇಧ

Subscribe to Filmibeat Kannada

*ಎಸ್ಕೆ

ಕರ್ನಾಟಕ ಚಲನಚಿತ್ರ ಇತಿಹಾಸದ ತಪ್ಪುಗಳ ತಿದ್ದುವ ಕೆಲಸ ನಡೆಯುತ್ತದೋ ಇಲ್ಲವೋ, ಆದರೆ ಈ ಕೆಲಸದಿಂದ ಬಲಿಪಶುಗಳಾದವರ ಸಂಖ್ಯೆ ಮಾತ್ರ ದಿನೇದಿನೇ ಏರುತ್ತಲೇ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಹೊಸ ಅಧ್ಯಕ್ಷ ಕೆ.ವಿ.ಚಂದ್ರಶೇಖರ್‌, ಪುಸ್ತಕದ ಸಂಪಾದಕ ಮಂಡಳಿಯಲ್ಲಿದ್ದ ಆರು ಪತ್ರಕರ್ತರು ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಕ್ಕೆ ನಿಷೇಧ ಹೇರುವುದರ ಮೂಲಕವೇ ತಮ್ಮ ಕೆಲಸ ಪ್ರಾರಂಭಿಸಿದ್ದಾರೆ!

ನಿಷೇಧಕ್ಕೆ ತುತ್ತಾದವರು :
ಎಂ.ವಿ.ರಾಮಕೃಷ್ಣಯ್ಯ (65) (ಫ್ರೀಲಾನ್ಸ್‌ ಪತ್ರಕರ್ತ)
ಡಾ. ಸಿ.ಸೀತಾರಾಂ (62) (ಸಂಯುಕ್ತ ಕರ್ನಾಟಕ)
ಬಿ.ಎನ್‌.ಸುಬ್ರಮಣ್ಯ (42) (ಜನವಾಹಿನಿ)
ಪಿ.ಜಿ.ಶ್ರೀನಿವಾಸ ಮೂರ್ತಿ(72) (ಫ್ರೀಲಾನ್ಸ್‌ ಪತ್ರಕರ್ತ)
ಶ್ರೀಕೃಪ (62) (ಹಿರಿಯ ಪತ್ರಕರ್ತರು)
ಮತ್ತು ದೊಡ್ಡ ಹುಲ್ಲೂರು ರುಕ್ಕೋಜಿ (45) (ಫ್ರೀಲಾನ್ಸ್‌ ಪತ್ರಕರ್ತರು)
- ಇವರು ಇನ್ನು ಮುಂದೆ ಸಿನಿಮಾ ಚಟುವಟಿಕೆಗಳಲ್ಲಿ ಭಾಗಿಯಾಗುವುದು ನಿಷಿದ್ಧ.

ಮಂಡಳಿಯ ಯಾದಿಯಲ್ಲಿದ್ದೂ ಇರದಂತಾದವರು ಪ್ರಜಾವಾಣಿಯ ಗಂಗಾಧರ ಮೊದಲಿಯಾರ್‌. ಕೃತಿ ಸಂಪಾದನೆಯ ಕೆಲಸ ಶುರುವಿನ ಹಂತದಲ್ಲಿದ್ದಾಗಲೇ ಇವರು ರಾಜೀನಾಮೆ ವಗಾಯಿಸಿದ್ದು ಈಗ ಜಗಜ್ಜಾಹೀರು. ಆ ಕಾರಣಕ್ಕೆ ಗಂಗಾಧರ್‌ ಬೀಸೋ ದೊಣ್ಣೆಯಿಂದ ಪಾರು.

ಬಹಿಷ್ಕಾರದ ಶಿಕ್ಷೆಯಿಂದ ಬಚಾವಾದ ಮತ್ತೊಬ್ಬರು ಚೇಂಬರ್‌ನ ಪದಾಧಿಕಾರಿ ಆರ್‌. ಲಕ್ಷ್ಮಣ್‌. ಸಂಪಾದಕೀಯ ಮಂಡಳಿಯಲ್ಲಿ ಹೆಸರಿದ್ದರೂ ತಮ್ಮ ಪಾತ್ರ ಇರದ ಬಗ್ಗೆ ಅಳಲು ತೋಡಿಕೊಂಡಿರುವ ಲಕ್ಷ್ಮಣ್‌, ಮಂಡಳಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದಾರೆ. ಆ ಕಾರಣದಿಂದಾಗಿ ಅವರಿಗೆ ಜೀವದಾನ ದೊರೆತಿದೆ.

ಇನ್ನಷ್ಟು ಪತ್ರಕರ್ತರಿಗೆ ಸೋಡಾಚೀಟಿ ?
ಜೂನ್‌ 28ರ ಸಭೆಯಲ್ಲೇ ಚೇಂಬರ್‌ ಈ ಪತ್ರಕರ್ತರ ನಿಷೇಧದ ನಿರ್ಣಯ ಕೈಗೊಂಡಿತ್ತು. ಅದನ್ನು ಈಗ ಜಾರಿ ಮಾಡಿದ್ದೇನೆ ಅಷ್ಟೇ ಎಂದು ಚೇಂಬರ್‌ನ ಹೊಸ ಅಧ್ಯಕ್ಷ ಚಂದ್ರಶೇಖರ್‌ ಬಹಿಷ್ಕಾರದಲ್ಲಿ ತಮ್ಮ ಪಾತ್ರದ ಕುರಿತು ಸ್ಪಷ್ಟನೆ ನೀಡುತ್ತಾರೆ.

ಈ ಬಹಿಷ್ಕಾರದ ಬಯಲು ನಾಟಕ ಇಷ್ಟಕ್ಕೇ ನಿಲ್ಲುವಂತಿಲ್ಲ . ಇನ್ನೂ ಒಂದಷ್ಟು ಪತ್ರಕರ್ತರಿಗೆ ಸಿನಿಮಾದಿಂದ ದೂರವಿಡುವ ಪ್ರಯತ್ನಗಳು ನಡೆಯುತ್ತಿವೆ. ತಮ್ಮ ಹಾಗೂ ತಮ್ಮ ಕುಟುಂಬದ ತೇಜೋವಧೆ ಮಾಡುತ್ತಿರುವ ಎರಡು ಪತ್ರಿಕೆಗಳ ಸಿನಿಮಾ ಪತ್ರಕರ್ತರಿಗೆ ಮಂಡಳಿ ನಿಷೇಧ ಹೇರದಿದ್ದರೆ ತಾವು ಸುಪ್ರಿಂಕೋರ್ಟ್‌ ಕಟ್ಟೆಯೇರಲೂ ಹಿಂಜರಿಯುವುದಿಲ್ಲ ಎಂದು ‘ಹತ್ತೂರ ಒಡೆಯ’ ಬಿ.ಸಿ.ಪಾಟೀಲ್‌ ಮಂಡಳಿ ಸಭೆಯಲ್ಲಿ ಗುಡುಗಿದ್ದಾರೆ. ಮಳೆ ಯಾವಾಗ ಬರುವುದೋ?

‘ಇದೆಲ್ಲಾ ಸ್ಟುಪಿಡ್‌’- ಸೀತಾರಾಂ
ಸಿನಿಮಾ ಚಟುವಟಿಕೆಗಳಿಂದ ತಮ್ಮನ್ನು ಬಹಿಷ್ಕರಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿಯ ಕ್ರಮಕ್ಕೆ ಹಿರಿಯ ಪತ್ರಕರ್ತ ಸಿ.ಸೀತಾರಾಂ ಅವರ ಪ್ರತಿಕ್ರಿಯೆ- ‘ಇದೆಲ್ಲಾ ಸ್ಟುಪಿಡ್‌.’

‘ಇತಿಹಾಸ ಸಂಪುಟಗಳಲ್ಲಿನ ಆಕ್ಷೇಪಾರ್ಹ ವಿಷಯಗಳ ಕುರಿತು ಪರಿಶೀಲಿಸಲು ಹಂಪಿ ವಿಶ್ವ ವಿದ್ಯಾಲಯ ಸಮಿತಿ ರಚಿಸಿದೆ. ಆ ಸಮಿತಿಯಲ್ಲಿ ವಾಣಿಜ್ಯ ಮಂಡಳಿಯ ಪ್ರತಿನಿಧಿಯಾಗಿ ಜಯಮಾಲಾ ಇದ್ದಾರೆ. ವರದಿ ಬರುವ ಮುನ್ನವೇ ಕ್ರಮ ಕೈಗೊಳ್ಳುವುದೆಂದರೇನು? ತನ್ನ ಪ್ರತಿನಿಧಿಯ ಬಗೆಗೇನೆ ಮಂಡಳಿಗೆ ನಂಬಿಕೆ ಇಲ್ಲವಾ?’ ಎನ್ನುವುದು ಸೀತಾರಾಂ ಪ್ರಶ್ನೆ.

ಮಂಡಳಿ ಬಹಿಷ್ಕಾರದ ನಿರ್ಧಾರದ ಕುರಿತು ಪತ್ರಕರ್ತ ಪಿ.ಜಿ. ಶ್ರೀನಿವಾಸಮೂರ್ತಿ ತಕ್ಷಣದ ಪ್ರತಿಕ್ರಿಯೆ ವ್ಯಕ್ತಪಡಿಸವದಕ್ಕೆ ನಿರಾಕರಿಸಿದರು. ‘ಮಂಡಳಿಯ ನಿರ್ಧಾರದ ಕುರಿತು ತಮಗೆ ಯಾವ ಮಾಹಿತಿಯೂ ಬಂದಿಲ್ಲ. ಅಧಿಕೃತ ಮಾಹಿತಿ ಬಂದ ನಂತರ ನೋಡೋಣ’ ಎಂದರು.

ಇತಿಹಾಸ ಮರುಕಳಿಸುತ್ತದಂತೆ. ಅಂದರೆ ತಪ್ಪುಗಳೂ ಮರುಕಳಿಸುತ್ತವಾ? ಮಂಡಳಿಯ ಕತ್ತಿಯಂತೂ ತೂಗುತ್ತಿದೆ. ನಂತರದ ಸರದಿ ಯಾರದೋ!

ವಿವಾದ ಪರ್ವ..
ಚಲನಚಿತ್ರ ಇತಿಹಾಸ ಪುಸ್ತಕದ ತಪ್ಪು ಹೆಕ್ಕಲು ಹಂಪಿ ವಿವಿ ಸಮಿತಿ
‘ಏಕಾಂಗಿ’ ರೀಶೂಟ್‌ ಆದಂತೆ ‘ಇತಿಹಾಸ’ ರೀರೈಟ್‌ ಆಗಬಾರದೇಕೆ?
‘ಐ ಡೋಂಟ್‌ ಕೇರ್‌’- ಪಾರ್ವತಮ್ಮ ರಾಜ್‌ಕುಮಾರ್‌
‘ಜೋರಾಗಿ ಮಾತಾಡು ಶಿವಣ್ಣ , ಇಲ್ಲಾಂದ್ರೆ ಕೀರಲು ಅಂತ ಬರೀತಾರೆ..’
ಬಚಾವಾದ ಬಾಬು ; ಬಲಿ ಪಶುಗಳಾದ ಬಡಪಾಯಿಗಳು
ಬಾಬು ಮೇಲೆ ಹರಿಹಾಯ್ದ ಸಿಂಹ !
‘ಕನ್ನಡ ಚಲನಚಿತ್ರ ಇತಿಹಾಸ’ ಪುಸ್ತಕ ಮಾರಾಟ ಸ್ಥಗಿತ - ಲಕ್ಕಪ್ಪಗೌಡ
ರಾಜ್‌ ಬರ್ತ್‌ಡೇಗೆ ಹಂಪಿ ವಿವಿಯ ಕಾಲೆಳೆಯುವ ಗ್ರಂಥವೇ ಗಿಫ್ಟ್‌ !

ವಾರ್ತಾ ಸಂಚಯ
ಚಿತ್ರೋದ್ಯಮ ಬಂದ್‌ : ಫಲ ಕೊಡದ ಕಾಗೋಡು ಕಾಜಿ ನ್ಯಾಯ

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada