»   » ಕನ್ನಡತಿ ಸುಮನ್‌ ರಂಗನಾಥ್‌ ಛೋಟಿಸಿ ಕಿರಿಕ್‌

ಕನ್ನಡತಿ ಸುಮನ್‌ ರಂಗನಾಥ್‌ ಛೋಟಿಸಿ ಕಿರಿಕ್‌

By: ಶಾಂತಾ, ಚೆನ್ನೈ
Subscribe to Filmibeat Kannada
suman ranganath
ಇದು ಬಿಚ್ಚಮ್ಮ ಸುಮನ್‌ ರಂಗನಾಥ್‌ ಎಂಬ ಮಾಜಿ ಕನ್ನಡತಿಯ ಬಾಡಿ ಡಬ್ಬಲ್‌ ಕತೆ-ಕತೆಯ ಮೊದಲ ವರ್ಶನ್‌ (ನಿರ್ಮಾಪಕ ಶಂಕರ ಹೇಳಿಕೆ ಆಧರಿಸಿದ್ದು)
ಆರ್‌.ಶಂಕರ್‌ ಎಂಬ ಚೆನ್ನೈನ ನಿರ್ಮಾಪಕ ತನ್ನ ಚೊಚ್ಚಲ ಸಿನಿಮಾದಲ್ಲೇ ಬಚ್ಚಲು ಹೊಕ್ಕಲು ನಿರ್ಧರಿಸಿದರು. ಇಂಥಾ ಹಸಿಹಸಿ ಸಿನಿಮಾ ತೆಗೆಯುವ ಯೋಜನೆ ಹಾಕಿಕೊಂಡಾಗ ನೆನಪಾದದ್ದು ಸುಮನ್‌ ರಂಗನಾಥ್‌ ಎಂಬ ಹಾಲಿ ಬಾಲಿವುಡ್‌ ನರ್ತಕಿ ! 15 ಲಕ್ಷಕ್ಕೆ ಆಕೆಯನ್ನು ಒಪ್ಪಿಸಿ, ಸಾಕಷ್ಟು ತೋರಿಸಬೇಕೆಂಬ ಒಪ್ಪಂದಕ್ಕೆ ಕೆಡವಿಕೊಂಡರು. ಮನೆ ಕಟ್ಟಲು ದುಡ್ಡು ಹರಿಸಿದ್ದ ಸುಮನ್‌ಗೂ ದುಡ್ಡು ಬೇಕಿತ್ತು. ಒಪ್ಪಿ, ನಟಿಸಿದಳು. ಚಿತ್ರದ ಹೆಸರು 'ಸ್ತ್ರೀ".

ಆದರೆ, ಚಿತ್ರವನ್ನು ಬಿಡುಗಡೆ ಮಾಡಿದರೆ ತನ್ನ ಮದುವೆಗೆ ಸಂಚಕಾರ ಬರಬಹುದು ಅಂತ ಅಲವತ್ತುಕೊಂಡ ಕಾರಣ ಕೆಲ ಕಾಲ ಬಿಡುಗಡೆಯನ್ನು ಮುಂದೂಡಲಾಯಿತು. ಈಗ ಸುಮನ್‌ ಮದುವೆಯಾಗಿದೆ; ಅದೂ ದೊಡ್ಡ ಮನುಷ್ಯನ ಜೊತೆಯಲ್ಲಿ. ಈಗಲಾದರೂ ಚಿತ್ರ ಬಿಡುಗಡೆ ಮಾಡಬಹುದೆ ಅಂದರೆ, ಕೂಡದೆಂದು ಪಟ್ಟು ಹಿಡಿದಿದ್ದಾಳೆ ಅನ್ನೋದು ಶಂಕರ್‌ ದೂರು. ಈ ಬಗ್ಗೆ ಫಿಲ್ಮ್‌ ಚೇಂಬರ್‌ ಮತ್ತು ನಿರ್ಮಾಪಕರ ಸಂಘಕ್ಕೆ ದೂರು ಕೊಟ್ಟಿದ್ದೂ ಆಗಿದೆ.

ನವೆಂಬರ್‌ 22ಕ್ಕೆ ಚಿತ್ರ ಬಿಡುಗಡೆಯಾಗಬೇಕು. ಸೆನ್ಸಾರ್‌ ಮಂಡಳಿಯೂ ಚಿತ್ರಕ್ಕೆ ಸರ್ಟಿಫಿಕೇಟ್‌ ದಯಪಾಲಿಸಿದೆ. ಸಿನಿಮಾ ಬಿಡುಗಡೆ ಆಗಬಾರದೆಂದರೆ ತಾವು ಮಾಡಿರುವ ಖರ್ಚಿಗೆ ಬಡ್ಡಿ ಸೇರಿಸಿ ಸುಮನ್‌ ಬರೋಬ್ಬರಿ ಒಂದೂಕಾಲು ಲಕ್ಷ ರುಪಾಯಿ ಕಕ್ಕಲಿ ಎಂಬುದು ಶಂಕರ್‌ ಪಟ್ಟು.

ಈಗ ಇದೇ ಕತೆ ಸುಮನ್‌ ಹೇಳುವಂತೆ-
ನಾನು 'ಸ್ತ್ರೀ" ಚಿತ್ರದಲ್ಲಿ ನಟಿಸಿರುವುದೇನೋ ನಿಜ. ಆದರೆ, ಅದರಲ್ಲಿ ಅಂಥಾ ಹಸಿಬಿಸಿ ದೃಶ್ಯಗಳೇನೂ ಇಲ್ಲ. ನಾನು ಚಿತ್ರ ಬಿಡುಗಡೆ ಮಾಡಬೇಡಿ ಅಂತಲೂ ಹೇಳಿಲ್ಲ. ಶಂಕರ್‌ ನಿರ್ದೇಶನದಂತೆ ಕೆಲಸ ಮಾಡಿದ್ದೇನೆ. ಅದೊಂದು ದೊಡ್ಡವರ ಚಿತ್ರವಾದರೂ ಸಂವೇದನೆಗಳನ್ನು ಉಳ್ಳ, ಕಳಕಳಿಯ ಚಿತ್ರ. ಆದರೆ ಈಗ ಯಾಕೆ ಪೀಡಿಸುತ್ತಿದ್ದಾರೆಯೋ ಗೊತ್ತಿಲ್ಲ.

ಸಿನಿಮಾದಲ್ಲಿ ಅಂಥಾದ್ದೇನೈತಿ?
ಮೊದಲ ಪ್ರಿಂಟ್‌ ನೋಡಿರುವವರು ಹೇಳುವಂತೆ-ವಿವೇಕಾನಂದ ಎಂಬ ಹೊಸ ಪ್ರತಿಭೆ ಚಿತ್ರದಲ್ಲಿ ಸುಮನ್‌ ಗಂಡನ ಪಾತ್ರಧಾರಿ. ಶೋಬನದ ರಾತ್ರಿಯ ಸೀನಲ್ಲಿ ರೇಷ್ಮೆ ಸೀರೆ ಉಟ್ಟುಕೊಂಡು ಸುಮನ್‌ ಬರುತ್ತಾಳೆ. ವಿವೇಕಾನಂದನಿಗೆ ಪರಮಾನಂದ. ದೀರ್ಘಕಾಲ ತಬ್ಬುತ್ತಾನೆ. ಸುಮನ್‌ಳನ್ನು ಅಂಗಾತ ಮಲಗಿಸಿ ಅಂಗಾಂಗಗಳನ್ನೆಲ್ಲಾ ಲೊಚಲೊಚನೆ ಚುಂಬಿಸುತ್ತಾನೆ. ಅಷ್ಟೇ ಅಲ್ಲ, ಅವಳ ಕುಪ್ಪಸ ಕಳಚುವ ದೃಶ್ಯವೂ ಉಂಟು !

ಇನ್ನೊಂದು ದೃಶ್ಯದಲ್ಲಿ ಚಿತ್ರದಲ್ಲಿ ಮಾಡೆಲ್‌ ಪಾತ್ರವಹಿಸಿರುವ ಧೀರಜ್‌ ಎಂಬಾತನ ಜೊತೆ ಸುಮನ್‌ ಕುಣಿತ. ಡಿಸ್ಕೋ ಮಾಡುತ್ತಲೇ ನಡೆಯುವ ಈ ಸರಸ ಈ ಮೊದಲು ಹೇಳಿದ ದೃಶ್ಯವನ್ನೂ ನಿವಾಳಿಸುವಂತಿದೆ. ಇಲ್ಲೂ ಚುಂಬನ, ಸ್ಪಂದನದ ಕೆಲಸ ಮುಂದುವರೆಯುತ್ತದೆ. ಚಿತ್ರದಲ್ಲಿ ಹಾಡುಗಳೂ ಉಂಟು.

ಆದರೆ,
ಈವರೆಗೆ ಚಿತ್ರವನ್ನೇ ನೋಡದ ಸುಮನ್‌ ಪ್ರಕಾರ ಸಿನಿಮಾದಲ್ಲಿ ಹಾಡುಗಳಿಲ್ಲ. ಈಕೆಯ ಪ್ರಕಾರ ಸಿನಿಮಾದ ನಿರ್ದೇಶಕ ಖುದ್ದು ಶಂಕರ್‌. ನಿರ್ಮಾಪಕ ಶಂಕರ್‌ ಹೆಸರಿಸಿರುವ ನಿರ್ದೇಶಕ ಅನಿಲ್‌. ಚಿತ್ರದ ನಟ ಧೀರಜ್‌ ಹೇಳುವಂತೆ ವಿಶ್ವನಾಥ್‌ ಎಂಬುವವ ಈ ಚಿತ್ರವನ್ನು ನಿರ್ದೇಶಿಸಿದ್ದು !

ಅಲ್ಲಿಗೆ ಏನು ಕಿರಿಕ್ಕು ನಡೆದಿಬಹುದು ಅನ್ನುವುದು ಅಂದಾಜಿಗೆ ಸಿಕ್ಕೀತು. ಸುಮನ್‌ ರಂಗನಾಥ್‌ ದೂರುವಂತೆ ಶಂಕರ್‌ ಒಬ್ಬ ಫ್ಲರ್ಟ್‌. ಇದೇ ಸಿನಿಮಾದ ಇನ್ನೊಬ್ಬ ಹೆಣ್ಣು ಪಾತ್ರಧಾರಿಗೆ ಕೇವಲ ಕೆಳ ಉಡುಪು ಧರಿಸಿ ಕೆಮೆರಾ ಮುಂದೆ ನಿಲ್ಲುವಂತೆ ಈತ ಒತ್ತಾಯಿಸಿದ್ದ. ಆಗ ಆ ಹುಡುಗಿ ದೂರು ಕೊಟ್ಟು ಪೊಲೀಸರೂ ಇವನನ್ನು ಎಳೆದುಕೊಂಡು ಹೋಗಿದ್ದರು. ಯಾರಿಗೂ ಇವನು ಇನ್ನೂ ದುಡ್ಡೇ ಕೊಟ್ಟಿಲ್ಲ. ಇನ್ನಾರನ್ನೋ ಬಳಸಿಕೊಂಡು ನಾನು ಅಭಿನಯಿಸಿರುವ ದೃಶ್ಯಗಳನ್ನು ಹದಗೆಡಿಸಿದ್ದಾನೆ !

ಒಟ್ಟಿನಲ್ಲಿ ಇದು ಇನ್ನೊಂದು ಛೋಟಿಸೀ ಟೈಪಿನ ಕಿರಿಕ್ಕು. ಸಿನಿಮಾದಲ್ಲಿ ಪದೇಪದೇ ಇಂಥಾ ಕಿರಿಕ್ಕು ನಡೆಯುತ್ತಿರುವ ಬಗ್ಗೆ

English summary
Chennai now has its own Chhotisi controversy, starring Suman Ranganath

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada