ಪ್ರಭುದೇವ ಜೊತೆಗಿನ ಗುಟ್ಟು ಒಡೆದ ನಯನತಾರಾ
ಪ್ರಭುದೇವ ಹಾಗೂ ನಯನತಾರಾ ನಡುವಿನ ಸಂಬಂಧ ಹಳಸಿದೆ ಎಂಬ ಸುದ್ದಿಗಳು ಆಗಿಂದಾಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಬಗ್ಗೆ ನಟಿ ನಯನತಾರಾ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಪ್ರಭು ಜೊತೆಗಿನ ಸಂಬಂಧದ ಬಗ್ಗೆ ನಯನಿ ಹೇಳುವುದೇನೆಂದರೆ...
"ಪ್ರೇಮಕ್ಕಾಗಿ ನಾನು ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧಳಿದ್ದೇನೆ. ಪ್ರಭುದೇವನಿಗಾಗಿ ಸಾಕಷ್ಟು ಕಳೆದುಕೊಂಡೆ. ಮದುವೆಯವರೆಗೂ ಹೋದ ನಮ್ಮ ಪ್ರೇಮ ವ್ಯವಹಾರ ವಿಫಲವಾಯಿತು. ಪ್ರೇಮದ ವಿಚಾರದಲ್ಲಿ ಸಮಸ್ಯೆಗಳು ತಲೆ ಎತ್ತಿದಾಗ ಆರಂಭದಲ್ಲೇ ಕಿತ್ತುಹಾಕಬೇಕು. ಇಲ್ಲದಿದ್ದರೆ ಅವು ವಿಶ್ವರೂಪ ತಾಳಿ ವೈಫಲ್ಯಕ್ಕೆ ಕಾರಣವಾಗುತ್ತದೆ."
"ನನ್ನ ಜೀವನದಲ್ಲಿ ನಡೆದದ್ದೂ ಅಷ್ಟೇ. ಇದು ನನ್ನ ವೈಯಕ್ತಿಕ ವಿಷಯ. ಎಲ್ಲರಿಗೂ ಹೇಳುವ ಅವಶ್ಯಕತೆ ಇಲ್ಲ. ಪ್ರಭುದೇವ ಜೊತೆಗಿದ್ದಾಗ ಆತನೊಂದಿಗೆ ಶೇಕಡ ನೂರಕ್ಕೆ ನೂರರಷ್ಟು ಒಳ್ಳೆಯವಳಾಗಿ ನಡೆದುಕೊಂಡೆ. ಆ ಪ್ರೇಮಕ್ಕೆ ಈಗ ಅರ್ಥ, ಬೆಲೆ ಇಲ್ಲ ಎಂದು ಗೊತ್ತಾದಾಗ, ದೂರ ಸರಿಯುವುದೇ ಒಳಿತೆಂದು ಭಾವಿಸಿದೆ".
"ಹೀಗೆ ನನ್ನ ಪ್ರೇಮ ಅರ್ಧದಲ್ಲೇ ನಿಂತುಹೋಗುತ್ತದೆ ಎಂದುಕೊಂಡು ಊಹಿಸಿರಲಿಲ್ಲ. ಆದರೆ ಜೀವನದಲ್ಲಿ ಏನು ಬೇಕಾದರೂ, ಯಾವಾಗ ಬೇಕಾದರೂ ಸಂಭವಿಸಬಹುದು ಎಂಬುದು ಮಾತ್ರ ಅರ್ಥವಾಗಿದೆ" ಎಂದು ನಯನತಾರಾ ನಯವಾಗಿ ಗುಟ್ಟು ಒಡೆದಿದ್ದಾರೆ. (ಏಜೆನ್ಸೀಸ್)


Click it and Unblock the Notifications











