ಮುದುಕರ ಜತೆ ಸರಸವಿದೇನೆ ರಾಧಿಕಾ?

"ಗಣೇಶ್ ಕಾಸರಗೋಡು ಈಗಲೂ ಫೀಲ್ಡ್‌ನಲ್ಲಿ ಇದ್ದಾರಾ? ಅವರು ಪ್ರೆಸ್‌ಮೀಟ್‌ಗಳಿಗೆ ಈಗಲೂ ಬರ್ತಿದ್ದಾರಾ?" ಎಂದು ಕೇಳಿದ್ದು ಬೇರೆ ಯಾರೂ ಅಲ್ಲ; ಒಂದು ಕಾಲದ ನಟಿ ರಾಧಿಕಾ. ಕೇಳಿಸಿಕೊಂಡವರು 'ಉದಯವಾಣಿ'ಯ ಕಿರಿಯ ಮಿತ್ರ ರವಿಪ್ರಕಾಶ್ ರೈ. ವರದಿ ಒಪ್ಪಿಸಿ ನನ್ನ ಮುಖವನ್ನೇ ದಿಟ್ಟಿಸಿದರು ರೈ.
ನಾನೆಂದೆ: ನೆನಪಿದೆಯಾ ಆಕೆಗೆ? ಮರೆಯುವುದು ಹೇಗೆ ಸಾಧ್ಯ? ರಾಧಿಕಾ, ಮತ್ತು ಆಕೆಯ ಹೆತ್ತವರ ಬಗ್ಗೆ ಒಂದು ಪುಟ್ಟ ಸುದ್ದಿ ಬರೆದಿದ್ದೆ. ಇದು ಎಂಟು ವರ್ಷಗಳ ಹಿಂದಿನ ಮಾತು. ಆಗ ರಾಧಿಕಾ 'ಮಣಿ' ಚಿತ್ರದ ಶೂಟಿಂಗ್‌ಗಾಗಿ ಕಾಸರಗೋಡಿಗೆ ಹೋಗಿದ್ದಳು. ಅದು ಯೋಗರಾಜ್ ಭಟ್ಟರ ಮೊದಲ ಚಿತ್ರ. ಕರಿಸುಬ್ಬು ನಿರ್ಮಿಸಿದ ಈ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆದದ್ದು ಕರಾವಳಿ ತೀರದಲ್ಲಿ..." ಇಷ್ಟು ಹೇಳುವಷ್ಟರಲ್ಲಿ ರವಿಪ್ರಕಾಶ್ ರೈ ಆಸಕ್ತಿ ಕಳೆದುಕೊಂಡಿದ್ದರು.
ನಾನು ನೆನಪಿನಾಳಕ್ಕೆ ಇಳಿದು ಹೋದೆ. ಎಂಟು ವರ್ಷಗಳ ಹಿಂದೆ ಪ್ರಕಟವಾಗಿದ್ದ ರಾಧಿಕಾ ಬಗೆಗಿನ ಸುದ್ದಿಯ ಸಾರ ಹೀಗಿದೆ: ಛೀ ....ಥೂ...! ಒಮ್ಮೆ ಕ್ಯಾಕರಿಸಿ 'ಥೂ' ಎಂದರು ದೇವರಾಜ್. ಪಕ್ಕವಾದ್ಯ ಎಂಬಂತೆ ಅವರ ಧರ್ಮಪತ್ನಿ ಸುರೇಖಾ ಶಕ್ತಿಮೀರಿ 'ಛೀ' ಎಂದರು. ಈ ದೇವರಾಜ್ ಮತ್ತು ಸುರೇಖಾ ದಂಪತಿಗಳು ಬೇರಾರು ಅಲ್ಲ; ಈಗ ಕನ್ನಡ ಚಿತ್ರರಂಗದಲ್ಲಿ ನಂ.1 ಸ್ಥಾನದಲ್ಲಿರುವ ಕಲಾವಿದೆ ರಾಧಿಕಾ ಅವರ ಹೆತ್ತವರು.


Click it and Unblock the Notifications











