»   » ಸಮಾಜ ಸೇವೆ ಸಾಕು, ಕಾಸು ಬೇಕು: ಕಿಚ್ಚ ಸುದೀಪ್

ಸಮಾಜ ಸೇವೆ ಸಾಕು, ಕಾಸು ಬೇಕು: ಕಿಚ್ಚ ಸುದೀಪ್

Posted By:
Subscribe to Filmibeat Kannada
<ul id="pagination-digg"><li class="next"><a href="/gossips/20-kannada-actor-sudeep-telugu-movie-eega-aid0172.html">Next »</a></li></ul>
Sudeep
ಸುದೀಪ್ ಅವರಿಗೆ ಸಮಾಜಸೇವೆ ಸಾಕಾಗಿದೆಯಂತೆ. ಹಲವು ವರ್ಷಗಳ ಹಿಂದೆ ಕುಟುಂಬದವರೆಲ್ಲಾ ಒಟ್ಟಾಗಿ ಕುಳಿತು ನೋಡುವಂತ ಒಳ್ಳೆಯ ಚಿತ್ರ ಮಾಡುವ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದ ಕಿಚ್ಚ ಸುದೀಪ್ ಈಗ ಆ ವಿಷಯದಲ್ಲಿ ಮೌನವಾಗಿದ್ದಾರೆ. ಎಲ್ಲದಕ್ಕೂ ಮಿತಿ ಅನ್ನೋದು ಇರುತ್ತದೆ. ಸಮಾಜ ಸೇವೆ ಸಾಕು, ಇನ್ನಾದರೂ ದುಡ್ಡು ಮಾಡಬೇಕು ಎಂದು ಕಿಚ್ಚ ಬಾಯಿ ಬಿಟ್ಟು ಹೇಳಿದ್ದಾರೆ.

'ಮೈ ಆಟೋಗ್ರಾಫ್' ರಿಮೇಕ್ ಚಿತ್ರ ಗೆದ್ದ ಖುಷಿಯಲ್ಲಿ ಇಷ್ಟಪಟ್ಟು 'ನಂ.73, ಶಾಂತಿನಿವಾಸ' ಮಾಡಿದರು, ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಇನ್ನೊಂದು ರಿಮೇಕ್ 'ವೀರ ಮದಕರಿ' ಹಿಟ್ಟಾಯ್ತು. ಆದ್ರೆ 'ಜಸ್ಟ್ ಮಾತ್ ಮಾತಲ್ಲಿ' ಬರೀ ಮಾತಾಗಿಯೇ ಬಿದ್ದೋಯ್ತು. ಇನ್ನೊಂದು ರಿಮೇಕ್ 'ಕೆಂಪೇಗೌಡ'ನನ್ನು ಪ್ರೇಕ್ಷಕರು ಕೈ ಹಿಡಿದರು. ಇದರಿಂದ ಸುದೀಪ್ ಪಾಠ ಕಲಿತರು. ಅದೇನೆಂದರೆ ಪ್ರೇಕ್ಷಕರಿಗೆ ಸದಭಿರುಚಿಯ ಚಿತ್ರ ಬೇಡ ಅನ್ನೋದು.

ಈಗ ನನ್ನದು ಒಂದಷ್ಟು ಹಣ ಮಾಡಿಕೊಳ್ಳುವ ಸಮಯ. ಸಿನಿಮಾಗಳ ಮೂಲಕ ಸಮಾಜ ಸೇವೆ ಮಾಡುವುದಕ್ಕೆ ಈಗ ನನಗೆ ಮನಸ್ಸಿಲ್ಲ. ಅದಕ್ಕೆ ಅಂತ್ಯ ಹಾಡುವ ಕಾಲ ಬಂದಿದೆ. ಈಗ ನನ್ನ ಮುಂದಿರುವ ಗುರಿ ಕೇವಲ ನಟನೆ ಮಾತ್ರ. ಸದ್ಯಕ್ಕೆ ನಟನೆ ಮಾಡಿಕೊಂಡು ಇದ್ದುಬಿಡುತ್ತೇನೆ, ನಿರ್ದೇಶನವೂ ಬೇಡ" ಎಂದಿದ್ದಾರೆ ಸುದೀಪ್. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/gossips/20-kannada-actor-sudeep-telugu-movie-eega-aid0172.html">Next »</a></li></ul>

English summary
Actor Kichcha Sudeep told that it is the time to say good bye to Social Service through his movies and make money for himself. So, he concentrates only for acting and nothing else. &#13; &#13;

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X