twitter
    For Quick Alerts
    ALLOW NOTIFICATIONS  
    For Daily Alerts

    ಲಹರಿ ವೇಲು ಕ್ಷಮೆ ಕೇಳಿದ ಸಾಹಿತಿ ನಾಗೇಂದ್ರ ಪ್ರಸಾದ್

    By Mahesh
    |

    ಡಾ. ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರು ಬರೆದಿರುವ ಸಿ ಅಶ್ವಥ್ ಕಂಠಸಿರಿಯಲ್ಲಿ ಮೂಡಿಬಂದ "ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬಾ ಪ್ರೀತಿ, ಈಗ ಯಾಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ" ಹಾಡನ್ನು ನಿರ್ಮಾಪಕ ಕಮ್ ನಿರ್ದೇಶಕ ಡಾ. ನಾಗೇಂದ್ರ ಪ್ರಸಾದ್ ತಮ್ಮ 'ವಿನಾಯಕ ಗೆಳೆಯರ' ಬಳಗ ಚಿತ್ರದಲ್ಲಿ ಅಳವಡಿಸಿಕೊಂಡಿದ್ದರು. ಲಹರಿ ರೆಕಾರ್ಡಿಂಗ್ ಕಂಪೆನಿ ಅನುಮತಿ ಇಲ್ಲದೆ ಹಾಡನ್ನು ಅಳವಡಿಸಿದ್ದಕಾಗಿ ಲಹರಿ ಸಂಸ್ಥೆಯ ಕ್ಷಮೆ ಯಾಚಿಸಿದ್ದಾರೆ.

    ಈ ಲೈಟ್ ಮ್ಯುಸಿಕ್ ಹಾಡನ್ನು ಸಂದರ್ಭಕ್ಕೆ ಅನುಗುಣವಾಗಿ ಚಿತ್ರದಲ್ಲಿ ಬಳಸಿಕೊಂಡಿದ್ದೆ. ನಾನು ಆಶ್ವಥ್ ಅವರ ದೊಡ್ಡ ಅಭಿಮಾನಿ. ಈ ಹಾಡಿನ ರೈಟ್ಸ್ ಲಹರಿ ಸಂಸ್ಥೆಗೆ ಒಳಪಟ್ಟಿದ್ದು ಎನ್ನುವುದು ತಿಳಿಯದೇ ಚಿತ್ರದಲ್ಲಿ ಬಳಸಿಕೊಂಡೆ ಅದಕ್ಕಾಗಿ ಲಹರಿ ಸಂಸ್ಥೆ ಮಾಲೀಕ ವೇಲು ಬಳಿ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ನಾಗೇಂದ್ರ ಪ್ರಸಾದ್ ಅಪಾಲಜಿ ಪತ್ರ ಕಳುಹಿಸಿದ್ದಾರೆ.

    ತಕ್ಷಣ ದಿಂದಲೇ ಚಿತ್ರದಲ್ಲಿ ಈ ಹಾಡಿಗಾಗಿ ಲಹರಿ ಸಂಸ್ಥೆಗೆ ಕ್ರೆಡಿಟ್ ನೀಡುತ್ತೇನೆ. ವಿನಾಯಕ ಗೆಳೆಯರ ಬಳಗ ರಾಜ್ಯಾದ್ಯಂತ 35 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಮೊದಲ ವಾರದ ಗಳಿಕೆಯಿಂದ ಸಂತೋಷವಾಗಿದೆ.

    ಒಂದು ಒಳ್ಳೆ ಚಿತ್ರ ನೀಡಿದ ಸಂತೃಪ್ತಿ ನಮ್ಮ ಚಿತ್ರತಂಡಕ್ಕೆ ಇದೆ. ಚಿತ್ರ ಇನ್ನೂ ಉತ್ತಮ ಪ್ರದರ್ಶನ ಕಾಣುವ ಆಶಾಭಾವ ಹೊಂದಿದ್ದೇನೆ ಎಂದು ನಾಗೇಂದ್ರ ಪ್ರಸಾದ್ ಸಂತೋಷ ವ್ಯಕ್ತ ಪಡಿಸಿದ್ದಾರೆ.

    English summary
    Lyricist Nagendra Prasad has asked apology to Lahari aduio company owner Velu. Nagendra Prasad used song 'hinde hege chimmuttittu' sung by C Ashwath in his latest flick Vinayaka Geleyara balaga' audio rights of the above song is with Lahari Velu.
    Wednesday, July 20, 2011, 11:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X