For Quick Alerts
  ALLOW NOTIFICATIONS  
  For Daily Alerts

  ಬಾಯ್‌ಫ್ರೆಂಡ್ ಜತೆ ನನ್ನ ಸಂಬಂಧ ಚೆನ್ನಾಗಿದೆ, ರಮ್ಯಾ

  By Rajendra
  |

  ಕೆಲದಿನಗಳ ಹಿಂದೆ ಗೋಲ್ಡನ್ ಗರ್ಲ್ ರಮ್ಯಾ ಹಾಗೂ ಆಕೆಯ ಸಪ್ತಸಾಗರದಾಚೆಯ ಬಾಯ್‌ಫ್ರೆಂಡ್ ರಾಫೆಲ್ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ, ನನ್ನ ಮತ್ತು ರಾಫೆಲ್ ನಡುವಿನ ಗೆಳೆತನ ಇನ್ನೂ ಗಟ್ಟಿಯಾಗುತ್ತಿದೆ ಎಂದು ತಿಳಿಸಿದ್ದಾರೆ.

  ಲೂಸ್ ಮಾದ ಯೋಗೇಶ್ ಜೊತೆಗಿನ 'ಸಿದ್ಲಿಂಗು' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಮ್ಯಾ, ಇತ್ತೀಚೆಗೆ ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗಿದ್ದರಂತೆ. ಜೊತೆಗೆ ಅವರ ತಾಯಿಯೂ ಇದ್ದರಂತೆ. ಅಲ್ಲಿ ಇವರ ಮೇಲೆ ರಾಫೆಲ್ ತೋರಿದ ಪ್ರೀತಿ, ಪ್ರೇಮಕ್ಕೆ ಕರಗಿ ಹೋದೆವು ಎಂದಿದ್ದಾರೆ.

  ಅನಗತ್ಯ ವದಂತಿಗಳಿಗೆ ಕಿವಿಗೊಡಬೇಡಿ. ರಾಫೆಲ್ ಮತ್ತು ನನ್ನ ನಡುವೆ ಎಲ್ಲವೂ ಚೆನ್ನಾಗಿದೆ. ಶೀಘ್ರದಲ್ಲಿ ರಾಫೆಲ್ ಭಾರತದಲ್ಲೂ ತನ್ನ ಬಿಜಿನೆಸ್ ಶಾಖೆಗಳನ್ನು ತೆಗೆಯಲು ಮುಂದಾಗಿದ್ದಾರೆ. ಅವರಿಗೆ ನಾನೂ ನೆರವಾಗಲಿದ್ದೇನೆ. ಅನಗತ್ಯ ವದಂತಿಗಳನ್ನು ಹಬ್ಬಿಸುವುದನ್ನು ಬಿಟ್ಟು ನನ್ನನ್ನು ಸಂಪರ್ಕಿಸಿದ್ದರೆ ಎಲ್ಲವನ್ನೂ ತಿಳಿಸುತ್ತಿದ್ದೆ ಎಂದು ತಿರುಗೇಟು ನೀಡಿದ್ದಾರೆ. (ಏಜೆನ್ಸೀಸ್)

  English summary
  Golden girl Ramya denies rumours about break up with her boyfriend Rafel. She said her relationship with him has been growing strong. Meanwhile her latest film Sidligu showing successfully.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X