ರೇಪ್ ಕೇಸ್ ಹಿಂಪಡೆಯಲು ಸೋನಾಗೆ ಎಸ್ಪಿಬಿ ಮನವಿ
ತಮ್ಮ ಪುತ್ರ ರೇಪ್ ಕೇಸ್‌ನಲ್ಲಿ ಸಿಕ್ಕಿಬಿದ್ದಿರುವುದು ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಮನಸ್ಸನ್ನು ತೀವ್ರ ಘಾಸಿಗೊಳಿಸಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಸ್ವತಃ ಎಸ್ಪಿಬಿ ಅವರೆ ಮುಂದಾಗಿದ್ದಾರೆ. ಅವರು ನಟಿ ಸೋನಾರನ್ನು ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ಘಟನೆಯಿಂದ ಬಾಲಸುಬ್ರಹ್ಮಣ್ಯಂ ಅವರು ತೀವ್ರ ಮುಜುಗರಕ್ಕೆ ಈಡಾಗಿದ್ದು, ಈಗ ಅವರೇ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಅವರು ಎಂದೂ ಈ ರೀತಿಯ ವಿವಾದಗಳಲ್ಲಿ ಸಿಲುಕಿರಲಿಲ್ಲ. ಆದರೆ ತಮ್ಮ ಮಗ ಈಗ ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವುದು ಅವರನ್ನು ತೀವ್ರ ಕಳವಳಕ್ಕೆ ಈಡು ಮಾಡಿದೆ.
ಈ ಘಟನೆಯಿಂದ ತುಂಬಾ ನೊಂದಿರುವ ಅವರು, ತಮ್ಮ ಮಗನ ಮೇಲೆ ಹಾಕಿರುವ ರೇಪ್ ಕೇಸನ್ನು ಹಿಂಪಡೆಯುವಂತೆ ಸೋನಾರನ್ನು ವಿನಂತಿಸಿಕೊಂಡಿದ್ದಾರೆ. ಆದರೆ ಸೋನಾ ಮಾತ್ರ ಇದಕ್ಕೆ ಸುತಾರಾಂ ಒಪ್ಪಲಿಲ್ಲ ಎನ್ನುತ್ತವೆ ಮೂಲಗಳು. ತಮಿಳಿನ ಹೊಸ ಸೆಕ್ಸ್ ಬಾಂಬ್ ಸೋನಾ ಅವರು ಚರಣ್ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಯತ್ನ ಹೊರೆಸಿ ಪಾಂಡಿ ಬಜಾರ್ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿರುವುದು ಗೊತ್ತೆ ಇದೆ. (ಏಜೆನ್ಸೀಸ್)


Click it and Unblock the Notifications











