'ಸೂಪರ್' ಕದ್ದ ಮಾಲೆ? ಹೊಸ ವಿವಾದದಲ್ಲಿ ಉಪ್ಪಿ ಚಿತ್ರ
ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿರುವ 'ಸೂಪರ್'[ಚಿತ್ರ ವಿಮರ್ಶೆ] ಚಿತ್ರಕ್ಕೆ ಹೊಸ ವಿವಾದವೊಂದು ಎದುರಾಗಿದೆ. " ಸೂಪರ್ ಚಿತ್ರಕತೆ ನನ್ನನು. ಉಪೇಂದ್ರ ತಮ್ಮ ಕತೆಯನ್ನು ಕದ್ದು 'ಸೂಪರ್' ಚಿತ್ರ ಮಾಡಿರುವುದಾಗಿ ನಿರ್ದೇಶಕ ರಾಜಶೇಖರ್ ಗಂಭೀರ ಆರೋಪ ಮಾಡಿದ್ದಾರೆ.
ನನ್ನ ಅನುಮತಿಯಿಲ್ಲದೆ ಕತೆಯನ್ನು ಬಳಸಿಕೊಂಡು 'ಸೂಪರ್' ಎಂದು ಚಿತ್ರ ಮಾಡಿರುವುದಾಗಿ ಹೇಳಿರುವ ಅವರು, ಇತ್ತೀಚೆಗೆ ಉಪೇಂದ್ರ ಮನೆ ಮುಂದೆ ಗಲಾಟೆಯನ್ನು ಮಾಡಿದ್ದಾರೆ. ರಾಜಶೇಖರ್ ಅವರಿಗೆ ಕರ್ನಾಟಕ ಚಿತ್ರನಿರ್ದೇಶಕರ ಸಂಘ ಹಾಗೂ ಬರಹಗಾರರ ಸಂಘಟನೆಯ ಹಲವು ಅಧಿಕಾರಿಗಳು ಬೆಂಬಲ ನೀಡಿದ್ದಾರೆ.
ಆದರೆ ರಾಜಶೇಖರ್ ಅವರ ಆರೋಪಗಳನ್ನು ಉಪೇಂದ್ರ ಸಾರಾಸಗಟಾಗಿ ತಳ್ಳಿಹಾಕಿದ್ದು, ಈ ಆರೋಪಗಳು ನಿರಾಧಾರ ಎಂದಿದ್ದಾರೆ. ಒಂದು ವೇಳೆ ತಾವು ಕತೆ ಕದ್ದಿರುವುದೇ ಆದರೆ ಕಾನೂನು ಕ್ರಮಕೈಗೊಳ್ಳಿ. ಅದು ಬಿಟ್ಟು ಮನೆ ಮುಂದೆ ಬಂದು ಗಲಾಟೆ ಮಾಡುವುದು ಸರಿಯಲ್ಲ ಎಚ್ಚರಿಸಿದ್ದಾರೆ.
ಚಿತ್ರ ನಿರ್ದೇಶಕ ರಾಜಶೇಖರ್ ಅವರ ಸಹಾಯಕ ಬಾಹುಬಲಿ ಅವರ ಪ್ರಕಾರ, ಹಲವು ವರ್ಷಗಳ ಹಿಂದೆ ಉಪೇಂದ್ರ ಅವರಿಗೆ 'ಸೂಪರ್' ಚಿತ್ರದ ಕತೆಯನ್ನು ಹೇಳಲಾಗಿತ್ತು. ಆದರೆ ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಿರಲಿಲ್ಲ ಎಂಬುದು ಬೇರೆ ವಿಚಾರ. ಈಗ ಉಪೇಂದ್ರ ಅದೇ ಕತೆಗೆ 'ಸೂಪರ್' ಎಂದು ಹೆಸರಿಟ್ಟು ಚಿತ್ರ ಮಾಡಿದ್ದಾರೆ ಎಂದಿದ್ದಾರೆ.
ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು
ತಾವು ರಚಿಸಿರುವ ಮೂಲಕತೆಯಲ್ಲಿ 2020ರ ಭಾರತದ ಚಿತ್ರಣ ನೀಡಲಾಗಿತ್ತು. ಉಪೇಂದ್ರ ಅದನ್ನು ಕೊಂಚ ಬದಲಾಯಿಸಿ 2030 ಎಂದು ಮಾಡಿಕೊಂಡಿದ್ದಾರೆ. ಹಾಗಂತ ಸೂಪರ್ ಬಗ್ಗೆ ಬಾಹುಬಲಿ ಆರೋಪಿಸಿದ್ದಾರೆ. ಇಷ್ಟೆಲ್ಲಾ ರಾದ್ಧಾಂತವಾಗುತ್ತಿದ್ದರೂ ಈ ಬಗ್ಗೆ ಕರ್ನಾಟಕ ನಿರ್ದೇಶಕರ ಸಂಘ ಮೌನಕ್ಕೆ ಶರಣಾಗಿದೆ.
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ರಮೇಶ್ ಹೇಳುವುದೇನೆಂದರೆ. 'ಸೂಪರ್' ಚಿತ್ರದ ಬಗೆಗಿನ ಆರೋಪ ನಮ್ಮ ಕಿವಿಗೂ ಬಿದ್ದಿದೆ. ಆದರೆ ಈ ಸಂಬಂಧ ಇದುವರೆಗೂ ಯಾರೂ ಲಿಖಿತ ದೂರು ನೀಡಿಲ್ಲ. ಹಾಗಾಗಿ ನಾವು ಏನು ಕ್ರಮ ಕೈಗೊಳ್ಳುವಂತಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ 'ಸೂಪರ್' ಚಿತ್ರದ ಬಗೆಗಿನ ಸತ್ಯಾಸತ್ಯತೆಗಳು ಇನ್ನಷ್ಟೇ ಹೊರಬೀಳಬೇಕಾಗಿವೆ.


Click it and Unblock the Notifications











