ವಿಷ್ಣು, ರವಿಚಂದ್ರನ್ ಜತೆ ರಾಧಿಕಾ ಅಭಿನಯಿಸಲಿಲ್ಲ ಯಾಕೆ?

ಪಾಲಿಟಿಷಿಯನ್‌ಗಳ ಪರಿಚಯವಾದ ಮೇಲೆ ತುಂಬಾ ಸುಧಾರಿಸಿಕೊಂಡಿದ್ದೇನೆ. ಯಾರಾದರೂ ಆವಾಜ್ ಹಾಕಿದರೆ ಗಂಟಲು ಹಿಡಿದಿಡುವಷ್ಟು ಶಕ್ತಿ ಬಂದಿದೆ..." ಎಂದು ಹೇಳುತ್ತಾ ಒಮ್ಮೆ ನಾಲಿಗೆಯನ್ನು ಬಿಗಿಯಾಗಿ ತುಟಿಗಳೆಡೆಯಲ್ಲಿ ಬಂಧಿಸಿದರು. ಮತ್ತು ಮುಂದುವರಿದರು: ಈಗ ಅಂಥಾದ್ದೇನಿಲ್ಲ. ಹೆದರಿದರೆ ಹೆದರಿಸುತ್ತಾರೆ, ಹೆದಸಿದರೆ ಹೆದರುತ್ತಾರೆ. ಲೋಕ ಹೀಗಿದೆ. ಹಾಗೆ ಹೆದರಿಸುವವನೇ ಸತ್ತು ಹೋದನಲ್ಲಾ? ಅವನ ಛೇಲಾಗಳ ಬಾಯಿಯೂ ಕಟ್ಟಿ ಹೋಯಿತು..." ಎಂದು ಮಾತು ನಿಲ್ಲಿಸಿ ಮತ್ತೆ ಅಸಹ್ಯದ ಮುಖ ಮಾಡಿಕೊಂಡು ಥೂ ಅಂದರು. ಪಕ್ಕವಾದ್ಯ ಛೀ ಅಂದಿತು!
ತಂಗಾಳಿ ಬೀಸುತ್ತಿತ್ತು. ಎದುರು ಜಲರಾಶಿ. ಸುತ್ತಲೂ ತೆಂಗಿನ ಮರಗಳ ಸಾಲು. ಅದು ಕೇರಳವೆನ್ನಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕು? ನೀಲೇಶ್ವರದ ಬೋಟ್‌ಹೌಸ್‌ನ ಮುಂದಿರುವ ಆಫೀಸಿನ ಹಜಾರದಲ್ಲಿ ದಂಪತಿಗಳು ಕುಳಿತಿದ್ದರು. ಬೆಂಗಳೂರಿನ ಧಗೆಯಿಂದ ಪಾರಾಗಿ ಕರಾವಳಿಯ ಕುಳಿರ್ಗಾಳಿಗೆ ಮೈಯೊಡ್ಡಿದ್ದರು.
ಸಲ್ವಾರ್ ಕಮೀಜ್ ಧರಿಸಿದ ಸುರೇಖಾ ಮತ್ತು ಕೆ ಜಿ ಗಟ್ಟಲೆ ಬಂಗಾರದ ಆಭರಣ ಧರಿಸಿದ್ದ ನಲವತ್ತರ ಹರೆಯದ ದೇವರಾಜ್ ಸಮಸ್ಯೆಯ ಮತ್ತೊಂದು ಮುಖವನ್ನು ನಮ್ಮ ಮುಂದೆ ಹರಡಿದ್ದು ಹೀಗೆ: "ಹೊಸಬರ ಜತೆ ನಟಿಸುತ್ತಿರುವ ನಮ್ಮ ರಾಧಿಕಾ ಹೆಸರು ಮಾಡಿದವರ ಜತೆ ಅಭಿನಯಿಸಬೇಕೆಂಬ ಆಸೆಯಿತ್ತು. ಹೀಗೆ ಯೋಚಿಸುತ್ತಿರುವಂತೆಯೇ ವಿಷ್ಣು ಸಾರ್ ಕಡೆಯಿಂದ ಫೋನ್ ಬಂತು..."


Click it and Unblock the Notifications











