twitter
For Quick Alerts
ALLOW NOTIFICATIONS
For Daily Alerts

ವಿಷ್ಣು, ರವಿಚಂದ್ರನ್ ಜತೆ ರಾಧಿಕಾ ಅಭಿನಯಿಸಲಿಲ್ಲ ಯಾಕೆ?

By * ಗಣೇಶ್ ಕಾಸರಗೋಡು

Next »

« Previous

Actress Radhika Kumaraswamy
ಇವರಿಬ್ಬರೂ ಸೇರಿ ಛೀ...ಥೂ ಅಂದದ್ದು ಯಾರಿಗೆ ಅಂತ ಎಲ್ಲರಿಗೂ ಗೊತ್ತು. ಮಂಗಳೂರಿನ ರೌಡಿಗಳಿಂದ ಬರುತ್ತಿರುವ ಬೆದರಿಕೆ ಕರೆಗಳ ಬಗ್ಗೆ ಅವರು ಫೂತ್ಕರಿಸುತ್ತಿದ್ದರು. ಸ್ವಲ್ಪ ತಡೆದು ದೇವರಾಜ್ ಮತ್ತೆ ಜಬರ್‌ದಸ್ತಿನಿಂದ ಮತ್ತು ಅಷ್ಟೇ ಆತ್ಮವಿಶ್ವಾಸದಿಂದ ಹೇಳಿದರು: ಮೊದಲಾಗಿದ್ದರೆ ಒಂಟಿಯಾಗಿದ್ದೆ. ಎಂಥಾ ರೌಡಿಸಂನ್ನು ಹೇಗೆ ಮಟ್ಟ ಹಾಕಬೇಕೆಂದು ನನಗೆ ಗೊತ್ತಿದೆ.

ಪಾಲಿಟಿಷಿಯನ್‌ಗಳ ಪರಿಚಯವಾದ ಮೇಲೆ ತುಂಬಾ ಸುಧಾರಿಸಿಕೊಂಡಿದ್ದೇನೆ. ಯಾರಾದರೂ ಆವಾಜ್ ಹಾಕಿದರೆ ಗಂಟಲು ಹಿಡಿದಿಡುವಷ್ಟು ಶಕ್ತಿ ಬಂದಿದೆ..." ಎಂದು ಹೇಳುತ್ತಾ ಒಮ್ಮೆ ನಾಲಿಗೆಯನ್ನು ಬಿಗಿಯಾಗಿ ತುಟಿಗಳೆಡೆಯಲ್ಲಿ ಬಂಧಿಸಿದರು. ಮತ್ತು ಮುಂದುವರಿದರು: ಈಗ ಅಂಥಾದ್ದೇನಿಲ್ಲ. ಹೆದರಿದರೆ ಹೆದರಿಸುತ್ತಾರೆ, ಹೆದಸಿದರೆ ಹೆದರುತ್ತಾರೆ. ಲೋಕ ಹೀಗಿದೆ. ಹಾಗೆ ಹೆದರಿಸುವವನೇ ಸತ್ತು ಹೋದನಲ್ಲಾ? ಅವನ ಛೇಲಾಗಳ ಬಾಯಿಯೂ ಕಟ್ಟಿ ಹೋಯಿತು..." ಎಂದು ಮಾತು ನಿಲ್ಲಿಸಿ ಮತ್ತೆ ಅಸಹ್ಯದ ಮುಖ ಮಾಡಿಕೊಂಡು ಥೂ ಅಂದರು. ಪಕ್ಕವಾದ್ಯ ಛೀ ಅಂದಿತು!

ತಂಗಾಳಿ ಬೀಸುತ್ತಿತ್ತು. ಎದುರು ಜಲರಾಶಿ. ಸುತ್ತಲೂ ತೆಂಗಿನ ಮರಗಳ ಸಾಲು. ಅದು ಕೇರಳವೆನ್ನಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕು? ನೀಲೇಶ್ವರದ ಬೋಟ್‌ಹೌಸ್‌ನ ಮುಂದಿರುವ ಆಫೀಸಿನ ಹಜಾರದಲ್ಲಿ ದಂಪತಿಗಳು ಕುಳಿತಿದ್ದರು. ಬೆಂಗಳೂರಿನ ಧಗೆಯಿಂದ ಪಾರಾಗಿ ಕರಾವಳಿಯ ಕುಳಿರ್ಗಾಳಿಗೆ ಮೈಯೊಡ್ಡಿದ್ದರು.

ಸಲ್ವಾರ್ ಕಮೀಜ್ ಧರಿಸಿದ ಸುರೇಖಾ ಮತ್ತು ಕೆ ಜಿ ಗಟ್ಟಲೆ ಬಂಗಾರದ ಆಭರಣ ಧರಿಸಿದ್ದ ನಲವತ್ತರ ಹರೆಯದ ದೇವರಾಜ್ ಸಮಸ್ಯೆಯ ಮತ್ತೊಂದು ಮುಖವನ್ನು ನಮ್ಮ ಮುಂದೆ ಹರಡಿದ್ದು ಹೀಗೆ: "ಹೊಸಬರ ಜತೆ ನಟಿಸುತ್ತಿರುವ ನಮ್ಮ ರಾಧಿಕಾ ಹೆಸರು ಮಾಡಿದವರ ಜತೆ ಅಭಿನಯಿಸಬೇಕೆಂಬ ಆಸೆಯಿತ್ತು. ಹೀಗೆ ಯೋಚಿಸುತ್ತಿರುವಂತೆಯೇ ವಿಷ್ಣು ಸಾರ್ ಕಡೆಯಿಂದ ಫೋನ್ ಬಂತು..."

Next »

« Previous

English summary
Kannada film journalist Ganesh Kasaragodu's write up on Kannada actress Radhika Kumaraswamy! The same artical published in his book "Off The Record". All about Radhika and Kumaraswamy relationship and more.
Thursday, October 20, 2011, 19:09
IIFA

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X