»   » ಐಟಿ ದಾಳಿಗೆ ತತ್ತರಿಸಿದ ‘ಮಂಗಳೂರು ಮಲ್ಲಿಗೆ’ ರಾಧಿಕಾ!

ಐಟಿ ದಾಳಿಗೆ ತತ್ತರಿಸಿದ ‘ಮಂಗಳೂರು ಮಲ್ಲಿಗೆ’ ರಾಧಿಕಾ!

Subscribe to Filmibeat Kannada


ಬೆಂಗಳೂರು : ಡಾಲರ್ಸ್‌ ಕಾಲನಿಯಲ್ಲಿ 13ಕೋಟಿ ರೂಪಾಯಿ ಮನೆ ಖರೀದಿಸಿ, ಸ್ಯಾಂಡಲ್‌ವುಡ್‌ ಮಂದಿ ಮೂಗು ಮೇಲೆ ಬೆಟ್‌ ಇಟ್ಟುಕೊಳ್ಳುವಂತೆ ಮಾಡಿದ್ದವರು; ರಾಧಿಕಾ ಮೇಡಂ. ಅವರ ಮನೆ ಮೇಲೆ, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಡಾಲರ್ಸ್‌ ಕಾಲನಿಯಲ್ಲಿ ಅವರು ಖರೀದಿಸಿದ್ದ ಹೊಸ ಮನೆ ಮೇಲೆ ಯಾರ ಕಣ್‌ ಬಿದ್ದೋ ಗೊತ್ತಿಲ್ಲ, ತೆರಿಗೆ ಅಧಿಕಾರಿಗಳ ಎದುರು ರಾಧಿಕಾ ತನ್ನ ಆದಾಯ, ದುಡಿಮೆ-ಗರಿಮೆಗಳನ್ನು ಹೇಳಬೇಕಾದ ಪರಿಸ್ಥಿತಿ ಬಂದಿದೆ.

ಬನಶಂಕರಿ ಮೂರನೇ ಹಂತದ ಕತ್ರಿಗುಪ್ಪೆಯಲ್ಲಿನ ರಾಧಿಕಾ ಮನೆ ಮೇಲಿನ ದಾಳಿ ಸಂದರ್ಭದಲ್ಲಿ, ಸುಮಾರು 3.5ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಈ ವಿಚಾರವನ್ನು ತಳ್ಳಿಹಾಕಿರುವ ರಾಧಿಕಾ, ಅಧಿಕಾರಿಗಳು ದಾಳಿ ಮಾಡಿದ್ದು ನಿಜ, ಕೆಲ ದಾಖಲೆಗಳನ್ನು ಮಾತ್ರ ವಶಪಡಿಸಿಕೊಂಡಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada