»   » ಅಭಿಷೇಕ್‌ಗೆ ಮೊದಲೇ ಮದ್ವೆಯಾಗಿತ್ತಾ?: ಹೊಸ ಕಿರಿಕ್‌!

ಅಭಿಷೇಕ್‌ಗೆ ಮೊದಲೇ ಮದ್ವೆಯಾಗಿತ್ತಾ?: ಹೊಸ ಕಿರಿಕ್‌!

Subscribe to Filmibeat Kannada


ಮುಂಬೈ : ಅಭಿಷೇಕ್‌ ಬಚ್ಚನ್‌ರ ಪ್ರೇಯಸಿ ಮತ್ತು ಪತ್ನಿ ಎಂದು ಗುರ್ತಿಸಿಕೊಂಡಿರುವ ಯುವತಿಯಾಬ್ಬಳು, ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಜುಹುನಲ್ಲಿರುವ ಅಮಿತಾಭ್‌ ನಿವಾಸ ಪ್ರತೀಕ್ಷಾದ ಎದುರು ಮುಂಬೈನ ರೂಪದರ್ಶಿ ಜಾಹ್ನವಿ ಕಪೂರ್‌, ತಮ್ಮ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬಹುಕಾಲದಿಂದಲೂ ನಾನು ಅಭಿಷೇಕ್‌ ಬಚ್ಚನ್‌ರನ್ನು ಪ್ರೀತಿಸುತ್ತಿದ್ದೆ. ಈಗಾಗಲೇ, ನಮ್ಮಿಬ್ಬರ ಮದುವೆಯಾಗಿದೆ. ಆದರೆ ಶುಕ್ರವಾರ ಸಂಜೆ ಐಶ್ವರ್ಯ ರೈ ಜೊತೆ ಸಪ್ತಪದಿ ತುಳಿಯಲು ಅಭಿ ಹೊರಟಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ಬೇಸರವಾಗಿದೆ ಎಂದು ಜಾಹ್ವವಿ ಕಪೂರ್‌ ಆರೋಪಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಜಾಹ್ನವಿ ಕಪೂರ್‌ ಮಾದಕ ವಸ್ತುಗಳ ವ್ಯಸನಿ. ಆತ್ಮಹತ್ಯೆ ಯತ್ನದ ಸಂದರ್ಭದಲ್ಲಿ ನಿದ್ರೆ ಮಾತ್ರೆಗಳನ್ನೂ ಸಹಾ ನುಂಗಿದ್ದಳು. ಮಾನಸಿಕವಾಗಿ ಗಲಿಬಿಲಿಗೊಂಡಿದ್ದಳು ಎನ್ನಲಾಗಿದೆ. ಆತ್ಮಹತ್ಯೆ ಯತ್ನದ ಹಿನ್ನೆಲೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಅಭಿಷೇಕ್‌ ಯಾಕೆ ಹೀಗೆ ಮಾಡಿದ?

ಸುದ್ದಿಗಾರರ ಜೊತೆ ಮಾತನಾಡಿದ ಜಾಹ್ನವಿ, ಕಳೆದ ಎರಡು ವರ್ಷಗಳಿಂದ ನಾನು ಮತ್ತು ಅಭಿಷೇಕ್‌ ಸಂಬಂಧಹೊಂದಿದ್ದೇವೆ. ಜುಹುನಲ್ಲಿ ಆಗಾಗ ಭೇಟಿಯಾಗುತ್ತಿದ್ದೆವು. ಪೋನ್‌ ನಂಬರ್‌ಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ಇ-ಮೇಲ್‌ನಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಕಳೆದ ವರ್ಷ ಕೆಲವು ಸ್ನೇಹಿತರ ಎದುರು ನಾವಿಬ್ಬರೂ ಮದುವೆಯಾದೆವು. ಈಗ ಅಭಿಷೇಕ್‌ ಯಾಕೆ ಹೀಗೆ ಮಾಡಿದರೋ ಗೊತ್ತಿಲ್ಲ ಎಂದರು.

ಈ ಪ್ರಕರಣದ ಹಿನ್ನೆಲೆ ಸಮಾಜವಾದಿ ಪಕ್ಷದ ನಾಯಕ ಮತ್ತು ಬಚ್ಚನ್‌ ಕುಟುಂಬದ ಆಪ್ತ ಅಮರ್‌ ಸಿಂಗ್‌ ನನಗೆ ಬೆದರಿಕೆಯಾಡ್ಡಿದ್ದಾರೆ ಎಂದು ಜಾಹ್ನವಿ ಆರೋಪಿಸಿದ್ದಾರೆ. ಈ ಬಗ್ಗೆ ಬಚ್ಚನ್‌ ಕುಟುಂಬ ಮೌನ ವಹಿಸಿದೆ.

(ಏಜನ್ಸೀಸ್‌)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada