»   » ಟೆನ್ನಿಸ್‌ ಕೃಷ್ಣ ‘ಗಲಾಟೆ ಮದುವೆ’

ಟೆನ್ನಿಸ್‌ ಕೃಷ್ಣ ‘ಗಲಾಟೆ ಮದುವೆ’

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ವಿಜಾಪುರ : ಹಾಸ್ಯ ಚಿತ್ರನಟ ಟೆನ್ನಿಸ್‌ ಕೃಷ್ಣ ತಮ್ಮ ಮದುವೆಯ ದಿನ ಕ್ಯಾಮರಾಮನ್‌ ಜೊತೆ ಜಗಳವಾಡಿದರು!

ಜೂನ್‌ 19ನೇ ತಾರೀಕು ಗುರುವಾರ ಮಠದ ಕಲ್ಯಾಣ ಮಂಟಪವೊಂದರಲ್ಲಿ ವೃತ್ತಿ ರಂಗಭೂಮಿ ಕಲಾವಿದೆ ದೀಪಾ ಹೆಗಡೆ ಎಂಬಾಕೆಯ ಜೊತೆ ಟೆನ್ನಿಸ್‌ ಕೃಷ್ಣ ಸರಳ ವಿವಾಹ ನಡೆಯಿತು. ಬಹುತೇಕ ಸಿನಿಮಾ ಮಂದಿಗೆ ಗುಟ್ಟಾಗಿದ್ದ ಈ ಮದುವೆಯ ಜಾಡು ಹತ್ತಿದ ಒಬ್ಬ ಕ್ಯಾಮರಾಮನ್‌ ಟೆನ್ನಿಸ್‌ ದಂಪತಿಗಳ ಫೋಟೋ ತೆಗೆಯಲು ಮುಂದಾದಾಗ, ಮಂಟಪದಿಂದ ಎದ್ದು ಬಂದ ಟೆನ್ನಿಸ್‌ ಕ್ಯಾಮರಾ ಕಸಿದುಕೊಂಡರು. ಫಿಲ್ಮ್‌ರೋಲನ್ನು ಕಿತ್ತು ಹರಿದುಹಾಕಿದರು.

ಮದುವೆ ಶಾಸ್ತ್ರ ಪೂರ್ತಿ ಮುಗಿದ ನಂತರ ಮತ್ತೆ ಫೋಟೋಗ್ರಫರ್‌ ಜೊತೆ ಟೆನ್ನಿಸ್‌ ಜಗಳ ತೆಗೆದರು. ನೀನು ತೆಗೆದಿರುವ ಕ್ಯಾಸೆಟ್ಟನ್ನು ಕೊಡು, ಅದಕ್ಕೆ ಎಷ್ಟು ಬೇಕೋ ದುಡ್ಡು ತಗೋ ಅಂತ ವ್ಯವಹಾರಕ್ಕಿಳಿದರು. ಅಷ್ಟರಲ್ಲಿ ಕ್ಯಾಮರಾಮನ್‌ ಸ್ನೇಹಿತರು ಬಂದು, ಅಲ್ಲಿಂದ ಆತನನ್ನು ಹೊರಕ್ಕೆ ಕರೆದುಕೊಂಡು ಹೋದರು.

ಮದುವೆಗೂ ಮುಂಚೆ ಹಲವಾರು ತಿಂಗಳುಗಳಿಂದ ವಿಜಾಪುರಕ್ಕೆ ಹೋಗಿ, ದೀಪಾ ಹೆಗಡೆಯನ್ನು ಟೆನ್ನಿಸ್‌ ಭೇಟಿಯಾಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಹೀಗಿದ್ದೂ, ಟೆನ್ನಿಸ್‌ ಕೃಷ್ಣ ಮದುವೆ ವಿಷಯ ಗಾಂಧಿನಗರಕ್ಕೆ ಗುಟ್ಟಾಗೇ ಇತ್ತು !

ಮಾಧ್ಯಮದವರನ್ನು ದೂರವಿಟ್ಟು ಮದುವೆಯಾಗುವುದು ಚಿತ್ರರಂಗದಲ್ಲಿ ಫ್ಯಾಷನ್‌ ಆಗುತ್ತಿದೆ ? ಹೊಳೆ ದಾಟಿದ ಮೇಲೆ ಅಂಬಿಗನ ಮಿಂಡ ಎನ್ನುವ ಗಾದೆಯ ಅರ್ಥ ಇದೇನಾ ?


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada