»   » ಕನ್ನಡೇತರ ಚಿತ್ರಗಳ ಮೇಲೆ ನಿರ್ಬಂಧ ಅನುಚಿತ -ಹಾಡುಗಾರ ಅಶ್ವಥ್‌

ಕನ್ನಡೇತರ ಚಿತ್ರಗಳ ಮೇಲೆ ನಿರ್ಬಂಧ ಅನುಚಿತ -ಹಾಡುಗಾರ ಅಶ್ವಥ್‌

Subscribe to Filmibeat Kannada

ಬಳ್ಳಾರಿ : ರಾಜ್ಯದಲ್ಲಿ ಕನ್ನಡೇತರ ಭಾಷೆಗಳ ಚಲನಚಿತ್ರಗಳ ಮೇಲೆ ನಿರ್ಬಂಧ ವಿಧಿಸುವುದು ಅನುಚಿತ. ಇಂತಹ ಯೋಚನೆಗಳು ಕಲೆಯ ಮೂಲಕಲ್ಪನೆಯನ್ನೇ ಬದಿಗೆ ಸರಿಸುತ್ತವೆ ಎಂದು ಹೆಸರಾಂತ ಸಂಗೀತ ನಿರ್ದೇಶಕ ಹಾಗೂ ಗಾಯಕ ಸಿ.ಅಶ್ವಥ್‌ ತಿಳಿಸಿದ್ದಾರೆ.

ಬಳ್ಳಾರಿಯ ದೊಡ್ಡನಗೌಡ ರಂಗಮಂದಿರದಲ್ಲಿ ‘ಗಾನಸುಧಾ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲೆಗೆ ಯಾವುದೇ ಜಾತಿ-ಭಾಷೆ-ಧರ್ಮಗಳ ಗಡಿಗಳಿರಬಾರದು. ಭಾವನಾತ್ಮಕತೆಯಿಂದ ಅನೇಕ ಪ್ರತಿಭಾವಂತ ಕಲಾವಿದರ ಸಾಧನೆಗೆ ಪ್ರಾದೇಶಿಕತೆಯ ಲಕ್ಷ್ಮಣರೇಖೆ ಎಳೆಯಬಾರದು ಎಂದರು.

ನಿರ್ಬಂಧ, ಕಾನೂನು ಮತ್ತು ನೀತಿ-ನಿಯಮಗಳ ಮೂಲಕ ಕನ್ನಡ ಚಿತ್ರೋದ್ಯಮವನ್ನು ಬೆಳೆಸಲು ಸಾಧ್ಯವಿಲ್ಲ. ಒಳ್ಳೆಯ ಗುಣಮಟ್ಟದ ಚಿತ್ರಗಳನ್ನು ನೀಡಿ, ಪ್ರೇಕ್ಷಕರನ್ನು ಆಕರ್ಷಿಸಬೇಕು. ಈ ನಿಟ್ಟಿನಲ್ಲಿ ನಾಡಿನ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್‌, ಸಿದ್ದಲಿಂಗಯ್ಯ ಮತ್ತಿತರರ ಚಿತ್ರಗಳು ಉತ್ತರ ಸೂಚಿಸುತ್ತವೆ ಎಂದು ಅಶ್ವಥ್‌ ಹೇಳಿದರು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada