ತನ್ನನಂ ತನ್ನನಂ... ರವೀಂದ್ರ ಪಶ್ಚಾತ್ತಾಪಂ!!!

By * ಚಿತ್ರಗುಪ್ತ

ಭಾಷೆ ಬಾರದವರನ್ನ ಕನ್ನಡಕ್ಕೆ ಕರೆತಂದರೆ, ಅದರಲ್ಲೂ ಅವರು ಒಂದು ಹಂತಕ್ಕೆ ಉದ್ಧಟತನದಿಂದ ಕೂಡಿದ್ದರೆ ಅಂಥವರ ಜೊತೆ ಏಗುವುದು ಎಷ್ಟು ಕಷ್ಟ ಎನ್ನುವುದು ಕೊನೆಗೂ ನಿರ್ದೇಶಕ ರವೀಂದ್ರ ಅವರಿಗೆ ಗೊತ್ತಾಗಿದೆ. ಸಾಕಪ್ಪಾ ಸಾಕು ಈ ಕರೀಷ್ಮಾ ತನ್ನಾ ಸಹವಾಸ ಎಂದು ಅವರು ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ!

'ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರದಲ್ಲಿ ನಾಯಕಿಯಾಗಲು ಆಫರ್ ಕೊಟ್ಟ ರವೀಂದ್ರ, ಈಗ ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಕತೆ ಹೇಳುವಾಗ ಎಲ್ಲಕ್ಕೂ ಸಹಿ ಹಾಕಿದ ಕರೀಷ್ಮಾ ಈಗ ಪ್ರೆಸ್‌ಮೀಟ್ ಕರೆದು ನಿರ್ದೇಶಕರ ಮೇಲೆ ಹರಿಹಾಯುವ ಮಟ್ಟಕ್ಕೆ ಬೆಳೆದಿದ್ದಾರೆ. ತಾನು ಯಾರಿಗೂ ಕಿಸ್ ಕೊಟ್ಟಿಲ್ಲ ಎಂದು ಎದೆ ಮುಟ್ಟಿ ಪ್ರಮಾಣ ಮಾಡುವ ತನ್ನಾ, ತನ್ನ ಪಾಲಿಗೆ ಕೊಟ್ಟಿರುವ ಪಾತ್ರ ತೀರಾ ಕಳಪೆಯಾಗಿದೆ. ಆರರಲ್ಲಿ ಒಬ್ಬ ನಾಯಕಿಯಾಗಿ ಮಾಡಿ, ಮೋಸ ಮಾಡಿದ್ದಾರೆ ಎಂದು ಕೋಪ-ತಾಪ ಮಾಡಿಕೊಂಡಿದ್ದಾರೆ ತನ್ನಾ!

ಇಲ್ಲಿ ಆಗಿದ್ದು ಇಷ್ಟೇ.. ರವೀಂದ್ರ ಕತೆ ಹೇಳುವಾಗ ಅದು ಕರೀಷ್ಮಾಗೆ ಸರಿಯಾಗಿ ಅರ್ಥ ಆಗಿಲ್ಲ. ಕಾರಣ ಭಾಷೆ ಮತ್ತು ಭಾವನೆಗಳ ಕೊರತೆ. ಕನ್ನಡ ಸಿನಿಮಾ ಅಂದರೆ ಹಾಗಿರುತ್ತೆ, ಅಲ್ಲಿ ತನಗೆ ಸಿಕ್ಕಾಪಟ್ಟೆ ಬಿಲ್ಡಪ್ ಸಿಗುತ್ತೆ ಎಂಬ ಆಸೆಯಿಂದ ಬಂದ ತನ್ನಾ, ಕೊನೆಗೆ ತನಗೆ ಸಿಕ್ಕಿದ್ದು ಆರನೇ ಒಂದು ಭಾಗದ ಪಾತ್ರ ಎಂದು ಗೊತ್ತಾದಾಗ ಇಷ್ಟೆಲ್ಲಾ ಕ್ಯಾತೆ ತೆಗೆದಿದ್ದಾರೆ! ಇನ್ನಾದರೂ ನಮ್ಮ ನಿರ್ಮಾಪಕ-ನಿರ್ದೇಶಕರು ಪರಭಾಷಾ ನಟಿಯನ್ನು ಕರೆಸಿ, ಮಣೆ ಹಾಕುವುದನ್ನು ಬಿಟ್ಟರೆ ಇಂಥ ಪ್ರಮಾದ-ವಿನೋದಗಳು ಕಡಿಮೆಯಾದೀತು!

More from Filmibeat

English summary
Actually what happened in the sets of 'I am Sorry Mathe Banni Preethisona'. Why actress Karishma Tanna not attending movie promotion. Previously she has denied sharing a kissing scene with Prem in the film. She has cleared that there is no lip lock scene in the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X